ಭಾರತೀಯ ರಿಸರ್ವ್ ಬ್ಯಾಂಕ್ - 
ಭಾರತೀಯ ರಿಸರ್ವ್ ಬ್ಯಾಂಕ್ ಭಾರತದ ಕೇಂದ್ರೀಯ ಬ್ಯಾಂಕು.  ಕೇಂದ್ರೀಯ ಬ್ಯಾಂಕ್ ಎಂದರೆ ಸರ್ಕಾರದ ಬ್ಯಾಂಕ್. ಎಲ್ಲ ಹಣಕಾಸಿನ ವ್ಯವಹಾರ, ನಿಯಂತ್ರಣ, ನೋಟುನಾಣ್ಯಗಳ ಮುದ್ರಣ/ಟಂಕಣ, ನಿಧಿಗಳ ಸಂಗ್ರಹಣ ಮೊದಲಾದ ಬಹುಮುಖ ಕಾರ್ಯಗಳನ್ನು ಸರ್ಕಾರದ ಪರವಾಗಿ ನಿರ್ವಹಿಸುವ ಬ್ಯಾಂಕ್. ದೇಶದ ಎಲ್ಲ  ಹಣಕಾಸಿನ, ವ್ಯಾಪಾರವಹಿವಾಟುಗಳ ನಿಯಂತ್ರಣ, ಮೇಲ್ವಿಚಾರಣೆ ಮೊದಲಾದವುಗಳನ್ನು ಮಾಡುವ ಬ್ಯಾಂಕ್. 

ಹಿನ್ನೆಲೆ : 17ನೇ ಮತ್ತು 18ನೇ ಶತಮಾನಗಳಲ್ಲಿ ಜಗತ್ತಿನ ಎಲ್ಲ ದೇಶಗಳು ಕೇಂದ್ರೀಯ ಬ್ಯಾಂಕಿನ ಅವಶ್ಯಕತೆಯನ್ನು ಮನಗಂಡವು. ದೇಶದಲ್ಲಿನ ಹಣಕಾಸಿನ ವ್ಯವಹಾರಗಳಲ್ಲಿನ ಗೋಜಲಾದ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರೀಯ ಬ್ಯಾಂಕ್‍ಗಳು ಅತ್ಯವಶ್ಯಕವೆಂಬುದನ್ನು ಎಲ್ಲ ದೇಶಗಳು ಕಂಡುಕೊಂಡವು.  ಹಾಗೆಯೇ ಈ ಕಾಲದಲ್ಲೇ ಎಲ್ಲ ದೇಶಗಳಲ್ಲಿ ಕೇಂದ್ರೀಯ ಬ್ಯಾಂಕುಗಳು ಸ್ಥಾಪಿತವಾದವು. 

ಭಾರತದಲ್ಲಿ ಆಧುನಿಕ ಬ್ಯಾಂಕನ್ನು ತಂದವರು ಬ್ರಿಟಿಷರು. ತಮ್ಮ ಅನುಕೂಲಕ್ಕಾಗಿ ಬ್ಯಾಂಕನ್ನು ಭಾರತಕ್ಕೆ ತಂದರೂ ದೇಶೀಯರು ಅದನ್ನು ತಮ್ಮದಾಗಿಸಿಕೊಂಡು ಮುಖ್ಯವಾಗಿ ರಾಜರಾಡಳಿತವಿರುವ ರಾಜ್ಯಗಳಲ್ಲಿ ತಮ್ಮದೇ ಆದ ಪ್ರತ್ಯೇಕ ಬ್ಯಾಂಕುಗಳನ್ನು ಸ್ಥಾಪಿಸಿಕೊಂಡರು. 

ಪ್ರಾಚೀನ ಭಾರತದಲ್ಲಿ ಬ್ಯಾಂಕ್ ಎನ್ನುವ ಪರಿಕಲ್ಪನೆ ಇಲ್ಲದಿದ್ದರೂ ಬ್ಯಾಂಕಿನ ಕೆಲವು ವ್ಯವಹಾರಗಳನ್ನು ಪುರಾಣ, ಇತಿಹಾಸ ಕಾಲದಿಂದಲೂ ನಮ್ಮಲ್ಲಿ ವಣಿಕ ಶ್ರೇಷ್ಠರು ಮಾಡುತ್ತಿದ್ದರು. ಪ್ರಾಚೀನ ಕಾಲದಲ್ಲಿ ಅಂದರೆ ಬೌದ್ಧರ ಪ್ರಾಬಲ್ಯ, ಪ್ರಭಾವವು ಭಾರತದಲ್ಲಿ ಹೆಚ್ಚಾಗಿ ಹರಡಿದ್ದ ಕಾಲದಲ್ಲಿ "ಸಾರ್ಥ" ಎನ್ನುವ ಸಂಚಾರಿ ವಣಿಕರ ತಂಡಗಳು ಹಾಗು ರಾಜಧಾನಿಗಳಲ್ಲಿನ ವಣಿಕ ಶ್ರೇಷ್ಠರುಗಳು ಬ್ಯಾಂಕಿನ ಕೆಲವು ಚಟುವಟಿಕೆಗಳನ್ನು ನಡೆಸುತ್ತಿದ್ದರು. ಸಾಲ ಕೊಡುವುದು, ಸಾಲ ವಸೂಲಿ ಮಾಡುವುದು, ಸಾಲ ಕೊಳ್ಳುವುದು, ಎರಡು ವಿಭಿನ್ನ ಪ್ರದೇಶಗಳಲ್ಲಿನ ವಣಿಕರ ಮಧ್ಯೆ ಹಣಕಾಸಿನ ವ್ಯವಹಾರ, ಹಣ ರವಾನೆಗಳಿಗೆ ಹುಂಡಿಗಳನ್ನು ಬಳಸುತ್ತಿದ್ದುದು ಇತ್ತು. 

ಆದರೆ ಆಧುನಿಕ ಬ್ಯಾಂಕಿನ ಉಗಮವಾದುದು ಕಲ್ಕತ್ತ (ಇಂದಿನ ಕೊಲ್ಕತ್ತ) ದಲ್ಲಿ. ಮೆಸರ್ಸ್ ಅಲೆಕ್ಜಾóಂಡರ್ ಮತ್ತು ಕಂಪನಿ ಹಾಗು ಮೆಸರ್ಸ್ ಫಗ್ರ್ಯೂಸನ್ ಮತ್ತು ಕಂಪನಿಗಳು ಬ್ಯಾಂಕಿಂಗ್ ಪ್ರಾರಂಭಿಸಿದರೂ ಅದನ್ನು ತಮ್ಮ ಇತರ ವ್ಯಾಪಾರದ ಜತೆಗೆ ಮಿಶ್ರ ಮಾಡಿಕೊಂಡು ನಡೆಸಿ ವಿಫಲರಾದರು. ದಿ ಬ್ಯಾಂಕ್ ಆಫ್ ಹಿಂದೂಸ್ಥಾನ್ ಎಂಬುದು ಬ್ರಿಟಿಷರ ನೇತೃತ್ವದಲ್ಲಿ ಪ್ರಾರಂಭವಾದ ಮೊದಲ ಭಾರತದ ಆಧುನಿಕ ಬ್ಯಾಂಕ್.  ಆದರೆ ಇದು 1832ರಲ್ಲಿ ಆರ್ಥಿಕ ಕುಸಿತದ ಭಾರವನ್ನು ತಾಳಲಾರದೆ ಕುಸಿಯಿತು. ಈ ಮಧ್ಯೆ ಆಗಿನ ಭಾರತ ಸರ್ಕಾರವು ಬ್ಯಾಂಕಿನ ಅವಶ್ಯಕತೆಗೆ ಬಗ್ಗೆ ಎಚ್ಚೆತ್ತು 1809ರಲ್ಲಿ ಬ್ಯಾಂಕ್ ಆಫ್ ಬೆಂಗಾಲ್ ಎಂಬ ಬ್ಯಾಂಕಿಂಗ್ ಸಂಸ್ಥೆಯನ್ನು ಸ್ಥಾಪಿಸಿತು.  ನಂತರ 1840ರಲ್ಲಿ ಬ್ಯಾಂಕ್ ಆಫ್ ಬಾಂಬೆ ಹಾಗು 1843ರಲ್ಲಿ ಬ್ಯಾಂಕ್ ಆಫ್ ಮದ್ರಾಸ್ ಪ್ರಾರಂಭವಾದವು.  ಈ ಮೂರು ಬ್ಯಾಂಕುಗಳನ್ನು ಒಟ್ಟಾರೆಯಾಗಿ ಅಧ್ಯಕ್ಷಾಡಳಿತ ಬ್ಯಾಂಕುಗಳು ಎಂದು ಕರೆಯುತ್ತಿದ್ದರು.  1868 ರಲ್ಲಿ ಬ್ಯಾಂಕ್ ಆಫ್ ಬಾಂಬೆಯು ಸ್ಥಗಿತಗೊಂಡು ಮುಚ್ಚಿಹೋಗಿ ಮತ್ತೆ ಅದೇ ವರ್ಷದಲ್ಲಿ ಪುನಃ ಪ್ರಾರಂಭವಾಯಿತು. ಬ್ಯಾಂಕ್ ಆಫ್ ಬೆಂಗಾಲ್‍ಗೆ 1823ರಲ್ಲಿ ಸರ್ಕಾರದ ಪರವಾಗಿ ನೋಟು, ನಾಣ್ಯಗಳ ಮುದ್ರಣದ ಅಧಿಕಾರವನ್ನು ನೀಡಲಾಯಿತು. ನಂತರ ಸ್ವದೇಶಿ ಆಂದೋಲನದ ಫಲವಾಗಿ ದೇಶೀಯ ಬ್ಯಾಂಕುಗಳು ಪ್ರಾರಂಭವಾಗತೊಡಗಿದವು. 
1920ರಲ್ಲಿ ಸರ್ಕಾರವು ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾ ಕಾಯಿದೆ, 1920ನ್ನು ಜಾರಿಗೆ ತಂದಿತು. ಈ ಬ್ಯಾಂಕು 27-01-1921ರಿಂದ ಕಾರ್ಯಾರಂಭ ಮಾಡತೊಡಗಿತು. ಆಗ್ಗೆ ಇದ್ದ ಮೂರೂ ಅಧ್ಯಕ್ಷಾಡಳಿತ ಬ್ಯಾಂಕುಗಳನ್ನು (ಬ್ಯಾಂಕ್ ಆಫ್ ಬಾಂಬೆ, ಬ್ಯಾಂಕ್ ಆಫ್ ಬೆಂಗಾಲ್ ಮತ್ತು ಬ್ಯಾಂಕ್ ಆಫ್ ಮದ್ರಾಸ್) ಇಂಪೀರಿಯಲ್ ಬ್ಯಾಂಕ್‍ನಲ್ಲಿ ವಿಲೀನಗೊಳಿಸಲಾಯಿತು. ನಂತರ 1955ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾಯಿದೆ, 1955 ಜಾರಿಗೆ ಬಂದಿತು. ಅದರ ಅನ್ವಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾರಂಭವಾಯಿತು.  ಆಗ ಇದ್ದ ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾ ಇದರಲ್ಲಿ ವಿಲೀನಗೊಂಡಿತು.  ನಂತರ 1959ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಅಂಗಸಂಸ್ಥೆಗಳಾದ ಬ್ಯಾಂಕ್ಸ್) ಕಾಯಿದೆ, 1959ನ್ನು ಜಾರಿಗೆ ತರಲಾಯಿತು. ಈ ಕಾಯಿದೆಯ ಅನ್ವಯ ರಾಜರಾಡಳಿತ ಪ್ರದೇಶಗಳಲ್ಲಿದ್ದ ಏಳು ಬ್ಯಾಂಕುಗಳನ್ನು ಇದರ ಏಳು ಅಂಗ ಸಂಸ್ಥೆ ಬ್ಯಾಂಕುಗಳನ್ನಾಗಿ ಮಾಡಲಾಯಿತು. ಇದರಿಂದ ಸ್ಟೇಟ್ ಬ್ಯಾಂಕಿನ ವ್ಯಾಪ್ತಿಯು ದೇಶದಾದ್ಯಂತವಾಗಿ ಹರಡಿ ಅತಿ ದೊಡ್ಡ ಬ್ಯಾಂಕ್ ಆಯಿತು. ಆಗಲೇ ಅಂದರೆ 1959ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾಯಿದೆಯ ತಿದ್ದುಪಡಿಯೂ ಆಯಿತು.  ಈ ಮಧ್ಯೆ 1929 ಹಾಗು 1931ರಲ್ಲಾದ ಭಾರೀ ವ್ಯಾಪಾರ ಕುಸಿತ, ಆರ್ಥಿಕ ಕುಸಿತಗಳಿಂದ ಬ್ಯಾಂಕಿಂಗ್ ಕ್ಷೇತ್ರದ ಅಭಿವೃದ್ಧಿಯು ಕುಂಠಿತವಾಯಿತು. ಈ ವಿಷಮ ಪರಿಸ್ಥಿತಿಯಲ್ಲಿ ಕೇಂದ್ರೀಯ ಬ್ಯಾಂಕಿನ ಅಸ್ತಿತ್ವ ತುಂಬಾ ಅವಶ್ಯಕವಾಗಿತ್ತು.
ಪ್ರಾರಂಭ : ದೇಶದಲ್ಲಿ ಕೇಂದ್ರೀಯ ಬ್ಯಾಂಕು ಬಹಳ ಅವಶ್ಯಕವೆನ್ನುವ ಚರ್ಚೆ, ವಾದಗಳು 1926ರ ಮುಂಚಿನಿಂದಲೇ ಇದ್ದರೂ ಇದು ಒಂದು ನಿರ್ದಿಷ್ಟ ರೂಪ ತಾಳಿದ್ದು 1926ರಲ್ಲಿ ಸ್ಥಾಪಿತವಾದ ರಾಯಲ್ ಆಯೋಗದಿಂದ. ಭಾರತೀಯ ನಾಣ್ಯ/ನೋಟು ಮತ್ತು ಹಣಕಾಸು ಬಗ್ಗೆ ರಚಿತವಾದ ಈ ಆಯೋಗವು ದೇಶಕ್ಕೆ ಒಂದು ಕೇಂದ್ರೀಯ ಬ್ಯಾಂಕು ಅವಶ್ಯಕವೆಂದು ಹೇಳಿ ಆ ಬಗ್ಗೆ ಶಿಫಾರಸ್ಸು ಮಾಡಿತ್ತು. ಆದರೆ ಈ ಆಯೋಗವು ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಯÀನ್ನು ಕೇಂದ್ರೀಯ ಬ್ಯಾಂಕನ್ನಾಗಿ ಮಾಡುವುದರ ಬಗ್ಗೆ ವಿರೋಧವನ್ನು ವ್ಯಕ್ತಪಡಿಸಿತ್ತು. 25-01-1927ರಂದು ಈ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕಾರಕ್ಕಾಗಿ ಮಂಡಿಸಿದರೂ ಸಂವಿಧಾನದ ಕೆಲವು ಕಾರಣಗಳಿಂದಾಗಿ ಕೈಬಿಡಲಾಯಿತು. ಈ ಮುಂಚೆ 1914ರಲ್ಲಿ ಚೇಂಬರ್ಲಿನೆ ಆಯೋಗ ಮೊದಲಾದವು ವರದಿಯನ್ನು ಸಲ್ಲಿಸಿದ್ದವು. ಬ್ರಿಟಿಷ್ ಸರ್ಕಾರವು ನೇಮಿಸಿದ್ದ ರಾಯಲ್ ಆಯೋಗವು 1924-25ರಲ್ಲಿ ಭಾರತಕ್ಕೆ ಭೇಟಿ ಕೊಟ್ಟು ಭಾರತೀಯ ನೋಟು/ನಾಣ್ಯ ಮತ್ತು ಹಣಕಾಸು ಬಗ್ಗೆ ಅಧ್ಯಯನ ಮಾಡಿ ವರದಿ ಮಾಡುವುದಾಗಿತ್ತು. ಆಗ ಆ ಆಯೋಗದಿಂದ ಒಂದು ಪ್ರಶ್ನಾವಳಿ ಪಟ್ಟಿಯನ್ನು ತಯಾರು ಮಾಡಿ ಹಲವಾರು ದೊಡ್ಡ ದೊಡ್ಡ ವಿದ್ವಾಂಸರು, ಆರ್ಥಿಕ ತಜ್ಞರು ಮೊದಲಾದವರಿಗೆ ನೀಡಿ ಅವರಿಂದ ಉತ್ತರವನ್ನು ಅಪೇಕ್ಷಿಸಿತ್ತು. ಹಾಗೆ ಉತ್ತರಿಸಿದವರಲ್ಲಿ ಅಂಬೇಡ್ಕರ್ ಸಹ ಒಬ್ಬರು. ಈ ರಾಯಲ್ ಆಯೋಗದ ಅಧ್ಯಕ್ಷರಾಗಿ ಹಿಲ್ಟನ್ ಯಂಗ್ ಎಂಬುವರು ನೇತೃತ್ವವನ್ನು ವಹಿಸಿಕೊಂಡಿದ್ದರು. ಹೀಗಾಗಿ ಇದು ಹಿಲ್ಟನ್ ಯಂಗ್ ಕಮಿಷನ್ ಎಂದೇ ಹೆಸರಾಗಿದೆ.  ಅದರಲ್ಲಿನ ನಾಲ್ಕೈದು ಜನರನ್ನು ಬಿಟ್ಟರೆ ಇದ್ದ 10 ಜನರಲ್ಲಿ ಉಳಿದವರು ಬ್ರಿಟಿಷರು. ಈ ಆಯೋಗಕ್ಕೆ ಇಬ್ಬರು ಕಾರ್ಯದರ್ಶಿಗಳಿದ್ದರು ಅವರಲ್ಲಿ ಒಬ್ಬರು ಅಯ್ಯಂಗಾರ್ ಎನ್ನುವವರು ಭಾರತೀಯರು. ಈ ಆಯೋಗದ ಶಿಫಾರಸ್ಸಿನ ಕಾರಣದಿಂದ 1933ರಲ್ಲಿ ಇದರ ಮಸೂದೆಯನ್ನು ಪುನಃ ಸಂಸದಿನಲ್ಲಿ ಅಂಗೀಕಾರಕ್ಕಾಗಿ ಮಂಡಿಸಲಾಯಿತು.  ದಿನಾಂಕ 6-03-1934 ರಂದು ಸಂಸತ್ತಿನಲ್ಲಿ ಅಂಗೀಕಾರವಾಗಿ ಹೊರ ಬಂದಿತು. ಆ ನಂತರÀ ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ, 1935 ಜಾರಿಗೆ ಬಂತು. ಭಾರತೀಯ ರಿಸರ್ವ್ ಬ್ಯಾಂಕ್ ದಿನಾಂಕ 01-04-1935ರಿಂದ ಕಾರ್ಯಾರಂಭ ಮಾಡತೊಡಗಿತು. 

ರಿಸರ್ವ್ ಬ್ಯಾಂಕ್ ಸ್ಥಾಪನೆಯಾದಾಗ ಅದರ ಷೇರು ಬಂಡವಾಳವು ಐದು ಕೋಟಿಯಾಗಿದ್ದು ಷೇರುಗಳು ನೂರು ರೂ.ಗಳ ಮುಖಬೆಲೆಯವಾಗಿದ್ದವು. ಸರ್ಕಾರವು ಸುಮಾರು ರೂ.220,000/- ಬೆಲೆಯ ಷೇರುಗಳನ್ನು ಹೊಂದಿತ್ತು. ಹೀಗೆ ರಿಸರ್ವ್ ಬ್ಯಾಂಕ್‍ನ ಸ್ಥಾಪನೆಗೆ ಕಾರಣವಾದ ರಾಯಲ್ ಆಯೋಗ (ಹಿಲ್ಟನ್ ಯಂಗ್ ಆಯೋಗ)ದ ಸದಸ್ಯರು:
1. 	ಈ. ಹಿಲ್ಟನ್ ಯಂಗ್, ಅಧ್ಯಕ್ಷ. 
2. 	ಆರ್. ಎನ್. ಮುಖರ್ಜಿ
3. 	ನಾರ್ಕಾಟ್ ವಾರ್ರೆನ್ 
4. 	ಆರ್. ಎ. ಮಂತ್ 
5. 	ಎಮ್. ಬಿ. ದಾದಾಭಾಯ್ 
6. 	ಹೆನ್ರಿ ಸ್ಟ್ರಾಕೋಶ್, 
7. 	ಅಲೆಕ್ಸ್ ಆರ್. ಮುರ್ರೆ. 
8. 	ಪುರುಷೋತ್ತಮದಾಸ್ ಥಾಕುರ್‍ದಾಸ್  
9. 	ಜೆ. ಸಿ. ಕೋಯಾಜೀ 
10. 	ಡಬ್ಲ್ಯೂ. ಈ. ಪ್ರೆಸ್ಟನ್	
11	ಕಾರ್ಯದರ್ಶಿಗಳಾದ ಜಿ.ಹೆಚ್. ಬಾಕ್ಸಟರ್ ಮತ್ತು ಎ. ಅಯ್ಯಂಗಾರ್ 

	1935ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪಿಸಿದುದರ ಮೂಲೋದ್ದೇಶ ಈ ಕೆಳಗಿನ ಕಾರ್ಯಗಳನ್ನು ಮಾಡುವುದಾಗಿತ್ತು. 

ನೋಟುಗಳನ್ನು ಮುದ್ರಿಸುವುದರ ನಿಯಂತ್ರಣ ಮತ್ತು ನಿರ್ವಹಣೆ.

ಹಣಕಾಸಿನ ದೃಢತೆಯನ್ನು ಪಡೆಯಲು ನಿಧಿಗಳನ್ನು ಸ್ಥಾಪಿಸಲು ಮತ್ತು ಹೊಂದಲು ಯತ್ನಿಸುವುದು.
ರಾಷ್ಟ್ರದಲ್ಲಿನ ಒಟ್ಟಾರೆ ಋಣ ಮತ್ತು ನೋಟುನಾಣ್ಯಗಳ ವ್ಯವಸ್ಥೆಯನ್ನು ದೇಶದ ಅನುಕೂಲಕ್ಕೆ ತಕ್ಕಂತೆ ರೂಪಿಸುವುದು, ನಿರ್ವಹಿಸುವುದು.

ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಯಾಗುವುದರ ಮೊದಲು ಇದರ ಕಾರ್ಯಗಳು ಹಲವೆಡೆ ಹಂಚಿಹೋಗಿದ್ದವು. ಸರ್ಕಾರದ ಹಣಕಾಸಿನ/ಕರೆನ್ಸಿಯ ನಿಯಂತ್ರಕ ಕಛೇರಿಯಿಂದ ಮತ್ತು ಸರ್ಕಾರಿ ಖಾತೆಗಳ ನಿರ್ವಹಣೆ ಮತ್ತು ಸಾರ್ವಜನಿಕ ಸಾಲ ವಿಭಾಗಗಳನ್ನು ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾಗಳಿಂದ ರಿಸರ್ವ್ ಬ್ಯಾಂಕ್ ತನ್ನ ಆಡಳಿತಕ್ಕೆ ತೆಗೆದುಕೊಂಡಿತು. ಆಗ್ಗೆ ಕಲ್ಕತ್ತ, ಬೊಂಬಾಯಿ, ಮದ್ರಾಸು, ರಂಗೂನ್, ಕರಾಚಿ, ಲಾಹೋರ್ ಮತ್ತು ಕಾನ್‍ಪುರ್‍ಗಳಲ್ಲಿದ್ದ ಕರೆನ್ಸಿ ಕಛೇರಿಗಳು ರಿಸರ್ವ್ ಬ್ಯಾಂಕಿನ ವಶಕ್ಕೆ ಬಂದಮೇಲೆ ನೋಟು, ನಾಣ್ಯಗಳ ಮುದ್ರಣ/ಟಂಕಣ ಕಛೇರಿಗಳಾಗಿ ಪರಿವರ್ತಿತವಾದವು.  ಬೊಂಬಾಯಿ, ದೆಹಲಿ, ಕಲ್ಕತ್ತ, ಮದ್ರಾಸ್ ಮತ್ತು ರಂಗೂನ್‍ಗಳಲ್ಲಿ ಬ್ಯಾಂಕಿಂಗ್ ವಿಭಾಗವನ್ನು ತೆರೆಯಲಾಯಿತು. 1937ರಲ್ಲಿ ರಂಗೂನ್ (ಮೈಯನ್‍ಮಾರ್) ಭಾರತ ಸಂವಿಧಾನದಿಂದ ಪ್ರತ್ಯೇಕವಾಯಿತು. ಆದರೂ ಭಾರತೀಯ ರಿಸರ್ವ್ ಬ್ಯಾಂಕ್‍ವು ಅದಕ್ಕೂ ಕೇಂದ್ರೀಯ ಬ್ಯಾಂಕ್‍ನ ಕಾರ್ಯವನ್ನು ಮುಂದುವರೆಸಿತು.  1947ರಲ್ಲಿ ಜಪಾನ್ ರಂಗೂನನ್ನು ತನ್ನ ವಶಕ್ಕೆ ತೆಗೆದುಕೊಂಡಾಗ ರಿಸರ್ವ್ ಬ್ಯಾಂಕ್ ತನ್ನ ಅಧಿಪತ್ಯವನ್ನು ಬಿಟ್ಟುಕೊಟ್ಟಿತು.  1948ರಲ್ಲಿ ಭಾರತ ಪಾಕಿಸ್ಥಾನಗಳು ಬೇರೆಯಾದಮೇಲೆ ಪಾಕಿಸ್ಥಾನದÀಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‍ದ ವ್ಯಾಪ್ತಿ ಹೋಗಿ ಅದರ ಬದಲು ಪಾಕಿಸ್ಥಾನ ರಿಸರ್ವ್ ಬ್ಯಾಂಕ್ ಸ್ಥಾಪನೆಯಾಯಿತು. 

ರಿಸರ್ವ್ ಬ್ಯಾಂಕ್ ಮೂಲತಃ ಷೇರುದಾರರ ಬ್ಯಾಂಕಾಗಿಯೇ ಸ್ಥಾಪಿತವಾಯಿತು. ಅನೇಕ ಬ್ರಿಟಿಷ್ ಗಣ್ಯರು ಇದರ ಷೇರುದಾರರಾಗಿದ್ದರು. ಆದರೆ 01-01-1949 ರಂದು ಭಾರತೀಯ ರಿಸರ್ವ್ ಬ್ಯಾಂಕ್‍ವನ್ನು ರಾಷ್ಟ್ರೀಕರಣಗೊಳಿಸಲಾಯಿತು. ಅದೇ ಸಮಯದಲ್ಲಿ ಬ್ಯಾಂಕ್ ಆಫ್ ಇಂಗ್ಲೆಂಡ್ ಸಹ ರಾಷ್ಟ್ರೀಕರಣಗೊಂಡಿತ್ತು. 

ಮೊಟ್ಟ ಮೊದಲಿಗೆ ರಿಸರ್ವ್ ಬ್ಯಾಂಕ್ ತನ್ನ ಮೊದಲ ಕಛೇರಿಯನ್ನು ಬೊಂಬಾಯಿಯ ಬ್ಯಾಂಕ್ ರಸ್ತೆಯಲ್ಲಿ ಪ್ರಾರಂಭಿಸಿತು. ಆಗಿದ್ದ ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಕಛೇರಿಯ ಕಟ್ಟಡದಲ್ಲಿ ತನ್ನ ಕಛೇರಿಯನ್ನು ಸ್ಥಾಪಿಸಿ ಕಾಯಾರಂಭಮಾಡಿತು. ಮೊದಲು ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿದ್ದ ಡಬ್ಲ್ಯೂ. ಟಿ. ಮ್ಯಾಕ್ ಕಲುಮ್ ಎಂಬಾತನು ಇಲ್ಲಿಗೆ ಬಂದು ಸುಮಾರು 180 ಸಿಬ್ಬಂದಿಯೊಡನೆ ಹೊಸದಾಗಿ ಸ್ಥಾಪಿತವಾದ ರಿಸರ್ವ್ ಬ್ಯಾಂಕಿನ ಕೆಲಸ,ಕಾರ್ಯಗಳನ್ನು ನಿರ್ವಹಿಸಿದನು. ಮೊದಲಿಗೆ ರಿಸರ್ವ್ ಬ್ಯಾಂಕಿಗೆ ಶಾಖೆಗಳಿರಲಿಲ್ಲ. ಆದರೆ ಅದು ತನ್ನ ಕೆಲಸ-ಕಾರ್ಯಗಳನ್ನು ದೇಶದಾದ್ಯಂತ ನಿರ್ವಹಿಸಲು ಆಗ್ಗೆ ಇದ್ದ ಇಂಪೀರಿಯಲ್ ಬ್ಯಾಂಕಿನ ಶಾಖೆಗಳನ್ನು ಉಪಯೋಗಿಸಿಕೊಂಡಿತು. 1-7-1935ರಿಂದ ಎಲ್ಲ ಅನುಸೂಚಿತ ಬ್ಯಾಂಕುಗಳ ಖಾತೆಗಳನ್ನು ತನ್ನ ಬ್ಯಾಂಕಿಗೆ ವರ್ಗಾಯಿಸಿಕೊಂಡಿತು. ಕೆಲವು ವಾರಗಳ ನಂತರ ಅಲ್ಲಿನ ತೀರುವೆವ್ಯವಸ್ಥೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ನಿರ್ವಹಿಸಲಾರಂಭಿಸಿತು. ರಿಸರ್ವ್ ಬ್ಯಾಂಕ್ 60ರ ದಶಕದಲ್ಲಿ ದೇಶದ ಆರ್ಥಿಕ ಪ್ರಗತಿಗೆ ಬೇಕಾದ ಹಣಕಾಸಿನ ನೆರವು ನೀಡಿ ಪ್ರಗತಿಯ ಸೋಪಾನ ಹಾಕಿಕೊಟ್ಟಿತು. ಇಂದಿನ ಹಲವಾರು ಬೃಹತ್ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಸ್ಥಾಪನೆಗೆ ನೇರ ಕಾರಣವಾಯಿತು. ಅವುಗಳಲ್ಲಿ ಮುಖ್ಯವಾಗಿ, ಡಿ ಐ ಸಿ ಜಿ ಸಿ ಯು ಟಿ ಐ, ಐ ಡಿ ಬಿ ಐ, ಡಿ ಎಫ್ ಹೆಚ್ ಐ, ನಬಾರ್ಡ್ ಮೊದಲಾದವುಗಳು. 

1948ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಕಾಯಿದೆಗೆ ತಿದ್ದುಪಡಿ ಮಾಡಲಾಯಿತು. ನಂತರ ಅದನ್ನು ರಾಷ್ಟ್ರೀಕರಣಗೊಳಿಸಲಾಗಿತ್ತು. ನಂತರದ ಪ್ರಮುಖ ಘಟ್ಟವೆಂದರೆ 1949ರಲ್ಲಿ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಯನ್ನು  (10 oಜಿ 1949) ಜಾರಿಗೆ ತಂದಿದ್ದು. ಇದರಿಂದ ರಿಸರ್ವ್ ಬ್ಯಾಂಕಿಗೆ ಹಲವಾರು ವಿಧಗಳಲ್ಲಿ ಅಧಿಕಾರಗಳನ್ನು ನೀಡಲಾಯಿತು. 1-3-1966ರಲ್ಲಿ ಹಾಗು 1-2-1969ರಲ್ಲಿ ಎರಡು ಮಹತ್ವದ ತಿದ್ದುಪಡಿಗಳನ್ನು ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಗೆ ತರಲಾಯಿತು. ಇದರಿಂದ ರಿಸರ್ವ್ ಬ್ಯಾಂಕಿನ ಅಧಿಕಾರ ವ್ಯಾಪ್ತಿ ಹೆಚ್ಚಿತು. ಸಹಕಾರಿ ಬ್ಯಾಂಕುಗಳು ರಿಸರ್ವ್ ಬ್ಯಾಂಕಿನ ನಿಯಂತ್ರಣಕ್ಕೆ ಒಳಪಟ್ಟವು. ಇದಲ್ಲದೆ 1963ರಲ್ಲಿ ಹಾಗು 1971ರಲ್ಲಿ ಇನ್ನೆರಡು ತಿದ್ದುಪಡಿಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆಗೆ ತಂದರು. ಇದರಿಂದ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಇದರ ನಿಯಂತ್ರಣಕ್ಕೊಳಪಟ್ಟವು ಹಾಗು ಇಲ್ಲಿ ನೋಂದಾಯಿತವಾಗಿಯೇ ಈ ಸಂಸ್ಥೆಗಳನ್ನು ಸ್ಥಾಪಿಸುವ ಆದೇಶಬಂದಿತು.  ಬ್ಯಾಂಕುಗಳ ವ್ಯವಹಾರದಲ್ಲಿನ ಇನ್ನೊಂದು ಮಹತ್ವದ ತಿರುವೆಂದರೆ 1952ರಲ್ಲಿ ಬಿಲ್ಸ್ ಮಾರುಕಟ್ಟೆಯ ಯೋಜನೆಯನ್ನು ಪ್ರಾರಂಭಿಸಿದುದು. ಬ್ಯಾಂಕಿಂಗ್ ವ್ಯವಹಾರಗಳ ವಿಕಸನಕ್ಕೆ ಇದು ಮಹತ್ವದ ಹೆಜ್ಜೆಯಾಯಿತು.  

1969ನೇ ವರ್ಷವು ಹಲವಾರು ಕಾರಣಗಳಿಂದ ಬಹಳ ಮಹತ್ವದ ವರ್ಷವಾಯಿತು.  1955 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಸ್ಥಾಪನೆಯಾಗಿ, ಉಳಿದ 7 ರಾಜಾಶ್ರಿತ ಬ್ಯಾಂಕುಗಳು ಇದರ ಅಂಗಸಂಸ್ಥೆಗಳಾಗಿ ಪರಿವರ್ತಿತವಾಗಿ ದೇಶದಲ್ಲಿ ಹರಡಿದರೂ ಸರ್ಕಾರವು ದೇಶದ ಬ್ಯಾಂಕಿಂಗ್‍ನ ಶೈಶವಾವಸ್ಥೆಯಲ್ಲಿ ಉತ್ತೇಜಕ ಕಾರ್ಯ ಗಳನ್ನು ಮಾಡಿದ್ದು ಬಹು ಕಡಿಮೆ ಎನ್ನಬೇಕು. ಆದರೆ, 1967 ರಲ್ಲಿ ಮುರಾರ್ಜಿ ದೇಸಾಯಿಯವರು ಪ್ರಧಾನ ಮಂತ್ರಿಯಾಗಿದ್ದಾಗ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಸರ್ಕಾರದ ಪೋಷಕ ಪಾತ್ರ ಹಿರಿದಾಗಲು ದಾರಿಯಾಯಿತು.  1967ರಲ್ಲಿ ಸರ್ಕಾರವು `ಸಾಮಾಜಿಕ ನಿಯಂತ್ರಣ'  ಎಂಬ ಯೋಜನೆಯನ್ನು ಹಾಕಿಕೊಂಡು ಇದನ್ನು ವಾಣಿಜ್ಯ ಬ್ಯಾಂಕುಗಳ ಮೇಲೆ ಹೇರಿದಾಗ ಒಂದು ಪ್ರಶ್ನೆಯು ಉದ್ಭವವಾಯಿತು. ಅದೇನೆಂದರೆ, ದೇಶದ ಕ್ಷೇತ್ರೀಯ ಆರ್ಥಿಕ ಸಮತೋಲನಕ್ಕೆ ಬ್ಯಾಂಕುಗಳು ಯಾವ ರೀತಿಯಲ್ಲಿ ಮುಂದುವರೆಯಬೇಕು ಎನ್ನುವುದರ ಬಗ್ಗೆ ಸ್ಪಷ್ಟ ಚಿತ್ರವಿರಲಿಲ್ಲ. ಸಾಮಾಜಿಕ ನಿಯಂತ್ರಣ ಯೋಜನೆಯ ಅಂಗವಾಗಿ ರಚಿತವಾಗಿದ್ದ ರಾಷ್ಟ್ರೀಯ ಋಣ ಮಂಡಲಿಯಿಂದ ಚರ್ಚಿತವಾಗಿ ಕೊನೆಗೆ ಅದು ಒಂದು ಅಧ್ಯಯನ ತಂಡವನ್ನು ನೇಮಿಸಿತು. ಸಾಮಾಜಿಕ ನಿಯಂತ್ರಣದ ಉದ್ದೇಶಗಳ ಅನುಷ್ಠಾನಕ್ಕೆ ಬೇಕಾದ ಸಾಂಸ್ಥಿಕ ಚೌಕಟ್ಟಿನ ಬಗ್ಗೆ ವಿಶದವಾಗಿ ಅಧ್ಯಯನ ಮಾಡಲು ಈ ತಂಡಕ್ಕೆ ಆದೇಶಿಸಲಾಯಿತು. ಈ ತಂಡವು ಪ್ರಾದೇಶಿಕ ಅನುಷ್ಠಾನ ಪ್ರಸ್ತಾಪವನ್ನು ಶಿಪಾರಸ್ಸು ಮಾಡಿತು. ಇದರ ಅನ್ವಯವಾಗಿ ರಿಸರ್ವ್ ಬ್ಯಾಂಕ್ ಶ್ರಿ ಎಫ್.ಕೆ.ಎಫ್. ನಾರೀಮನ್‍ರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿ ಈ ಬಗ್ಗೆ ಕಾರ್ಯದ ರೂಪುರೇಷೆಗಳನ್ನು ಸಲಹೆಮಾಡಲು ಆದೇಶಿಸಿತು. ಈ ಸಮಿತಿಯು ತನ್ನ ಶಿಫಾರಸ್ಸಿನಲ್ಲಿ ಒಂದು ಯೋಜನೆಯನ್ನು ರೂಪಿಸಿ ಅದರಲ್ಲಿ ಸರ್ಕಾರ, ಅರೆ-ಸರ್ಕಾರ ಸಂಸ್ಥೆಗಳು, ವಾಣಿಜ್ಯ ಬ್ಯಾಂಕುಗಳು, ಸಹಕಾರೀ ಸಂಸ್ಥೆಗಳು ಒಟ್ಟಾಗಿ ಸೇರಿ ಕಾರ್ಯ ನಿರ್ವಹಿಸುವಂತೆ ಸಲಹೆ ಮಾಡಿತು. ಅದರ ಸಲಹೆಯನ್ನು ಅಂಗೀಕರಿಸಿದ ರಿಸರ್ವ್ ಬ್ಯಾಂಕ್ 1969ರಲ್ಲಿ ಒಂದು ಯೋಜನೆಯನ್ನು ರೂಪಿಸಿತು.  ಅಗ್ರ ಬ್ಯಾಂಕ್ ಯೋಜನೆ ಎಂದು ಪ್ರಸಿದ್ಧಿಯಾಯಿತು. ಈ ಯೋಜನೆಯಲ್ಲಿ ದೇಶವನ್ನು 338 ಜಿಲ್ಲೆಗಳಾಗಿ ವಿಭಾಗಿಸಲಾಯಿತು. ಯಾವಯಾವ ಜಿಲ್ಲೆಗಳಲ್ಲಿ ಯಾವ ಸರ್ಕಾರೀ ಸ್ವಾಮ್ಯದ ಬ್ಯಾಂಕ್ ಪ್ರಧಾನವಾಗಿದೆಯೋ (ಬ್ಯಾಂಕಿನ ಗಾತ್ರ, ಸಂಪತ್ತು, ಶಾಖೆಗಳು ಇತ್ಯಾದಿಗಳ ಆಧಾರದಿಂದ) ಅಲ್ಲಿ ಅವುಗಳನ್ನು ಮುಂದಾಳುವಾಗಿ ಮಾಡಿ ಅದರ ನೇತೃತ್ವದಲ್ಲಿ ಉಳಿದ ಬ್ಯಾಂಕುಗಳು ಜಿಲ್ಲೆಯ ಅಭಿವೃದ್ಧಿಗೆ ಜೊತೆ ಜೊತೆಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಿತು. ಈ ಮುಂದಾಳುತ್ವದ ಬ್ಯಾಂಕು ಸರ್ಕಾರಿ ಇಲಾಖೆಗಳ ಜೊತೆ ಸಂಪರ್ಕವಿಟ್ಟುಕೊಂಡು ಪರಸ್ಪರ ಸಭೆ, ಚರ್ಚೆ ಮೊದಲಾದವುಗಳನ್ನು ನಡೆಸಿ ಕಾರ್ಯ ರೂಪಿಸುವಂತೆ ಆದೇಶಿಸಿತು. ಹೆಚ್ಚಾಗಿ ಅರೆ-ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಹರಡಿದ್ದ ಸಹಕಾರೀ ಸಂಸ್ಥೆಗಳು ಈ ದಿಶೆಯಲ್ಲಿ ಚಿಕ್ಕದಾದರೂ ಮಹತ್ವದ ಪಾತ್ರವನ್ನು ವಹಿಸಿದವು. ಈ ಯೋಜನೆಯು ದೇಶದ ಎಲ್ಲೆಡೆ ಹರಡಿ ಸಾಕಷ್ಟು ಪ್ರಯೋಜನವಾಯಿತು. ಆದರೆ ಈ ಯೋಜನೆಯ ಅನುಷ್ಠಾನದಲ್ಲಿ ಕೆಲವು ತೊಂದರೆಗಳು ಕಾಣಿಸಿಕೊಂಡವು. ಮೊದಲನೆಯದಾಗಿ ಬ್ಯಾಂಕುಗಳು ಮತ್ತು ಸರ್ಕಾರಿ ಕಛೇರಿಗಳ ನಡುವಣ ಸುಸಂಘಟಿತ, ಹೊಂದಾಣಿಕೆಯ ಕಾರ್ಯ ನಿರ್ವಹಣೆಯು ಸರಿಯಾಗಿ ಆಗದೆ ಯೋಜನೆಗಳ ಅನುಷ್ಠಾನದಲ್ಲಿ ತೊಂದರೆಯಾಯಿತು. ಆಯಾಯ ಜಿಲ್ಲೆಗಳಲ್ಲಿ ಬ್ಯಾಂಕುಗಳು ಸಮರ್ಥ ತಂಡವನ್ನು ಬ್ಯಾಂಕಿನಲ್ಲಿ ಒದಗಿಸದ ಕಾರಣ ಯೋಜನೆಯ ಅನುಷ್ಠಾನದಲ್ಲಿ ಲೋಪ-ದೋಷಗಳಾದವು.

ಭಾರತೀಯ ರಿಸರ್ವ್ ಬ್ಯಾಂಕಿನ ಕಾರ್ಯಾಧ್ಯಕ್ಷರಿಗೆ `ಗವರ್ನರ್ ಎಂದು ಕರೆಯುವ ಬ್ರಿಟಿಷ್ ಪದ್ಧತಿಯು ಹಾಗೆಯೇ ನಮ್ಮಲ್ಲೂ ಮುಂದುವರೆದಿದೆ. ರಿಸರ್ವ್ ಬ್ಯಾಂಕ್ ಸ್ಥಾಪನೆಯಾದ ದಿನದಿಂದ (01-04-1935 ರಿಂದ  31-08-2005) ರ ವರೆಗಿನ ಅವಧಿಯಲ್ಲಿ ಗವರ್ನರ್ ಆಗಿದ್ದವರ ಹೆಸರು, ಅಧಿಕಾರಾವಧಿ, ಆಗಿನ ರಿಸರ್ವ್ ಬ್ಯಾಂಕಿನ ಪ್ರಮುಖ ಘಟನೆಗಳು ಹಾಗು ಅಲ್ಲಲ್ಲಿ ಅವರ ಸ್ಥೂಲ ಪರಿಚಯ ಈ ಕೆಳಗೆ ಕೊಡಲಾಗಿದೆ.   

ಬ್ಯಾಂಕಿನ ಗವರ್ನರ್‍ಗಳು :
ಹೆಸರು
ಅಧಿಕಾರಾವಧಿ
ವ್ಯಕ್ತಿ ಬಗ್ಗೆ ಮತ್ತು ಈ ಅವಧಿಯಲ್ಲಾದ ಘಟನೆಗಳು.

1. ಸರ್ ಓಸ್‍ಬೊರ್ನ್   
      ಸ್ಮಿತ್
1-4-1935 ರಿಂದ    30-06-1937
ಹೊಸದಾಗಿ ಉದಯಿಸಿದ ರಿಸರ್ವ್ ಬ್ಯಾಂಕಿನ ಮೊದಲ ಗವರ್ನರ್ (ಕಾರ್ಯಾಧ್ಯಕ್ಷ). ಆದರೆ ಇವರು ನೋಟಿಗೆ ಸಹಿ ಮಾಡಲಿಲ್ಲ. 

2.ಸರ್ ಜೇಮ್ಸ್ ಟೇಲರ್
1-7-1937 ರಿಂದ   17-2-1943
ಇವರ ಕಾಲಾವಧಿಯಲ್ಲಿ ಬೆಳ್ಳಿಯ ಕರೆನ್ಸಿಯಿಂದ ಹೊರಬಂದು ಇತರ ಕರೆನ್ಸಿಗೆ ಹರಡಿತು.

3. ಸರ್. ಚಿಂತಾಮಣಿ ದ್ವಾರಕಾನಾಥ್   
ದೇಶ್‍ಮುಖ್ (ಐಸಿಎಸ್)
11-8-1943 ರಿಂದ
30-6-1949
1941ರಲ್ಲಿ ಉಪ-ಕಾರ್ಯಾಧ್ಯಕ್ಷರಾಗಿದ್ದರು. 1944 ರಲ್ಲಿ ಬ್ರೆಟನ್-ವುಡ್ ಮಾತುಕತೆಯಲ್ಲಿ ಭಾಗವಹಿಸಿದ್ದರು. ದೇಶ ಸ್ವತಂತ್ರವಾಯಿತು. ಭಾರತ-ಪಾಕಿಸ್ಥಾನದ ಆಸ್ತಿ-ಹೊಣೆಗಳ ವಿಭಾಗದಲ್ಲಿ ಮಹತ್ವದ ಪಾತ್ರ ವಹಿಸಿದರು. 1950-56ರಲ್ಲಿ ದೇಶದ ಆರ್ಥಿಕ ಮಂತ್ರಿಯಾದರು.

4. ಸರ್. ಬೆನಗಲ್ ರಾಮರಾವ್ (ಐಸಿಎಸ್)
1-7-1949 ರಿಂದ
14-01-1957
ಇವರು ಇದುವರೆಗಿನ ಕಾರ್ಯಾಧ್ಯಕ್ಷರಲ್ಲಿ ಅತಿಹೆಚ್ಚು ಕಾಲ ಅಧಿಕಾರಾವಧಿಯಲ್ಲಿದ್ದವರು.  ಅಖಿಲ ಭಾರತ ಗ್ರಾಮೀಣ ಋಣ ಸರ್ವೆ ಆಯಿತು. ಇಂಪೀರಿಯಲ್ ಬ್ಯಾಂಕ್ ಇವರ ಕಾಲದಲ್ಲಿ ಸ್ಟೇಟ್ ಬ್ಯಾಂಕ್ ಆಗಿ ಪರಿವರ್ತಿತವಾಯಿತು. ಇಲ್ಲಿನ ನಂತರ ಅಮೇರಿಕದಲ್ಲಿ ರಾಯಭಾರಿ ಆದರು.

5. ಕೆ. ಸಿ. ಅಂಬೆಗಾಂವಕರ್
14-01-1957 ರಿಂದ
28-02-1957
ಹಂಗಾಮಿ ಕಾರ್ಯಾಧ್ಯಕ್ಷರಾಗಿದ್ದರು. ನೋಟುಗಳನ್ನು ಸಹಿಮಾಡಲಿಲ್ಲ.

6. ಹೆಚ್. ವಿ. ಆರ್. ಐಯ್ಯಂಗಾರ್ (ಐಸಿಎಸ್)
01-03-1957 ರಿಂದ
28-02-1962
ಇವರ ಕಾಲದಲ್ಲಿ ಕರೆನ್ಸಿಯು ದಶಮಾಂಶ ಪದ್ಧತಿಗೆ ಬಂತು. ಆಣೆ,ಕಾಸುಗಳು ಹೋದವು. ಸೆಪ್ಟೆಂಬರ್, 1960ರಲ್ಲಿ ಬ್ಯಾಂಕುಗಳ ಏಕೀಕರಣದ ಅಧಿಕಾರ ಬಂದಿತು. ಠೇವಣಿ ವಿಮಾ ನಿಗಮ ಸ್ಥಾಪನೆಯಾಯಿತು. ಈ ದಿಶೆಯಲ್ಲಿ ಜಗತ್ತಿನಲ್ಲಿ ಭಾರತವು ಎರಡನೆಯದು (ಅಮೆರಿಕ ಬಿಟ್ಟರೆ) ಇವರು ಕೆಲಕಾಲ ಸ್ಟೇಟ್ ಬ್ಯಾಂಕಿನಲ್ಲಿ ಅಧ್ಯಕ್ಷರಾಗಿದ್ದರು.

7. ಪಿ. ಸಿ. ಭಟ್ಟಾಚಾರ್ಯ
01-03-1962 ರಿಂದ 
30-06-1967
ಸ್ಟೇಟ್ ಬ್ಯಾಂಕ್ ಅಧ್ಯಕ್ಷರಾಗಿದ್ದು ನಂತರ ಇಲ್ಲಿ ಬಂದರು. ಇವರ ಕಾಲದಲ್ಲಿ ಕೆಲವು ಮುಖ್ಯ ಸರ್ಕಾರ ಸ್ವಾಮ್ಯದ ನಿಗಮಗಳು ಸ್ಥಾಪನೆಯಾದವು. (1964), ಎ ಆರ್ ಸಿ (1963), ಯುಟಿಐ (1964) ಋಣ ದೃಢೀಕರಣ ಯೋಜನೆ  ಬಂದಿತು. 1966ರಲ್ಲಿ ನಮ್ಮ ರೂಪಾಯಿಯು ಅಪಮೌಲ್ಯವಾಯಿತು. 

8. ಎಲ್. ಕೆ. ಝಾ            
    (ಐಸಿಎಸ್)
01-07-1967 ರಿಂದ
03-05-1970
ಸಾಮಾಜಿಕ ನಿಯಂತ್ರಣ (1967) ಬಂದಿತು. ಜುಲೈ 1969ರಲ್ಲಿ 14 ಬ್ಯಾಂಕುಗಳು ರಾಷ್ಟ್ರೀಕರಣ ಗೊಂಡವು. ಠೇವಣಿ ವಿಮೆಯನ್ನು ಸಹಕಾರೀ ಬ್ಯಾಂಕು ಗಳಿಗೆ ವಿಸ್ತರಿಸಲಾಯಿತು. ಮೇ, 1970ರಲ್ಲಿ ಇವರು ಅಮೆರಿಕಕ್ಕೆ ರಾಯಭಾರಿಯಾದುದರಿಂದ ಬಿಟ್ಟುಹೋದರು.

9. ಬಿ.ಎನ್. ಅದರ್‍ಕರ್
04-05-1970 ರಿಂದ 15-06-1970
ಆರ್ಥಿಕ ತಜ್ಞ.  ಇವರು ಹಂಗಾಮಿಯಾಗಿ ಕಾರ್ಯಾಧ್ಯಕ್ಷ ರಾಗಿದ್ದರು. ಐಎಂಎಫ್‍ನಲ್ಲಿ ಉನ್ನತ ಸ್ಥಾನದಲ್ಲಿದ್ದರು. ಎನ್‍ಐಡಿಎಂ ಸ್ಥಾಪನೆಗೆ ಕಾರಣರಾದರು.

10. ಎಸ್. ಜಗನ್ನಾಥನ್
16-06-1970 ರಿಂದ 
19-05-1975
ಇವರ ಕಾಲದಲ್ಲಿ ಅನೇಕ ಆರ್ಥಿಕ ಮಸೂದೆಗಳು ಹೊರ ಬಂದವು. ಉದರಿ ಖಾತರಿ ನಿಗಮ  ಸ್ಥಾಪನೆಯಾಯಿತು. ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿಗಳಾದವು. ನಿಶ್ಚಿತ ದರದಿಂದ ಚರ ದರಕ್ಕೆ ಬದಲಾಯಿತು. ಇವರು ಐಎಂಎಫ್ ನಲ್ಲಿ ಅಧಿಕಾರಿ ಯಾದರು.

11. ಎನ್. ಸಿ. ಸೆನ್     
   ಗುಪ್ತಾ 
19-05-1975 ರಿಂದ 
19-08-1975
ಹಂಗಾಮಿ ಕಾರ್ಯಾಧ್ಯಕ್ಷರಾಗಿದ್ದು ಹೊರಬಂದರು. ಪುರಿಯವರು ಅಧಿಕಾರ ವಹಿಸಿಕೊಂಡರು.

12. ಕೆ.ಆರ್. ಪುರಿ.
20-08-1975 ರಿಂದ 
02-05-1977
ಮುಂಚೆ ವಿಮಾ ನಿಗಮದಲ್ಲಿ ಅಧ್ಯಕ್ಷರಾಗಿದ್ದರು. ಇವರ ಕಾಲದಲ್ಲಿ ಗ್ರಾಮೀಣ ಬ್ಯಾಂಕುಗಳು ಸ್ಥಾಪಿತವಾದವು. ಏಶಿಯನ್ ತೀರುವೆಕೂಟವು ಸಹ ಸ್ಥಾಪಿತವಾಯಿತು. 20 ಅಂಶಗಳ ಕಾರ್ಯಕ್ರಮವಾರಂಭವಾಯಿತು.  

13. ಎಂ. ನರಸಿಂಹನ್
02-05-1977 ರಿಂದ
30-11-1977
ರಿಸರ್ವ್ ಬ್ಯಾಂಕಿನಿಂದಲೇ ಮೇಲೆ ಬಡ್ತಿ ಪಡೆದು ಬಂದ ಮೊದಲಿಗರು.  ಕೇವಲ 7 ತಿಂಗಳಿದ್ದರು.  ಮುಂಚೆ ವಿಶ್ವಬ್ಯಾಂಕು, ಐಎಂಎಫ್‍ನಲ್ಲಿ ಕೆಲಸ ಮಾಡಿದ್ದರು. 1991 ರ ನರಸಿಂಹನ್ ಸಮಿತಿಯ ಅಧ್ಯಕ್ಷರು. ನಂತರ ಬ್ಯಾಂಕಿಂಗ್ ಕ್ಷೇತ್ರದ ಪುನಾರಚನೆ ಸಮಿತಿಯ ಅಧ್ಯಕ್ಷರು (1998).

14. ಡಾ|| ಐ.ಜಿ.ಪಟೇಲ್
01-12-1977 ರಿಂದ 
15-09-1982
ದೊಡ್ಡ ಮೌಲ್ಯ ವರ್ಗದ ನೋಟುಗಳು ಚಲಾವಣೆಯಿಂದ ಹಿಂದಕ್ಕೆ ತೆಗೆದುಕೊಳ್ಳಲಾಯಿತು (ಆದ್ಯತಾ ಕ್ಷೇತ್ರಗಳ ಸಾಲಕ್ಕೆ ಗುರಿಯ ಮಿತಿ ಬಂದಿತು. ಐಎಂಎಫ್£ನಿಂದ ಗರಿಷ್ಠ ಮಟ್ಟದ ಸಾಲಕ್ಕೆ 1991 ರಲ್ಲಿ ಬಹುವಾಗಿ ಶ್ರಮಿಸಿದರು. ಐಎಂಎಫ್  ಇತಿಹಾಸದಲ್ಲೇ ಇದು ಭಾರೀ ಸಾಲ. 

15. ಡಾ|| ಮನಮೋಹನ ಸಿಂಗ್ 
16-09-1982 ರಿಂದ 
14-01-1985
ರಿಸರ್ವ್ ಬ್ಯಾಂಕ್ ಕಾಯಿದೆಗೆ ತಿದ್ದುಪಡಿ ಒಂದು ಹೊಸ ಅಧ್ಯಾಯವನ್ನು ಸೇರಿಸಲಾಯಿತು. ಪಟ್ಟಣ ಬ್ಯಾಂಕುಗಳ ವಿಭಾಗವನ್ನು ತೆರೆಯಲಾಯಿತು. ಇವರು ಉದಾರೀಕರಣ ಹಾಗು ಜಾಗತೀಕರಣಕ್ಕೆ ಹರಿಕಾರರಾದರು. 

16. ಎ. ಘೋಷ್
15-01-1985 ರಿಂದ
04-02-1985
ಕೇವಲ 15 ದಿನಗಳ ಕಾಲ ಇವರು ಹಂಗಾಮಿ ಕಾರ್ಯಾಧ್ಯಕ್ಷರಾಗಿದ್ದರು. ಮುಂಚೆ ಇವರು ಉಪ — ಕಾರ್ಯಾಧ್ಯಕ್ಷರಾಗಿದ್ದರು. ಅಲಹಾಬಾದ್ ಬ್ಯಾಂಕಿನ ಅಧ್ಯಕ್ಷರಾಗಿದ್ದರು. ಐಡಿಬಿಐ  ಮತ್ತು ಎನ್‍ಐಬಿಎಂಗಳಿಗೆ ನಿರ್ದೇಶಕ ರಾಗಿದ್ದರು. 

17. ಆರ್. ಎನ್. ಮಲ್ಹೋತ್ರಾ (ಐಎಎಸ್)
04-02-1985 ರಿಂದ 
22-12-1990
ಡಿಎಫ್‍ಹೆಚ್‍ಐ ಮತ್ತು ಎನ್‍ಹೆಚ್‍ಬಿಗಳು ಸ್ಥಾಪಿತವಾದವು. ಇಂದಿರಾ ಗಾಂಧಿ ಅಭಿವೃದ್ಧಿ ಸಂಶೋಧನಾ ಸಂಸ್ಥೆಯು ಪ್ರಾರಂಭ ವಾಯಿತು.

18. ಎಸ್. ವೆಂಕಿಟರಮಣನ್
22-12-1990 ರಿಂದ 
21-12-1992

19. ಡಾ|| ಎಸ್. ರಂಗರಾಜನ್
22-12-1992 ರಿಂದ 
21-11-1997
ಇವರು ಪ್ರಬುದ್ಧ ಆರ್ಥಿಕ ತಜ್ಞರು. ವಿದೇಶೀ ವಿನಿಮಯ ದರದ ಪದ್ಧತಿಯು ಏಕರೂಪ ಪದ್ಧತಿಗೆ ಬದಲಾಯಿತು.(ರೂ. ಆಧಾರಿತ ವಿನಿಮಯ ದರ)

20.ಡಾ||ಬಿಮಲ್ ಜಲನ್
22-11-1997 ರಿಂದ 
06-09-2003

21. ಡಾ|| ಯಾಗ ವೇಣುಗೋಪಾಲ ರೆಡ್ಡಿ
06-09-2003 ರಿಂದ 
ಇನ್ನೂ ಅಧಿಕಾರಾವಧಿ ಯಲ್ಲಿದ್ದಾರೆ.

ಸಾರ್ವಜನಿಕ ಸಾಲ :  18ನೇ ಶತಮಾನದಲ್ಲಿ ರಾಜರುಗಳ ರಾಜ್ಯದಲ್ಲಿನ ಹಣದ ಅವಶ್ಯಕತೆಯನ್ನು ಬಹುತೇಕವಾಗಿ ದೇಶೀಯ ಬ್ಯಾಂಕರುಗಳು ಹಾಗು  ಲೇವಾದೇವಿಗಾರರು ಪೂರೈಸುತ್ತಿದ್ದರು.  ಬ್ರಿಟಿಷರ ಆಗಮನಕ್ಕೆ ಮುನ್ನ ಭಾರತದಲ್ಲಿ ಯಾವ ರಾಜರೂ ಸಾರ್ವಜನಿಕರಿಂದ ಸಾಲ ತೆಗೆದುಕೊಳ್ಳುವ ಪರಿಪಾಠವಿಟ್ಟುಕೊಂಡಿದ್ದಿಲ್ಲ. ಆದರೆ ರಾಜಧಾನಿಯಲ್ಲಿನ ಶ್ರೇಷ್ಠ ವಣಿಕರು ರಾಜ್ಯದ ಕೋಶಾಗಾರಕ್ಕೆ ಸಾಲ ಕೊಡುತ್ತಿದ್ದುದು ಉಂಟು. ಈಸ್ಟ್ ಇಂಡಿಯಾ ಕಂಪನಿಯು ಮೊಟ್ಟ ಮೊದಲಿಗೆ ದಕ್ಷಿಣ ಭಾರತದಲ್ಲಿ ಸಾರ್ವಜನಿಕರಿಂದ ಸರ್ಕಾರ ಸಾಲ ತೆಗೆದುಕೊಳ್ಳುವ ಪದ್ಧತಿಯನ್ನು ಹುಟ್ಟು ಹಾಕಿತು. ಈ ಸಾರ್ವಜನಿಕ ಸಾಲದಿಂದ ಆಂಗ್ಲೋ-ಫ್ರೆಂಚರ ಯುದ್ಧ ಕಾಲದಲ್ಲಿ ಭಾರತದಿಂದ ಕೋಟ್ಯಾಂತರ ಹಣವು ಬ್ರಿಟಿಷರಿಗೆ ಸಂದಿತು. ಹೀಗೆ ಸಾರ್ವಜನಿಕರಿಂದ ಪಡೆದ ಸಾಲದ ಹಣವು ಕಾಲ ಕ್ರಮೇಣ ಸಾರ್ವಜನಿಕ ಸಾಲ ಎಂಬುದೇ ಹೆಸರಿನಿಂದ ಪ್ರಸಿದ್ಧಿಯಾಯಿತು. 

	ಆಧುನಿಕ ಕಾಲದಲ್ಲೂ ಇದರ ಅವಶ್ಯಕತೆ ಏನಿದೆಯೆಂಬುದು ಕುತೂಹಲದ ಅಂಶ. ಆದರೆ ಈ ಕಾಲದಲ್ಲೇ ಇದರ ಅವಶ್ಯಕತೆಯು ಹೆಚ್ಚು. ರೆವಿನ್ಯೂ ಕೊರತೆಯನ್ನು ತುಂಬಿಕೊಳ್ಳಲೋಸುಗವಾಗಿಯೂ ಹಾಗು ಕೆಲವು ಬೃಹತ್ ಸಾರ್ವಜನಿಕ ಬಹುಪಯೋಗಿ ಕಾರ್ಯಗಳಿಗಾಗಿಯೂ ಸಾರ್ವಜನಿಕ ಸಾಲದ ಮೂಲಕ ಸಂಪನ್ಮೂಲಗಳನ್ನು ಸಂಗ್ರಹಿಸುವುದು ಸರ್ಕಾರದ ಮುಖ್ಯವಾದ ಕಾರ್ಯವಾಗಿದೆ.  ಜಾಗತಿಕ ಪ್ರಥಮ ಮಹಾಯುದ್ಧದ ಸಮಯದಲ್ಲಿ ಭಾರತೀಯ ಸಾರ್ವಜನಿಕ ಸಾಲವು ದೊಡ್ಡದಾಗಿ ಬೆಳೆಯಿತು. ಇದರಿಂದ ಬ್ರಿಟಿಷ್ ಕೋಶಾಗಾರಕ್ಕೆ ಹಣ ತುಂಬಿಸಲಾಯಿತು. ಬ್ರಿಟನ್ನಿನ ಸರ್ಕಾರವು ಭಾರತದ ಬ್ರಿಟಿಷ್ ಸರ್ಕಾರಕ್ಕೆ ಈ ರೀತಿ ಸಾಲವನ್ನು ಕೊಳ್ಳಲು ಡಿಸೆಂಬರ್, 1920ರಲ್ಲಿ ಅನುಮತಿ ನೀಡಲಾಯಿತು. 

	ಮೊದಲಿಗೆ ಅಧ್ಯಕ್ಷೀಯ ಬ್ಯಾಂಕುಗಳು ಸಾರ್ವಜನಿಕ ಸಾಲವನ್ನು ನಿರ್ವಹಿಸುತ್ತಿತ್ತು. 1913ರಲ್ಲಿ ಮಹಾ ಲೆಕ್ಕಪರಿಶೋಧಕ ಕಂಟ್ರೋಲರ್‍ರವರಿಂದ ನಿರ್ವಹಿಸಲ್ಪಡುತ್ತಿತ್ತು. ಅದರ ನಂತರ 1935ರ ವರೆಗೆ ಕರೆನ್ಸಿ ಕಂಟ್ರೋಲರ್ ರವರು ನಿರ್ವಹಿಸುತ್ತಿದ್ದರು. 1935ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಇದನ್ನು ತನ್ನ ವ್ಯಾಪ್ತಿಗೆ ತೆಗೆದುಕೊಂಡಿತು. 1935ರಲ್ಲಿದ್ದ ಒಟ್ಟು ರೂ.950 ಕೋಟಿ ಸಾರ್ವಜನಿಕ ಸಾಲದಲ್ಲಿ ಶೇಕಡಾ 54% ರಷ್ಟು ಬ್ರಿಟಿಷ್ ಸ್ಟೆರ್ಲಿಂಗ್ ಸಾಲವಾಗಿತ್ತು ಹಾಗು ಶೇಕಡಾ 46% ರಷ್ಟು ರೂಪಾಯಿ ಸಾಲವಾಗಿತ್ತು.

ಭಾರತದಲ್ಲಿನ ಸಾರ್ವಜನಿಕ ಸಾಲದ ವಿವಿಧ ಹಂತಗಳನ್ನು ಈ ರೀತಿ ವರ್ಗೀಕರಿಸಿ ನೋಡಬಹುದು:

ಸುಮಾರು 1867ರ ತನಕ ಸಾರ್ವಜನಿಕ sಸಾಲವು ಬಹುತೇಕವಾಗಿ ವಿಶಿಷ್ಟ ಸುಸಂಘಟಿತ ಕಾರ್ಯಾಚರಣೆ ಯಲ್ಲಿ ಹಣಕಾಸಿನ ಅವಶ್ಯಕತೆಗೆ ತಕ್ಕಂತೆ ಬಳಸಲಾಗುತ್ತಿತ್ತು.  1867 ರಿಂದ 1916ರ ನಡುವಣ ಮಧ್ಯಾವಧಿಯಲ್ಲಿ ಸಾರ್ವಜನಿಕ ಸಾಲವನ್ನು ರೈಲ್ವೇಗೆ, ನೀರಾವರಿಗಾಗಿ ಕಾಲುವೆಗಳನ್ನು ತೋಡಲು ಮೊದಲಾದ ಉದ್ದೇಶಗಳಿಗಾಗಿ ಬಳಸಲ್ಪಡುತ್ತಿತ್ತು.  1917 ರಿಂದ 1940ರ ಮಧ್ಯಾವಧಿಯಲ್ಲಿ ಬಹುತೇಕವಾಗಿ ಸಾರ್ವಜನಿಕ ಸಾಲವು ಹಲವಾರು ಕಾರಣಗಳಿಗಾಗಿ ಬೆಳೆಯಿತು. 1947 ರಿಂದ 1951ರ ಕಾಲಾವಧಿಯಲ್ಲಿ ಜಾಗತಿಕ ಯುದ್ಧ, ದೇಶ ವಿಭಜನೆ, ಅತಂತ್ರ ಸ್ಥಿತಿಯಲ್ಲಿದ್ದ ಆರ್ಥಿಕ ಪರಿಸ್ಥಿತಿಗಾಗಿ ಸಾರ್ವಜನಿಕ ಸಾಲವು ಬೆಳೆಯಿತು. ಸರ್ಕಾರವು ಮುಂಗಡ ಪತ್ರದಲ್ಲಿನ ಅಂದಾಜುಗಳಿಗನುಸಾರವಾಗಿ ನಿಯಂತ್ರಿಸಲು ವಿಫಲವಾಯಿತು. ಆದರೆ 1951ರಿಂದ 1985ರ ನಡುವಣ ಕಾಲಾವಧಿಯಲ್ಲಿನ ಸಾರ್ವಜನಿಕ ಸಾಲವು ಪಂಚವಾರ್ಷಿಕ ಯೋಜನೆಗಳ ವೆಚ್ಚದಿಂದ ಪ್ರಭಾವೀಯುತವಾಗಿತ್ತು. ನಂತರದ ಕಾಲಾವಧಿಯಲ್ಲಿ ಅಂದರೆ 1985 ರಿಂದ 1991 ರ ಮಧ್ಯಾವಧಿಯಲ್ಲಿ ಚಕ್ರವರ್ತಿ ಸಮಿತಿಯ ವರದಿಯಂತೆ ಸರ್ಕಾರೀ ಪ್ರತಿಭೂತಿಗಳ ಮೇಲಣ ಬಡ್ಡಿದರವನ್ನು ಮಾರುಕಟ್ಟೆಯ ದರಕ್ಕೆ ಸಮವಾಗಿ ಸರಿಪಡಿಸುವ ಯತ್ನದಲ್ಲಿ ಇದು ಬಹಳವಾಗಿ ಏರಿತು. ನಂತರ 1991ರಿಂದ ಸರ್ಕಾರೀ ಪ್ರತಿಭೂತಿಗಳ ವ್ಯವಹಾರದಲ್ಲಿ ಹಲವಾರು ಬದಲಾವಣೆಗಳು, ಸುಧಾರಣೆಗಳು ತರುವ ಯತ್ನ ನಡೆಸಿತು. ಸಾರ್ವಜನಿಕ ಸಾಲ ನಿರ್ವಹಣೆಯ ಬಗ್ಗೆ ಒಂದು ಕ್ರಿಯಾತ್ಮಕ ಮಸೂದೆ ತಂದಿತು. ಹಾಲಿ ತಾತ್ಕಾಲಿಕ ಖಜಾನೆ ಬಿಲ್ಸ್‍ಗಳನ್ನು ರದ್ದುಗೊಳಿಸಿತು. ಪ್ರತಿಭೂತಿಗಳನ್ನು ಲಿಲಾವು ಮೂಲಕ ಮಾರುವ ಪದ್ಧತಿಯನ್ನು ತರಲಾಯಿತು. ಹೊಸ ಬಂಡವಾಳ ಪತ್ರಗಳನ್ನು ತರಲಾಯಿತು. ಉದಾಹರಣೆಗೆ ಶೂನ್ಯ ಕೂಪನ್ ಬಾಂಡ್ ಪತ್ರಗಳು, ಚರ ದರ ಬಾಂಡ್ ಪತ್ರಗಳು, ಬಂಡವಾಳ ಅನುಕ್ರಮಣಿಕಾ ಬಾಂಡ್ ಪತ್ರಗಳು. ಜೊತೆಗೆ ಪ್ರತಿಭೂತೀ ವಿಕ್ರಯ ನಿಗಮದ ಸ್ಥಾಪನೆಯಾಯಿತು. ಹೀಗೆ ಹಲವಾರು ವಿಷಯಗಳ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಕ್ರಮ ತೆಗೆದುಕೊಂಡು ಎಲ್ಲವನ್ನು ಪಾರದರ್ಶಕವಾಗಿಸಿ ಮಾರುಕಟ್ಟೆಯ ಎಲ್ಲ ಬಗೆಯ ಸ್ಥಿರತೆಗೆ ದಾರಿ ಮಾಡಿದೆ. 

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಕಾರ್ಯಗಳನ್ನಲ್ಲದೆ ಸಹಕಾರೀ ಆಂದೋಲನ, ಠೇವಣಿ ವಿಮಾ ಯೋಜನೆ ಮೊದಲಾದವುಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ನೆರವಿನೊಂದಿಗೆ ಅವುಗಳ ಯಶಸ್ಸಿಗೆ ಕಾರಣವಾಗಿದೆ:
ಸಹಕಾರೀ ಆಂದೋಲನ : ಬ್ರಿಟನ್ ಮತ್ತು ಜರ್ಮನಿಗಳಲ್ಲಿನ ಸಹಕಾರೀ ತತ್ತ್ವದ ಸಂಘಗಳ ಸ್ಥಾಪನೆಯು ಯಶಸ್ವಿಯಾದ ಮೇಲೆ ಆ ಆಂದೋಲನವು ಭಾರತಕ್ಕೂ ವ್ಯಾಪಿಸಿ ಇಲ್ಲಿಯೂ ಸಹಕಾರ ಸಂಘಗಳ ಸ್ಥಾಪನೆಯಾಯಿತು. ಬಾಬುಸಾಹೇಬ್ ಕಾವ್ತೇಕರ ಅಲಿಯಾಸ್ ವಿಠಲ್ ಲಕ್ಷ್ಮಣ್ ಎನ್ನುವರ ಮಾರ್ಗದರ್ಶನದಲ್ಲಿ ರಾಜರ ಸಂಸ್ಥಾನ ಪ್ರದೇಶವಾದ ಬರೋಡಾದಲ್ಲಿ 1889ರಲ್ಲಿ ಸ್ಥಾಪಿತವಾದ "ಅನ್ಯೋನ್ಯ ಸಹಕಾರೀ ಮಂಡಲಿ ಯು ಬಹುಶಃ ಮೊದಲ ಸಹಕಾರ ಸಂಘವಿರಬೇಕು. 

       ಬ್ರಿಟಿಷ್ ಅಧಿಕಾರಿ, ನಿಕೋಲ್‍ಸನ್ ಎಂಬುವವನು ಜರ್ಮನಿಯ ರೈಫರ್‍ಸನ್ ಮಾದರಿಯ ಕೃಷಿ ಸಾಲ ಸಹಕಾರ ಸಂಘವನ್ನು ಭಾರತದಲ್ಲಿ ಸ್ಥಾಪಿಸಲು ಸಲಹೆ ಮಾಡಿದನು. ಅವನ ಶಿಫಾರಸ್ಸಿನ ಫಲವಾಗಿ 1904ರಲ್ಲಿ ಮೊದಲ ಸಹಕಾರ ಸಂಘಗಳ ಕಾಯಿದೆಯು ಜಾರಿಗೆ ಬಂದಿತು. ಆದರೆ ಇದು ಕೃಷಿ ಸಾಲಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ 1912ರಲ್ಲಿ ಈ ಕಾಯಿದೆಗೆ ತಿದ್ದುಪಡಿಯನ್ನು ಮಾಡಿ ಕೃಷಿಸಾಲ ಹೊರತಾಗಿ ಬೇರೆ ಉದ್ದೇಶಗಳಿಗೂ ಸಂಘ ಸ್ಥಾಪಿಸುವ ಅಧಿಕಾರ ನೀಡಿತು. 1919ರಲ್ಲಿ ಬಂದ ಆಡಳಿತ ಸುಧಾರಣೆಗಳಲ್ಲಿ ಸಹಕಾರಿ ಸಂಘಗಳನ್ನು ರಾಜ್ಯಕ್ಕೆ ಸೀಮಿತಮಾಡಿ ರಾಜ ಸಂಸ್ಥಾನಗಳೇ ಸಹಕಾರೀ ಆಂದೋಲನದ ಪ್ರಗತಿಗೆ ಜವಾಬ್ದಾರಿ ಎಂದು ಮಾಡಲಾಯಿತು.

           ಭಾರತ ಸರ್ಕಾರವು 1942ರಲ್ಲಿ ಬಹುಸಂಖ್ಯಾ ಸಹಕಾರಿ ಸಂಘಗಳ ಕಾಯಿದೆ, 1942ಯನ್ನು ತಂದು ಒಂದಕ್ಕಿಂತ ಹೆಚ್ಚು ರಾಜ್ಯದಲ್ಲಿ ಸಹಕಾರ ಸಂಘವು ಬೆಳೆಯಲು ಅವಕಾಶ ಮಾಡಿಕೊಟ್ಟಿತು.  42 ವರ್ಷಗಳ ಅನುಭವ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರವು 1942ರ ಕಾಯಿದೆಯನ್ನು ರದ್ದು ಮಾಡಿ ಹೊಸದಾಗಿ ವ್ಯಾಪಕವಾದ ಮತ್ತು ಸಮಗ್ರವಾದ ಬಹು-ರಾಜ್ಯ ಸಹಕಾರ ಸಂಘ ಕಾಯಿದೆ, 1984ನ್ನು ಜಾರಿಗೆ ತಂದಿತು. 

             ನಂತರ ಮಿರ್ಧಾ ಸಮಿತಿಯ ಶಿಫಾರಸ್ಸು ಮತ್ತು ಮಾದರಿ ಸಹಕಾರ ಸಂಘಗಳ ಕಾಯಿದೆಯ ಆಧಾರದ ಮೇಲೆ ಭಾರತ ಸರ್ಕಾರವು ಹೊಸದಾಗಿ ಮತ್ತೆ ಬಹು-ರಾಜ್ಯ ಸಹಕಾರ ಸಂಘಗಳ ಕಾಯಿದೆ, 2002ನ್ನು ಜಾರಿ ಮಾಡಿತು. ಇದು ದಿನಾಂಕ 19, ಆಗಸ್ಟ್, 2002ರಿಂದ ಜಾರಿಗೆ ಬಂದಿತು. ಇದು ಹೆಚ್ಚು ಪ್ರಜಾಸತ್ತಾತ್ಮಕವಾಗಿಯೂ, ಸ್ವತಂತ್ರವಾಗಿ ನಿರ್ವಹಿಸುವ ಅಧಿಕಾರವನ್ನೂ ನೀಡಿತು.

	ಭಾರತ ಸರ್ಕಾರ ಕಾಯಿದೆ, 1935 ರಲ್ಲಿ ಸಹಕಾರಿಗಳನ್ನು ಸಂಸ್ಥಾನದ ವಿಷಯವೆಂದು ನಿರ್ಧರಿಸಲಾಯಿತು ಈ ``ಸಹಕಾರೀ ಸಂಘಗಳು ವಿಷಯವನ್ನು ರಾಜ್ಯ ವಿಷಯವೆಂದು ಮಾಡಿ ಅದನ್ನು ರಾಜ್ಯದ ಪಟ್ಟಿಯಲ್ಲಿನ 32ನೇ ದಾಖಲೆಯಾಗಿ ಭಾರತ ಸಂವಿಧಾನದಲ್ಲಿ ಸೇರ್ಪಡೆಮಾಡಲಾಯಿತು.

ಮದ್ರಾಸ್ ಪ್ರಾಂತ್ಯದಲ್ಲಿನ ಕಾಂಜೀವರಮ್‍ನಲ್ಲಿ ಸ್ಥಾಪಿತವಾದ ಮೊದಲ ಪಟ್ಟಣ ಸಹಕಾರ ಸಾಲಸಂಘವು ಅಕ್ಟೋಬರ್, 1904ರಲ್ಲಿ ನೋಂದಾಯಿಸಲ್ಪಟ್ಟಿತು. 

2. ಪಯೋನಿಯರ್ ಪಟ್ಟಣ ಸಹಕಾರ ಸಂಘ, ಬೊಂಬಾಯಿಯಲ್ಲಿ (11-11-1905).
3. ಮಿಲಿಟರಿ ಲೆಕ್ಕಪತ್ರದ ಪರಸ್ಪರನೆರವಿನ ಸಹಕಾರ ಸಾಲಸಂಘ, ಪೂನಾದಲ್ಲಿ (9-1-1906). ಕಾಸ್ಮೋಸ್, ಪೂನಾ (18-1-1906).
4. ಗೋಕಾಕ್ ಪಟ್ಟಣ ಸಹಕಾರ ಸಂಘ (15-2-0906) ಮತ್ತು ಬೆಳಗಾಂವ್ ಪಯೋನಿಯರ್ (23-2-1906) ಎರಡೂ ಬೆಳಗಾಂವ್ ಜಿಲ್ಲೆಯಲ್ಲಿ ಆದವು.
5. ಕನಕಾವಲಿ ಮಠ ಸಹಕಾರೀ ಸಾಲಸಂಘ ಮತ್ತು ವರವದೆ ನೇಯ್ಗೆಗಾರರ ಪಟ್ಟಣ ಸಾಲ ಸಂಘ (13-3-1906)    ಎರಡು ದಕ್ಷಿಣ ರತ್ನಗಿರಿ (ಈಗಿನ ಸಿಂಧುದುರ್ಗ) ಜಿಲ್ಲೆಯಲ್ಲಿ.

ಇವುಗಳಲ್ಲೆಲ್ಲ ಬಹಳ ಪ್ರಮುಖವಾದ ಬೊಂಬಾಯಿ ಪಟ್ಟನ ಸಹಕಾರ ಸಾಲಸಂಘವು 23-01-1906ರಲ್ಲಿ ವಿಠಲದಾಸ್ ಥಾಕರ್‍ಸೆ ಮತ್ತು ಲಲ್ಲುಭಾಯಿ ಸಮಲ್‍ದಾಸ್‍ರಿಂದ ಪ್ರಾಯೋಜಿತವಾಯಿತು.

ಮ್ಯಾಕ್ಲಗಾನ್ ಸಮಿತಿಯು 1915ರಲ್ಲಿ ರಚಿಸಲ್ಪಟ್ಟಿತು. ಬೊಂಬಾಯಿ ಸರ್ಕಾರವು ದೇಶದಲ್ಲೇ ಮೊದಲ ರಾಜ್ಯ ಮಟ್ಟದ ಸಹಕಾರೀ ಸಂಘಗಳ ಕಾಯಿದೆ, 1925ನ್ನು ಜಾರಿಗೆ ತಂದಿತು. 
ಭಾರತವು ಸ್ವತಂತ್ರವಾದ ನಂತರ ಸರ್ಕಾರವು ಅನುಷ್ಠಾನಕ್ಕೆ ತಂದ ಪಂಚ ವಾರ್ಷಿಕ ಯೋಜನೆಗಳಲ್ಲಿ ಸಹಕಾರಿ ಸಂಘಗಳು ಅವಿಭಾಜ್ಯ ಅಂಗಗಳಾದವು.  1954ರಲ್ಲಿ ಬಂದ ಅಖಿಲ ಭಾರತ ಗ್ರಾಮೀಣ ಸಾಲ ಸಮೀಕ್ಷೆ ಸಮಿತಿಯ ವರದಿಯಲ್ಲಿ ಸಹಕಾರಿ ಸಂಘಗಳ ಬಂಡವಾಳ ಹೂಡಿಕೆಯಲ್ಲಿ ಸರ್ಕಾರದ ಪಾತ್ರವನ್ನೂ ಶಿಫಾರಸ್ಸು ಮಾಡಿತು. ಇದರಿಂದಾಗಿ ಸರ್ಕಾರವು ಸಹಕಾರ ಸಂಘಗಳ ಪ್ರಗತಿ ಹಾಗು ಸಮರ್ಥ ನಿರ್ವಹಣೆಗಾಗಿ ಹಲವಾರು ಯೋಜನೆಗಳನ್ನು ರೂಪಿಸಿತು. 1960ರ ದಶಕದಲ್ಲಿ ಸರ್ಕಾರವು ಈ ಸಂಘಗಳ ಪುನಾರಚನೆ, ವ್ಯವಸ್ಥಿತ ನಿರ್ವಹಣೆಗೆ ಹಲವಾರು ಸುಧಾರಣೆಗಳನ್ನು ತಂದಿತು. ಇದರಿಂದಾಗಿ ಎರಡು ಲಕ್ಷಕ್ಕೂ ಮೀರಿ ಇದ್ದ ಪ್ರಾಥಮಿಕ ಸಾಲ ಸಹಕಾರ ಸಂಘಗಳ ಸಂಖ್ಯೆಯು ಆಗ್ಗೆ 92000ಕ್ಕೆ ಇಳಿಯಿತು. 

ಸಹಕಾರ ಆಂದೋಲನದ ಪರವಾಗಿದ್ದ ಮಾನ್ಯ ಜವಾಹರಲಾಲ್ ನೆಹರೂರವರು ಪ್ರಧಾನಮಂತ್ರಿ ಯಾಗಿದ್ದಾಗ 1954ರಲ್ಲಿ ಸ್ಥಾಪಿತವಾದ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯು ಸಹಕಾರ ಸಂಘಗಳಿಗೆ ಸಂಬಂಧಿಸಿದಂತೆ ರಾಷ್ಟ್ರ ಮಟ್ಟದ ಒಂದು ಸಮಗ್ರ ಮಸೂದೆಯನ್ನು ತರಬೇಕೆಂದು ಸೂಚಿಸಿತು. ಸಹಕಾರಿ ಆಂದೋಲನದಲ್ಲಿ ವಿಶ್ವಾಸವಿದ್ದ ನೆಹರೂರವರು ಮುಂದೆ ಹಲವಾರು ಕಾಯಿದೆ, ಯೋಜನೆಗಳನ್ನು ರೂಪಿಸಿ ಸಹಕಾರಿ ವಿಕಸನಕ್ಕೆ ಹಾದಿ ರೂಪಿಸಿದರು. 

ಠೇವಣಿ ವಿಮಾ ಯೋಜನೆ : ಭಾರತದಲ್ಲಿ ಠೇವಣಿ ವಿಮೆ ಯೋಜನೆಯು ಬಂದದ್ದು ಬಹಳ ನಿಧಾನವಾಗಿ. ಈ ಬಗ್ಗೆ 1938ರಿಂದಲೂ ಚರ್ಚೆ ನಡೆಯುತ್ತಿದ್ದರೂ ಈ ಬಗ್ಗೆ ಯಾವುದೇ ಸಕಾರಾತ್ಮಕವಾದ ನಿಲುವನ್ನು ತಳೆದಿರಲಿಲ್ಲ. ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಈ ಠೇವಣಿ ವಿಮಾ ಯೋಜನೆಯನ್ನು ಅನುಷ್ಠಾನಕ್ಕೆ ತಂದದ್ದು ಅಮೇರಿಕಾ. 1913-1914ರಲ್ಲಿ ಭಾರತದಲ್ಲಿ ಬಹಳಷ್ಟು ಬ್ಯಾಂಕುಗಳು ಕುಸಿದವು. 1938ರಲ್ಲಿ ಅತಿ ದೊಡ್ಡ ಬ್ಯಾಂಕಾದ ಟ್ರಾವೆಂಕೂರ್ ಮತ್ತು ಕ್ವಿಲಾನ್ ಬ್ಯಾಂಕ್ ಕುಸಿಯಿತು.  ಅದರಿಂದಾಗಿ 1940ರ ದಶಕದಲ್ಲಿ ಸರ್ಕಾರವು ಬ್ಯಾಂಕುಗಳಿಗೆ ಹಲವಾರು ಶಾಸನ ಬದ್ಧ ಕ್ರಮಗಳನ್ನು ಕೈಗೊಂಡಿತಲ್ಲದೆ ಸುಧಾರಣಾ ವಿಧಾನಗಳನ್ನು ರೂಪಿಸತೊಡಗಿತು. ಆದರೆ 1946 ಹಾಗು 1948ರ ಮಧ್ಯದಲ್ಲಿನ ಬೆಂಗಾಲ್‍ನಲ್ಲಿನ ಬ್ಯಾಂಕಿಂಗ್ ದುಸ್ಥಿತಿಯು ಮತ್ತೆ ಠೇವಣಿ ವಿಮೆಯ ಬಗ್ಗೆ ಗಂಭೀರವಾಗಿ ಚಿಂತಿಸುವಂತೆ ಮಾಡಿತು. ಆದರೆ ಆ ಸಮಯದಲ್ಲಿ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1949 ಬರುವುದರಲ್ಲಿತ್ತು. ಹೀಗಾಗಿ ಠೇವಣಿ ವಿಮೆಯ ವಿಷಯಕ್ಕೆ ಪ್ರಾಶಸ್ತ್ಯ ಕಡಿಮೆಯಾಯಿತು. ಈ ಕಾಯಿದೆಯು ಬಂದ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕುಗಳ ಸಮಗ್ರ ಮೇಲ್ವಿಚಾರಣೆ, ಲೆಕ್ಕ ಪರಿಶೋಧನೆ, ಪರಿವೀಕ್ಷಣೆ ಮಾಡಿ ಹಲವಾರು ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಆದೇಶಿಸಿತು. ಆದರೆ 1960ರಲ್ಲಿ ಆದ ಲಕ್ಷ್ಮೀ ಬ್ಯಾಂಕಿನ ವಿಫಲತೆ ಮತ್ತು ಕುಸಿತ ಹಾಗು ನಂತರದ ಪಾಲೈ ಸೆಂಟ್ರಲ್ ಬ್ಯಾಂಕಿನ ಕುಸಿತಗಳು ಠೇವಣಿ ವಿಮೆಯನ್ನು ಅವಶ್ಯಕವೆನ್ನುವಂತೆ ಮಾಡಿದವು. ಇದರಿಂದಾಗಿ 21-08-1961ರಲ್ಲಿ ಠೇವಣಿ ವಿಮಾ ನಿಗಮದ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ದಿನಾಂಕ 7-12-1961ರಂದು ಈ ಮಸೂದೆಯು ಸಂಸತ್ತಿನಲ್ಲಿ ಅನುಮೋದಿತವಾಯಿತು. ಠೇವಣಿ ವಿಮಾ ನಿಗಮವು ದಿನಾಂಕ 01-01-1962ರಂದು ಕಾರ್ಯಾರಂಭ ಮಾಡಲು ತೊಡಗಿತು. ಜಗತ್ತಿನಲ್ಲಿ ಭಾರತ ಠೇವಣಿ ವಿಮೆ ಯೋಜನೆಯನ್ನು ಅನುಷ್ಠಾನಕ್ಕೆ ತಂದ ಎರಡನೆಯ ದೇಶವಾಯಿತು. ಮೊದಲನೆಯದು ಅಮೇರಿಕ. 15-7-1978ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನಿಂದ ಸ್ಥಾಪಿತವಾಗಿದ್ದ ಋಣ ಖಾತರಿ ನಿಗಮವನ್ನು ಇದು ತನ್ನಲ್ಲಿ ವಿಲೀನಗೊಳಿಸಿಕೊಂಡಿತು. ಋಣ ಖಾತರಿ ವಿಭಾಗದಲ್ಲಿ ನಿಗಮವು ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ.  

	ಎಲ್ಲ ವಾಣಿಜ್ಯ ಬ್ಯಾಂಕುಗಳು ಅಂದರೆ ಗ್ರಾಮೀಣ ಕ್ಷೇತ್ರೀಯ ಬ್ಯಾಂಕುಗಳನ್ನೂ ಸೇರಿಸಿ ಎಲ್ಲರಿಗೂ ಠೇವಣಿ ವಿಮಾ ನಿಗಮದ ಸದಸ್ಯರಾಗಲು ಅರ್ಹತೆಯಿತ್ತು. ಆದರೆ ಸಹಕಾರಿ ಬ್ಯಾಂಕುಗಳಿಗೆ 1968ರ ತನಕ ಅರ್ಹತೆಯಿರಲಿಲ್ಲ. ಇದರಿಂದಾಗಿ ಎಲ್ಲ ರಾಜ್ಯಗಳ ಸಹಕಾರಿ ಸಂಘಗಳ ಕಾಯಿದೆಯನ್ನು ತಿದ್ದುಪಡಿಮಾಡಬೇಕಾಯ್ತು. 

	ನಿಗಮವನ್ನು ಪ್ರಾರಂಭಿಸಿದಾಗ ಪ್ರತಿಯೊಬ್ಬ ಠೇವಣಿದಾರನಿಗೆ ನಿಗಮ ನೀಡುವ ವಿಮಾ ಪಾವತಿಯನ್ನು ರೂ.1500/-ಕ್ಕೆ ನಿಗದಿ ಪಡಿಸಿತ್ತು. ಕೇಂದ್ರ ಸರ್ಕಾರದ ಅನುಮತಿಯೊಂದಿಗೆ ಈ ಮಿತಿಯನ್ನು ಹೆಚ್ಚಿಸುವ ಅಧಿಕಾರವು ನಿಗಮಕ್ಕಿದೆ. ಅದೇ ರೀತಿ ಕಾಲಾನುಕ್ರಮದಲ್ಲಿ ನಿಗಮವು ಹೆಚ್ಚಿಸಿದ ವಿಮಾ ಪಾವತಿ ಮಿತಿಯು ಹೀಗಿದೆ:
1.ರೂ. 1500/-
01-01-1962 ರಿಂದ.

2.ರೂ. 5,000/-
01-01-1968 ರಿಂದ.

3.ರೂ. 10,000/- 
01-04-1970 ರಿಂದ.

4.ರೂ. 20,000/-
01-01-1976 ರಿಂದ.

5.ರೂ. 30,000/-
01-07-1980 ರಿಂದ.

6.ರೂ.100,000/-
01-05-1993 ರಿಂದ.

ಎಲ್ಲ ಸದಸ್ಯತ್ವದ ಬ್ಯಾಂಕಿನ ಠೇವಣಿದಾರು ಬ್ಯಾಂಕು ಕುಸಿದ ಸಂದರ್ಭದಲ್ಲಿ ಒಬ್ಬ ಠೇವಣಿದಾರನಿಗೆ ಗರಿಷ್ಟ ಒಂದು ಲಕ್ಷ ರೂ.ಗಳಂತೆ ನಿಗಮದಿಂದ ಹಣ ಪಡೆಯಲು ಸಾಧ್ಯವಿದೆ. ಹೀಗಾಗಿ ಠೇವಣಿದಾರರಿಗೆ ಈ ವಿಮಾ ಸೌಲಭ್ಯವು ಉಚಿತವಾಗಿ ದೊರಕಿದಂತಾಯಿತು. ಚಾಲ್ತಿ ಠೇವಣಿ, ಉಳಿತಾಯ ಠೇವಣಿ, ಸಂಚಿತ ಠೇವಣಿ, ಸಾವಧಿ ಠೇವಣಿ ಮೊದಲಾದವುಗಳೆಲ್ಲವೂ ವಿಮಾ ಮಿತಿಯೊಳಗೆ ಬರುತ್ತವೆಯಾದರೂ ಈ ಕೆಳಗೆ ಸೂಚಿಸಿದ ಠೇವಣಿಗಳು ಇದರ ವ್ಯಾಪ್ತಿಯಲ್ಲಿ ಬರುವುದಿಲ್ಲ :
1.  ವಿದೇಶಿ ಸಕಾರದ ಠೇವಣಿಗಳು.
2. ಕೇಂದ್ರ / ರಾಜ್ಯ ಸರ್ಕಾರದ ಠೇವಣಿಗಳು.
3. ಅಂತಬ್ರ್ಯಾಂಕ್ ಠೇವಣಿಗಳು.
4. ರಾಜ್ಯ ಸಹಕಾರಿ ಬ್ಯಾಂಕಿನಲ್ಲಿಟ್ಟ ರಾಜ್ಯ ಜಮೀನು ಅಭಿವೃದ್ಧಿ ಬ್ಯಾಂಕಿನ ಠೇವಣಿಗಳು.
5. ದೇಶದಿಂದಾಚೆಗಿನ ಯಾವುದೇ ಠೇವಣಿಯು ಪಾವತಿಗಿರುವುದು. 
6. ಇನ್ನು ಯಾವುದೇ ಹಣ ಮೊದಲಿಗೇ ರಿಸರ್ವ್ ಬ್ಯಾಂಕಿನಿಂದ ನಿಗಮವು ವಿನಾಯಿತಿಯ ಅನುಮತಿ ಪಡೆದಿರುವುದು.
1993ರಿಂದ ವಿಮಾ ಶುಲ್ಕವು ನೂರು ರೂ.ಗಳಿಗೆ ಐದು ಪೈಸೆಯಂತೆ ಇತ್ತು.  ನಂತರ ವಿಮಾ ಶುಲ್ಕವನ್ನು ನೂರು. ಗಳಿಗೆ ಹತ್ತು ಪೈಸೆಯಂತೆ ಹಂತ ಹಂತವಾಗಿ ಹೆಚ್ಚಿಸಲು ನಿಗಮವು ನಿರ್ಧರಿಸಿದೆ. 2004-2005 ರಲ್ಲಿ ನೂರು ರೂ.ಗಳಿಗೆ 8 ಪೈಸೆಯಂತೆಯೂ ನಂತರ ಅಂದರೆ 2005-2006ರಿಂದ ನೂರು ರೂ.ಗಳಿಗೆ 10 ಪೈಸೆಯಂತೆಯೂ ಶುಲ್ಕ ವಿಧಿಸಬೇಕೆಂಬುದು ನಿಗಮದ ಆದೇಶವಾಗಿದೆ. ಹೀಗೆ ವಿಮಾ ಶುಲ್ಕವನ್ನು ಪಾವತಿ ಮಾಡಿದ ಬ್ಯಾಂಕುಗಳು ಈ ವೆಚ್ಚವನ್ನು ತಮ್ಮಲ್ಲೇ ಉಳಿಸಿಕೊಳ್ಳಬೇಕು. ಯಾವುದೆ ಕಾರಣದಿಂದ, ಯಾವುದೇ ರೀತಿಯಿಂದ ಠೇವಣಿದಾರರಿಗೆ ವರ್ಗಾಯಿಸಬಾರುದು. ಈ ಠೇವಣಿ ವಿಮೆಯು ಠೇವಣಿದಾರರಿಗೆ ಉಚಿತವಾಗಿದೆ. ಈ ಎಲ್ಲ ಲೆಕ್ಕಾಚಾರಗಳಿಗೆ ಠೇವಣಿಯನ್ನು ಹತ್ತಿರದ ಸಾವಿರಕ್ಕೆ ಪೂರ್ಣಗೊಳಿಸಿರಬೇಕು. ಅದರ ಮೇಲೆ ವಿಮೆ ಶುಲ್ಕವನ್ನೂ ಲೆಕ್ಕಾಚಾರಮಾಡಬೇಕು. ಪ್ರತಿ ಆರು ತಿಂಗಳಿಗೊಮ್ಮೆ ವಿಮೆ ಶುಲ್ಕವನ್ನು ಪಾವತಿ ಮಾಡಬೇಕು. ಜೊತೆಗೆ ಮುಖ್ಯವಾದ ಎರಡು ಅರ್ಧವಾರ್ಷಿಕ ವಿವರಣೆ ಪಟ್ಟಿಯನ್ನು ನಿಗಮಕ್ಕೆ ಕಳಿಸಿಕೊಡಬೇಕು.  ಇದಲ್ಲದೆ ವಿಮೆಯನ್ನು ಸಕಾಲದಲ್ಲಿ ಪಾವತಿ ಮಾಡದಿದ್ದಲ್ಲಿ ಬ್ಯಾಂಕು ದರದ ಮೇಲೆ ಶೇಕಡಾ 8% ರಷ್ಟು ದರದಲ್ಲಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. 

ವಿಮಾ ಶುಲ್ಕವನ್ನು ಪಾವತಿ ಮಾಡಲು ಎರಡು ಮಾರ್ಗಗಳಿವೆ. 1) ಭಾರತೀಯ ರಿಸರ್ವ್ ಬ್ಯಾಂಕಿನ ನಿಗಮದ ಖಾತೆಗೆ ನೇರವಾಗಿ ಜಮಾ ಮಾಡಿಬಿಡುವುದು ಅಥವಾ 2) ಬ್ಯಾಂಕ್ ಡ್ರಾಫ್ಟ್ ಅಥವಾ ತಂತಿ ಹಣ ರವಾನೆಯನ್ನು ನಿಗಮದ ಮುಂಬಯಿ ವಿಳಾಸಕ್ಕೆ ಕಳಿಸಿಕೊಡಬೇಕು. 
ವಿಮಾ ಪಾವತಿ : ಅಕಸ್ಮಾತ್ ಸದಸ್ಯ ಬ್ಯಾಂಕ್ ಹಲವಾರು ಕಾರಣಗಳಿಂದ ಮುಚ್ಚುವ ಸ್ಥಿತಿ ಬಂದರೆ ಆಗ ಸರ್ಕಾರವು ಒಬ್ಬ ಅಧಿಕಾರಿಯನ್ನು ನೇಮಿಸಿ ನಿಗಮದ ಆಸ್ತಿ-ಹೊಣೆಗಳ ಸಮೀಕ್ಷೆ ಮಾಡಿ ವಿಮಾ ಪಾವತಿಗೆ ಆದೇಶಿಸುತ್ತದೆ. ಆಗ ಇರುವ ಮಿತಿಯ ಅನ್ವಯ ಠೇವಣಿದಾರರಿಗೆ ವಿಮೆ ಹಣವು ಪಾವತಿಯಾಗುತ್ತದೆ. 
	ನಿಗಮಕ್ಕೆ ಯಾವುದೇ ಬ್ಯಾಂಕಿನ ಸದಸ್ಯತ್ವನ್ನು ಸಕಾರಣವಾಗಿ ರದ್ದು ಪಡಿಸುವ ಅಧಿಕಾರವಿದೆ. ಈ ಬಗ್ಗೆ ಮುಂಚೆಯೇ ಸದಸ್ಯ ಬ್ಯಾಂಕಿಗೆ ಸೂಚನೆ ಕಳುಹಿಸಿ ಕ್ರಮ ಕೈಗೊಳ್ಳುತ್ತದೆ. 

ಭಾರತೀಯ ರಿಸರ್ವ್ ಬ್ಯಾಂಕ್‍ನ ಕರ್ತವ್ಯಗಳು, ಕಾರ್ಯಗಳು :
ಭಾರತೀಯ ರಿಸರ್ವ್ ಬ್ಯಾಂಕ್‍ನ್ನು ದೇಶದ ಕೇಂದ್ರೀಯ ಬ್ಯಾಂಕೆಂದು ಸ್ಥಾಪಿಸಿರುವುದರಿಂದ ಕೇಂದ್ರೀಯ ಬ್ಯಾಂಕಿನ ಎಲ್ಲ ಪ್ರಮುಖ ಕಾರ್ಯಗಳನ್ನು ಇದು ನಿರ್ವಹಿಸಲೇಬೇಕಾಗಿತ್ತು. ಭಾರತೀಯ ರಿಸರ್ವ್ ಬ್ಯಾಂಕ್‍ನ ಪ್ರಮುಖವಾದ ಕಾರ್ಯಗಳೆಂದರೆ :
1. ನೋಟು ಮುದ್ರಣ ಬ್ಯಾಂಕ್ :
ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ, 1934ರ ಕಲಂ 22ರಂತೆ, ಬ್ಯಾಂಕಿಗೆ ಎಲ್ಲ ಮೌಲ್ಯವರ್ಗಗಳ ನೋಟುಗಳನ್ನು ಮತ್ತು ನಾಣ್ಯಗಳನ್ನು ಮುದ್ರಿಸುವ ಮತ್ತು ಟಂಕಿಸುವ ಏಕಸ್ವಾಮ್ಯ ಅಧಿಕಾರವಿದೆ. ಆದರೆ ಒಂದು ರೂಪಾಯಿಯ ನಾಣ್ಯ, ನೋಟು ಮತ್ತು ಉಳಿದೆಲ್ಲ ಸಣ್ಣ ನಾಣ್ಯಗಳನ್ನು ದೇಶದಾದ್ಯಂತ ವಿತರಿಸುವ ಅಧಿಕಾರವನ್ನು ಸರ್ಕಾರದ ಏಜೆಂಟಾಗಿ ನಿರ್ವಹಿಸುತ್ತಿದೆ.  ಕರೆನ್ಸಿಯನ್ನು ಮುದ್ರಿಸುವ ಇಲಾಖೆಯನ್ನು ಪ್ರತ್ಯೇಕ ಇಲಾಖೆಗೆ ಈ ಮುದ್ರಣದ ಜವಾಬ್ದಾರಿಯನ್ನು ನೀಡಿರುವುದಲ್ಲದೆ ಬ್ಯಾಂಕು ಈ ಇಲಾಖೆಯ ಎಲ್ಲ ಆಸ್ತಿ-ಹೊಣೆಗಳನ್ನು ತನ್ನ ಬ್ಯಾಂಕಿಂಗ್ ಇಲಾಖೆಯಿಂದ ಪ್ರತ್ಯೇಕಿಸಿ ಇಟ್ಟಿದೆ. ಪ್ರಾರಂಭದಲ್ಲಿ ಮುದ್ರಣ ಇಲಾಖೆಯ ಆಸ್ತಿಯಲ್ಲಿ ಕನಿಷ್ಠ ಐದರಲ್ಲಿ ಎರಡು ಭಾಗವು ಚಿನ್ನದ ನಾಣ್ಯ, ಚಿನ್ನದ ಬುಲಿಯನ್ ಅಥವಾ ಬ್ರಿಟನ್ ಸ್ಟರ್ಲಿಂಗ್ ಪ್ರತಿಭೂತಿಗಳಲ್ಲಿರಬೇಕಾಗಿತ್ತು. ಅದರಲ್ಲಿ ಚಿನ್ನವು ಕನಿಷ್ಠ ರೂ.40 ಕೋಟಿಗಳಷ್ಟಿರಬೇಕಾಗಿತ್ತು.  ಉಳಿದ ಐದರಲ್ಲಿನ ಮೂರು ಭಾಗವು ರೂಪಾಯಿ ನಾಣ್ಯಗಳಲ್ಲಿ, ಭಾರತ ಸರ್ಕಾರದ ರೂಪಾಯಿ ಪ್ರತಿಭೂತಿಗಳಲ್ಲಿ, ಮತ್ತು ಭಾರತದಲ್ಲೇ ಪಾವತಿಯಾಗುವಂತಹ ಅರ್ಹ ಬಿಲ್ಸ್ ಮತ್ತು ವಚನ ಪತ್ರಗಳಲ್ಲಿರಬೇಕಾಗಿತ್ತು.  ಆದರೆ ಎರಡನೇ ಜಾಗತಿಕ ಮಹಾ ಸಮರದ ಸಮಯದಲ್ಲಿ ಹಾಗು ಯುದ್ದಾನಂತರದ ಸಮಯದಲ್ಲಿ ಈ ನಿಯಮಗಳಲ್ಲಿ ಸ್ವಲ್ಪ ಬದಲಾವಣೆಮಾಡಬೇಕಾಯಿತು.  ನಂತರ, 1957ರಿಂದ ಭಾರತೀಯ ರಿಸರ್ವ್ ಬ್ಯಾಂಕ್ ಚಿನ್ನ ಮತ್ತು ವಿದೇಶಿ ಮೀಸಲು ನಿಧಿಗಳಲ್ಲಿ ಕನಿಷ್ಠ 200ರೂ. ಕೋಟಿಗಳಷ್ಟು ಇಡಬೇಕಾಗಿದೆ. ಅದರಲ್ಲಿ ಕನಿಷ್ಠ ರೂ.115 ಕೋಟಿಗಳಷ್ಟು ಚಿನ್ನದಲ್ಲಿರಬೇಕು.  ಇದನ್ನು ಕನಿಷ್ಠ ಮೀಸಲು ಪದ್ಧತಿ  ಎಂದು ಕರೆಯುತ್ತಾರೆ.   
2) ಸರ್ಕಾರದ ಬ್ಯಾಂಕರ್ 
ಭಾರತೀಯ ರಿಸರ್ವ್ ಬ್ಯಾಂಕ್‍ನ ಎರಡನೇ ಮುಖ್ಯ ಕೆಲಸವೆಂದರೆ ಸರ್ಕಾರದ ಬ್ಯಾಂಕಾಗಿ ಕಾರ್ಯ ನಿರ್ವಹಿಸುವುದು. ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರ ಸರ್ಕಾರಕ್ಕೆ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯ ವಿನಹ ಎಲ್ಲ ರಾಜ್ಯ ಸರ್ಕಾರಗಳಿಗೆ ಏಜೆಂಟ್ ರೀತಿ ಕಾರ್ಯ ನಿರ್ವಹಿಸುವುದು. ಆದರೆ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಇದರಿಂದ ವಿನಾಯಿತಿದೆ.  ಸರ್ಕಾರದ ಎಲ್ಲ ಜಮೆಗಳನ್ನು ಸ್ವೀಕರಿಸುವುದು.  ಠೇವಣಿಗಳಿಗೆ ಬಡ್ಡಿಯಿಲ್ಲ. ಸರ್ಕಾರದ ಪರವಾಗಿ ಎಲ್ಲ ಪಾವತಿಗಳನ್ನು ಮಾಡುವುದು, ಸರ್ಕಾರದ ವಿದೇಶಿ ವಿನಿಮಯದ ರವಾನೆಗಳನ್ನು ಮಾಡುವುದು ಮತ್ತು ಇತರ ಬ್ಯಾಂಕಿಂಗ್ ಕೆಲಸ-ಕಾರ್ಯಗಳನ್ನು ನಿರ್ವಹಿಸುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡಕ್ಕೂ ಅವುಗಳ ಸಾಲಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದು ಮತ್ತು ಸಾರ್ವಜನಿಕ ಋಣವನ್ನು ನಿರ್ವಹಿಸುವುದು. ಸರ್ಕಾರಗಳಿಗೆ 90 ದಿನಗಳ ಮುಂಗಡಗಳನ್ನು ನೀಡುವುದು.  ರಾಜ್ಯಗಳಿಗೆ ಹಾಗು ಸ್ಥಳೀಯ ಪ್ರಾಧಿಕಾರಗಳಿಗೆ ಸಾಲ ಮತ್ತು ಮುಂಗಡಗಳನ್ನು ನೀಡುವುದು. ಹಣಕಾಸಿನ ಮತ್ತು ಬ್ಯಾಂಕಿಂಗ್‍ಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಬ್ಯಾಂಕು ಸರ್ಕಾರಗಳಿಗೆ ಸಲಹಾಗಾರನಾಗಿ ಕಾರ್ಯ ನಿರ್ವಹಿಸುವುದು.  
3. ಬ್ಯಾಂಕರುಗಳ ಬ್ಯಾಂಕ್ ಮತ್ತು ಕೊನೆಯ ಏಕೈಕ ಸಾಲದಾತ: 
ಬ್ಯಾಂಕರ್ಸ್‍ಗಳಿಗೆ ಬ್ಯಾಂಕರ್ ಆಗಿ ಭಾರತೀಯ ರಿಸರ್ವ್ ಬ್ಯಾಂಕ್ ಕಾರ್ಯ ನಿರ್ವಹಿಸುತ್ತದೆ. ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಯ ಅನ್ವಯ ಎಲ್ಲ ವಾಣಿಜ್ಯ ಹಾಗು ಸಹಕಾರ ಬ್ಯಾಂಕುಗಳು ತಮ್ಮ ಬೇಡಿಕೆ ಠೇವಣಿಯ ಶೇಕಡ 5 ರಷ್ಟನ್ನು ಮತ್ತು ಸಾವಧಿ ಜವಾಬ್ದಾರಿಯ ಮೇಲೆ ಶೇಕಡಾ 2ರಷ್ಟನ್ನು ನಗದಿನಲ್ಲಿಡಬೇಕು ಎಂಬ ನಿಯಮವು 1962ಕ್ಕಿಂತ ಮುಂಚೆ ಜಾರಿಯಲ್ಲಿತ್ತು.  ಆದರೆ ಈ ಕಾಯಿದೆಗೆ 1962ರಲ್ಲಿ ತಿದ್ದುಪಡಿ ತಂದು ಬೇಡಿಕೆ ಮತ್ತು ಸಾವಧಿ ಜವಾಬ್ದಾರಿಗಳ ನಡುವಣ ವ್ಯತ್ಯಾಸವನ್ನು ತೆಗೆದುಹಾಕಲಾಯಿತು. ನಂತರ ಬ್ಯಾಂಕುಗಳು ತಮ್ಮ ಬೇಡಿಕೆ ಮತ್ತು ಸಾವಧಿ ಜವಾಬ್ದಾರಿಗಳ ಒಟ್ಟು ಕನಿಷ್ಠ ಶೇಕಡಾ 3%ರಷ್ಟನ್ನು ಮೀಸಲಿನಲ್ಲಿಡಲು ಆದೇಶಿಸಿತು. ಇದನ್ನು ನಗದು ಮೀಸಲು ಅನುಪಾತ ಎನ್ನುತ್ತಾರೆ. ಇದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಯಾವಾಗಬೇಕಾದರೂ ಬದಲಾಯಿಸಬಹುದು.
ಅನುಸೂಚಿತ ಬ್ಯಾಂಕುಗಳು ತಮ್ಮಲ್ಲಿನ ಅರ್ಹ ಪ್ರತಿಭೂತಿಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್‍ನಿಂದ ಸಾಲವನ್ನು ಪಡೆಯಬಹುದು. ಅಥವಾ ತುಂಬಾ ಅವಶ್ಯಕತೆಯಿದ್ದಾಗ ತಮ್ಮ ಶ್ರೇಷ್ಠ ಶ್ರೇಣಿಯ ವಾಣಿಜ್ಯ ಬಿಲ್ಸ್‍ಗಳನ್ನು ಮರು ವಟಾಯಿಸಿ ಸಹ ಹಣವನ್ನು ಪಡೆಯಬಹುದು. ಬ್ಯಾಂಕುಗಳು ತಮ್ಮ ಸಂಕಷ್ಟದ ಸಮಯದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯೆ ಪ್ರವೇಶಿಸಿ ಬ್ಯಾಂಕರ್ಸ್‍ಗೆ ಬ್ಯಾಂಕ್ ಆಗಬಹುದು ಮತ್ತು ಬ್ಯಾಂಕ್‍ಗಳಿಗೆ ಕೊನೆಯ ಏಕೈಕ ಮಾರ್ಗೋಪಾಯದ ಸಾಲದಾತನಾಗಬಹುದು. 
4. ಋಣ ನಿಯಂತ್ರಣ :
ಭಾರತೀಯ ರಿಸರ್ವ್ ಬ್ಯಾಂಕ್ ಋಣ ನಿಯಂತ್ರಣದ  ಕಾರ್ಯವನ್ನೂ  ನಿರ್ವಹಿಸುತ್ತದೆ.  ಭಾರತದಲ್ಲಿನ ಬ್ಯಾಂಕುಗಳು ಸೃಷ್ಟಿಸಿರುವ ಒಟ್ಟಾರೆ ಸಾಲ-ಮುಂಗಡಗಳನ್ನು ತನ್ನ ಪ್ರಭಾವದಿಂದ ಪರಿಮಾಣಾತ್ಮಕವಾಗಿ ಹಾಗೂ ಗುಣಾತ್ಮಕವಾಗಿ ನಿಂತ್ರಿಸುವ ಮತ್ತು ನಿರ್ವಹಿಸುವ ಕಾರ್ಯವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮಾಡುತ್ತದೆ. ಭಾರತೀಯ ನಿಯಂತ್ರಣ ಕಾಯಿದೆ, 1949ರ ಅನುಸಾರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಯಾವುದೇ ಬ್ಯಾಂಕನ್ನಾಗಲಿ ಅಥವಾ ಎಲ್ಲಾ ಬ್ಯಾಂಕನ್ನಾಗಲಿ ನಿರ್ದಿಷ್ಟ ವ್ಯಕ್ತಿಗೆ ಅಥವಾ ಗುಂಪಿಗೆ ಕೆಲವು ನಿರ್ದಿಷ್ಟ ಪ್ರತಿಭೂತಿಗಳ ಮೇಲೆ ಸಾಲ ಕೊಡದಿರುವಂತೆ ತಡೆಯುವ ಅಧಿಕಾರವಿದೆ.  1956ರಿಂದ ಭಾರತೀಯ ರಿಸರ್ವ್ ಬ್ಯಾಂಕ್ ಕೆಲವು ವಿಶಿಷ್ಟ ಋಣ ನಿಯಂತ್ರಣ  ಕಾರ್ಯಗಳನ್ನು ಮಾಡುತ್ತಾ ಬಂದಿದೆ.             
ಭಾರತದ ಹಣ ಮಾರುಕಟ್ಟೆಯ ಮೇಲೆ ನಿಯಂತ್ರಣ ಸಾಧಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಹಲವಾರು ಅಸ್ತ್ರಗಳನ್ನು ಹೊಂದಿದೆ. ಪ್ರತಿಯೊಂದು ಬ್ಯಾಂಕು ಭಾರತದಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸಲು ಭಾರತೀಯ ರಿಸರ್ವ್ ಬ್ಯಾಂಕ್‍ನ ಪೂರ್ವಾನುಮತಿಯು ಅವಶ್ಯಕವಾಗಿದೆ.  ತಾನು ನಿಗದಿಪಡಿಸಿದ ನಿಬಂಧನೆಗಳನ್ನು ಪರಿಪಾಲಿಸದ ಬ್ಯಾಂಕುಗಳ ಅನುಮತಿಯನ್ನು ರದ್ದು ಮಾಡುವ ಅಧಿಕಾರವು ಭಾರತೀಯ ರಿಸರ್ವ್ ಬ್ಯಾಂಕ್‍ಗಿದೆ. ಹೊಸ ಶಾಖೆಗಳನ್ನು ಪ್ರಾರಂಭಿಸುವಾಗಲೂ ಭಾರತೀಯ ರಿಸರ್ವ್ ಬ್ಯಾಂಕ್‍ನ ಅನುಮತಿಯು ಅಗತ್ಯವಾಗಿದೆ. ಪ್ರತಿಯೊಂದು ಅನುಸೂಚಿತ ವಾಣಿಜ್ಯ ಬ್ಯಾಂಕುಗಳು ಸಾಪ್ರಾಹಿಕವಾಗಿ ತನ್ನ ಬ್ಯಾಂಕಿನ ಅಸ್ತಿ ಮತ್ತು ಜವಾಬ್ದಾರಿಗಳ ಬಗ್ಗೆ ವಿವರಣೆಯನ್ನುಸಲ್ಲಿಸುತ್ತಿರಬೇಕು. ತನಗೆ ಬೇಕಾದ ಯಾವುದೇ ಮಾಹಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಯಾವುದೇ ಬ್ಯಾಂಕಿನಿಂದ ಆದೇಶಿಸಿ ಪಡೆದುಕೊಳ್ಳುವ ಅಧಿಕಾರವನ್ನು ನೀಡಲಾಗಿದೆ. ಪ್ರತಿಯೊಂದು ಬ್ಯಾಂಕಿನ ಋಣ ನಿರ್ವಹಣೆಯ ಸ್ಥಿತಿಯು ಸರಿಯಾಗಿರುವಂತೆ ಪರಿಶೀಲಿಸುತ್ತಿರಲು ಈ ಮಾಹಿತಿಗಳು ಬ್ಯಾಂಕಿಗೆ ಅವಶ್ಯಕವಾಗಿದೆ. ಯಾವುದೇ ಬ್ಯಾಂಕಿನ ಲೆಕ್ಕಪತ್ರಗಳನ್ನು, ಖಾತೆಗಳನ್ನು, ಬ್ಯಾಂಕ್ ಮತ್ತು ಅದರ ಶಾಖೆಗಳನ್ನು ಪರಿಶೀಲಿಸಲು ಮತ್ತು ಲೆಕ್ಕಪರಿಶೋಧನೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್‍ಗೆ ಪೂರ್ಣ ಪ್ರಮಾಣದ ಅಧಿಕಾರವನ್ನು ನೀಡಲಾಗಿದೆ. 
ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ಎಲ್ಲ ಬ್ಯಾಂಕಿಂಗ್ ಸಂಸ್ಥೆಗಳ ಮೇಲೆ ಪರಮೋಚ್ಛವಾದ ನಿಯಂತ್ರಣ ಹೊಂದಿರುವುದರಿಂದ ಈ ಕೆಳಗಿನ ಕೆಲವು ಅಧಿಕಾರಗಳು ಬ್ಯಾಂಕಿಗೆ ದತ್ತವಾಗಿ ಬಂದಿದೆ.
(1). 	ಎಲ್ಲ ಅನುಸೂಚಿತ ಬ್ಯಾಂಕುಗಳ ನಗದು ಶಿಲ್ಕನ್ನು ನಿರ್ವಹಿಸುವುದು.
(2). 	ಗುಣಾತ್ಮಕವಾಗಿಯೂ ಹಾಗೂ ಪರಿಮಾಣಾತ್ಮಕವಾಗಿಯೂ ಎಲ್ಲ ಬ್ಯಾಂಕುಗಳ ಋಣ 
ನಿರ್ವಹಣೆಯನ್ನು  ನಿಯಂತ್ರಿಸುವುದು.
(3). 	ದೇಶದ ಇಡೀ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹಲವಾರು ರೀತಿಗಳಿಂದ ನಿಯಂತ್ರಿಸುತ್ತದೆ. ಅನುಮತಿ 
ನೀಡುವಿಕೆ.  ಲೆಕ್ಕ ಪರಿಶೋಧನೆ, ಪರಿಶೀಲನೆ ಮತ್ತು ಮಾಹಿತಿ ಸಂಗ್ರಹಣೆಯಿಂದ ನಿಯಂತ್ರಣ ವನ್ನು ಸಾಧಿಸುತ್ತದೆ.
(4). 	ಎಲ್ಲ ಭಾರತೀಯ ಹಾಗೂ ಇಲ್ಲಿ ಶಾಖೆಗಳಿರುವ ಎಲ್ಲ ವಿದೇಶೀ ಬ್ಯಾಂಕುಗಳಿಗೆ ಸಾಲದಾತನಾಗಿ 
ಕಾರ್ಯ ನಿರ್ವಹಿಸುವುದಲ್ಲದೆ ಅವರ ಬಿಲ್ಸ್‍ಗಳನ್ನು ಮರು ವಟಾಯಿಸಿಕೊಡುವುದರ ಮೂಲಕ ಸಹಾಯ ಮಾಡುತ್ತದೆ.
5. ವಿದೇಶೀ ಮೀಸಲು ನಿಧಿಗಳ ಸಂರಕ್ಷಣೆಯ ಕಾರ್ಯ ನಿರ್ವಹಣೆ 
ವಿದೇಶಿ ವಿನಿಮಯ ದರದ ನಿರ್ವಹಣೆಯನ್ನು ಮಾಡುವುದು ರಿಸರ್ವ್ ಬ್ಯಾಂಕಿನ ಒಂದು ಮುಖ್ಯವಾದ ಕಾರ್ಯವಾಗಿದೆಯಲ್ಲದೆ ಅದರ ಜವಾಬ್ದಾರಿಯೂ ಕೂಡ ಆಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ, 1934ರ ಪ್ರಕಾರ ರಿಸರ್ವ್ ಬ್ಯಾಂಕ್ ರೂ.10,000/-ಕ್ಕೆ ಕಡಿಮೆ ಇಲ್ಲದಂತೆ ಬ್ರಿಟಿಷ್ ಸ್ಟರ್ಲಿಂಗ್‍ನ್ನು ಕೊಳ್ಳುವ ಅಥವಾ ಮಾರುವ ಕೆಲಸವನ್ನು ಮಾಡಬಹುದಾಗಿತ್ತು. ಆಗ ವಿದೇಶೀ ವಿನಿಮಯವನ್ನು ಕರೆನ್ಸಿ ದ್ವಯಗಳಲ್ಲಿ ದರ ನಿಶ್ಚಯಿಸುವ ಪದ್ಧತಿ ಇತ್ತು. ಆದರೆ 01-03-1993 ರಿಂದ ಏಕರೀತಿಯ ವಿದೇಶೀ ವಿನಿಮಯ ದರ ನಿಶ್ಚಯ ಪದ್ಧತಿಯನ್ನು ಜಾರಿಗೆ ತರಲಾಯಿತು. ಅಂದರೆ 1-3-1993ರ ಮೊದಲು ರೂ.100 ಕ್ಕೆ ಎಷ್ಟು ವಿದೇಶೀ ಕರೆನ್ಸಿಯೆಂದು ಲೆಕ್ಕ ಹಾಕುತ್ತಿದ್ದರು. ಈಗ ಒಂದು ವಿದೇಶೀ ಕರೆನ್ಸಿಗೆ ಎಷ್ಟು ರೂ.ಗಳು ಎಂದು ಲೆಕ್ಕಹಾಕುತ್ತಾರೆ. ಉದಾಹರಣೆಗೆ ಆಗ್ಗೆ ರೂ.100 = $3.2250 ಎಂದು ನಿಶ್ಚಯಿಸಿದರೆ, ಇಂದು ಒಂದು ಡಾಲರ್ ಗೆ $ 1=ರೂ.43.70 ಎಂದು ನಿಶ್ಚಯಿಸುತ್ತಾರೆ. ಮೊದಲಿನ ಹಣ ವಿನಿಮಯ ಲೆಕ್ಕಾಚಾರವು ಬಹಳ ಕ್ಲಿಷ್ಟವಾಗಿತ್ತು. ಈಗ ಇದು ಬಹಳ ಸುಲಭವಾಗಿದೆ.            ಭಾರತವು 1946ರಲ್ಲಿ ಅಂತರರಾಷ್ಟ್ರೀಯ ಹಣಕಾಸು  ನಿಧಿಯ ಸದಸ್ಯತ್ವವನ್ನು ಪಡೆದ ಮೇಲೆ ಎಲ್ಲ ಸದಸ್ಯ ರಾಷ್ಟ್ರಗಳ ಜೊತೆ ಕರೆನ್ಸಿಯ ನಿಶ್ಚಿತ ವಿನಿಮಯ ದರವನ್ನು ಪಾಲಿಸಿಕೊಂಡು ಬರುವುದು ಭಾರತೀಯ ರಿಸರ್ವ್ ಬ್ಯಾಂಕಿನ ಒಂದು ಪ್ರಮುಖ ಜವಾಬ್ದಾರಿಯಾಗಿದೆ.      
ಇದಲ್ಲದೆ ಎಲ್ಲ ಅಂತರ ರಾಷ್ಟ್ರೀಯ ಕರೆನ್ಸಿಗಳ ಪಾಲಕನಾಗಿ ಕರ್ತವ್ಯವನ್ನು ನಿರ್ವಹಿಸುವುದು ಭಾರತೀಯ ರಿಸರ್ವ್ ಬ್ಯಾಂಕ್‍ನ ಮುಖ್ಯ ಕೆಲಸಗಳಲ್ಲೊಂದಾಗಿದೆ. ಬ್ಯಾಂಕು ಸಾಕಷ್ಟು ಡಾಲರ್ ಮತ್ತು ಸ್ಟರ್ಲಿಂಗ್‍ಗಳನ್ನು ಶಿಲ್ಕನ್ನು ಪಾಲಿಸುವುದರ ಜೊತೆಗೆ ದೇಶದಲ್ಲಿ ವಿನಿಮಯ ನಿಯಂತ್ರಣವನ್ನು ನಿರ್ವಹಿಸುವುದೂ ಆದ್ಯ ಕರ್ತವ್ಯವಾಗಿದೆ. 
6. ಮೇಲ್ವಿಚಾರಣಾ ಕೆಲಸಗಳು:
ಈ ಸಾಂಪ್ರದಾಯಿಕ ಕೇಂದ್ರೀಯ ಬ್ಯಾಂಕಿಂಗ್‍ನ ಕೆಲಸಗಳಲ್ಲದೆ, ಭಾರತೀಯ ರಿಸರ್ವ್ ಬ್ಯಾಂಕ್‍ಗೆ ಹಣಕಾಸೇತರ ಕಾರ್ಯಗಳಾದ ಬ್ಯಾಂಕ್‍ಗಳ ಮೇಲುಸ್ತುವಾರಿ ಕೆಲಸವು ಭಾರತದಲ್ಲಿ ಉತ್ತಮ ಬ್ಯಾಂಕಿಂಗ್ ಮಟ್ಟವನ್ನು ಕಾಯ್ದುಕೊಳ್ಳುವುದಕ್ಕೆ ಅತ್ಯವಶ್ಯಕವಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ, 1934 ಹಾಗು ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1949 ಸಾಕಷ್ಟು ಅಧಿಕಾರ ನೀಡಿ ಎಲ್ಲ ಸಹಕಾರಿ ಹಾಗು ವಾಣಿಜ್ಯ ಬ್ಯಾಂಕುಗಳ ಮೇಲುಸ್ತುವಾರಿ ಮಾಡುವುದು, ಅವುಗಳ ಸ್ಥಾಪನೆಗೆ ಅನುಮತಿ ಪತ್ರ ನೀಡುವುದು, ಬ್ಯಾಂಕ್‍ಗಳ ಶಾಖಾ ವಿಸ್ತರಣೆ, ಅವುಗಳ ಆಸ್ತಿಗಳ ದ್ರವ್ಯತ್ವ, ಅವುಗಳ ಕೆಲಸ-ಕಾರ್ಯಗಳ ವಿಧಾನ ಮತ್ತು ನಿರ್ವಹಣೆ, ಬ್ಯಾಂಕ್‍ಗಳ ವಿಲೀನೀಕರಣ, ಪುನರ್ನಿರ್ಮಾಣ, ಹಾಗು ಸಮಾಪನಗಳನ್ನು ಮೇಲುಸ್ತುವಾರಿ ಮಾಡುವ, ನಿಯಂತ್ರಿಸುವ ಹಕ್ಕನ್ನು ನೀಡಿದೆ.  ನಿಯತಕಾಲಿಕವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕುಗಳ ಲೆಕ್ಕ ಪರಿಶೋಧಿಸುವ, ಬ್ಯಾಂಕಿನ ಲೆಕ್ಕಪತ್ರಗಳ ಪರಿಶೀಲನೆಯಲ್ಲಿ ಅವಶ್ಯಕವಾದ ಎಲ್ಲ ಮಾಹಿತಿಗಳನ್ನು, ಕಡತಗಳನ್ನು, ವಿವರಣೆಗಳನ್ನು ಆದೇಶಿಸಿ ಉತ್ತರ ಪಡೆಯುವ ಹಕ್ಕು ರಿಸರ್ವ್ ಬ್ಯಾಂಕಿಗಿದೆ. 1969ರ ಜುಲೈನಲ್ಲಿ 14 ಬ್ಯಾಂಕುಗಳ ರಾಷ್ಟ್ರೀಕರಣವಾದಾಗಿನಿಂದ ರಿಸರ್ವ್ ಬ್ಯಾಂಕಿಗೆ ಇನ್ನೂ ಹೆಚ್ಚಿನ ಜವಾಬ್ದಾರಿಗಳು ಬಂದಿವೆ. ಬ್ಯಾಂಕ್‍ಗಳ ಅಭಿವೃದ್ಧಿ, ವಿಕಸನ, ವಿಸ್ತಾರಗಳ ಜೊತೆಗೆ ಋಣ ನಿರ್ವಹಣೆ ಮಾಡುತ್ತ ದೇಶದ ಆರ್ಥಿಕ ಅಭಿವೃದ್ಧಿಯ ಸಾಮಾಜಿಕ ಉದ್ದೇಶಗಳನ್ನು ಸಾಧಿಸುವ ಜವಾಬ್ದಾರಿ ಸಹ ಇದೆ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ವಿಶಿಷ್ಟ ಕಾರ್ಯ ತತ್ಪರತೆ, ಯಶಸ್ವಿ ಜವಾಬ್ದಾರಿ ನಿರ್ವಹಣೆಗಳಿಂದ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯನ್ನು ಒಂದು ಉತ್ತಮ ಗುಣಮಟ್ಟಕ್ಕೆ ತಂದಿದೆ. 
7. ಪ್ರಗತಿಪರ ಕೆಲಸಗಳು :
            ದೇಶದಲ್ಲಿ ಆರ್ಥಿಕ ಅಭಿವೃದ್ಧಿಯು ಒಂದು ವಿಶಿಷ್ಟ ರೀತಿಯಲ್ಲಿ ಸಾಗುತ್ತಿದ್ದಂತೆಯೇ ರಿಸರ್ವ್ ಬ್ಯಾಂಕಿನ ಕೆಲಸಗಳ ಪಟ್ಟಿಯು ಹಿರಿದಾಗುತ್ತಲೇ ನಡೆದಿದೆ. ಈಗ ಕೇಂದ್ರೀಯ ಬ್ಯಾಂಕಿನ ಹೊರತಾದ ಕೆಲವು ಅಭಿವೃದ್ಧಿಪರ ಮತ್ತು ಪ್ರಗತಿಪರ ಕಾರ್ಯಗಳನ್ನೂ ಮಾಡುತ್ತಿದೆ. ಬ್ಯಾಂಕಿಂಗ್ ಪ್ರವೃತ್ತಿಯನ್ನು ಬೆಳೆಸುವುದು, ಗ್ರಾಮೀಣ ಮತ್ತು ಅರೆ-ಪಟ್ಟಣಗಳಿಗೆ ಬ್ಯಾಂಕಿಂಗ್ ಸೇವೆಯನ್ನು ವಿಸ್ತರಿಸುವುದು, ವಿಶಿಷ್ಟ ಹಾಗು ತಜ್ಞ ಆರ್ಥಿಕ ಸಂಸ್ಥೆಗಳನ್ನು ಹುಟ್ಟುಹಾಕಿ ಅಭಿವೃದ್ಧಿಗೆ ನೆರವಾಗುವುದು ಮೊದಲಾದ ಕಾರ್ಯಗಳನ್ನು ನಿರ್ವಹಿಸುವ ಕೆಲಸಗಳು ರಿಸರ್ವ್ ಬ್ಯಾಂಕಿಗೆ ಬಂತು. ಅದೇ ರೀತಿ ರಿಸರ್ವ್ ಬ್ಯಾಂಕ್ ಅನೇಕ ಆರ್ಥಿಕ ಸಂಸ್ಥೆಗಳ ಸ್ಥಾಪನೆಗೆ ಪ್ರತ್ಯಕ್ಷ / ಪರೋಕ್ಷವಾಗಿ ನೆರವು ನೀಡಿತು. ಮೊದಲಿಗೆ ಭಾರತೀಯ ಕೈಗಾರಿಕಾ ಹಣಕಾಸು ನಿಗಮ, 1948ರ ಜುಲೈನಲ್ಲಿ ಸ್ಥಾಪಿತವಾಯಿತು. ನಂತರ 1-7-1993ರಿಂದ ಅದನ್ನು ಒಂದು ಕಂಪನಿಯಾಗಿ ಪರಿವರ್ತಿಸಲಾಯಿತು.  ಇದಕ್ಕೆ 1987ರಲ್ಲಿ ತಿದ್ದುಪಡಿಯಾಯಿತು. ಇದಕ್ಕೂ ಮುಂಚೆ ಎಲ್ಲಾ ರಾಜ್ಯಗಳಲ್ಲಿ ಹಣಕಾಸು ನಿಗಮಗಳನ್ನು ಸ್ಥಾಪಿಸಲು 1951gಲ್ಲಿ ಸರ್ಕಾರವು ಕಾಯಿದೆಯನ್ನು ತಂದು ಅದು 01-08-1952ರಿಂದ ಜಾರಿಗೆ ಬಂದಿತು. ಭಾರತೀಯ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ಕಾಯಿದೆ, 1964ರಲ್ಲಿ ಬಂದು ಬ್ಯಾಂಕ್ 01-07-1964ರಿಂದ ಕಾರ್ಯಾರಂಭ ಮಾಡತೊಡಗಿತು. ಇದು ಮೊದಲಿಗೆ ರಿಸರ್ವ್ ಬ್ಯಾಂಕಿನ ಒಂದು ಅಂಗ ಸಂಸ್ಥೆಯಾಗಿತ್ತು. ಆದರೆ 1976ರಲ್ಲಿ ಸಾರ್ವಜನಿಕ ಹಣಕಾಸು ಸಂಸ್ಥೆಗಳ ಕಾಯಿದೆ, 1976ಕ್ಕೆ ತಿದ್ದುಪಡಿಯಾಗಿ ಈ ಭಾರತೀಯ ಕೈಗಾರಿಕಾ ಅಭಿವೃದ್ದಿ ಬ್ಯಾಂಕ್(ಐಡಿಬಿಐ) ಭಾರತ ಸರ್ಕಾರದ ಒಂದು ಅಂಗ ಸಂಸ್ಥೆಯಾಯಿತು. ಭಾರತೀಯ ಕೈಗಾರಿಕಾ ವಿನಿಯೋಜನೆ (ಹೂಡಿಕೆ) ಬ್ಯಾಂಕ್ ಮೊದಲಿಗೆ ಭಾರತೀಯ ಕೈಗಾರಿಕಾ ಪುನರ್ನಿರ್ಮಾಣ ಬ್ಯಾಂಕ್ ಎಂದು 1971ರಲ್ಲಿ ಸ್ಥಾಪಿತವಾಗಿತ್ತು. ಆದರೆ ದಿನಾಂಕ 21-3-1987ರಿಂದ ಅದರ ಹೆಸರು ಬದಲಾಗಿ ಭಾರತೀಯ ಕೈಗಾರಿಕಾ ವಿನಿಯೋಜನೆ ಬ್ಯಾಂಕ್ ಎಂದು ಕಾರ್ಯವಹಿಸಿಕೊಂಡಿತು. ಈ ಬಗ್ಗೆ ಇದ್ದ ಒಂದು ನಿಗಮವೂ 1984ರಲ್ಲೇ ಐ ಆರ್ ಬಿ ಐ ನಲ್ಲಿ  ಸೇರ್ಪಡೆಯಾಗಿ ಹೋಯಿತು. ಭಾರತೀಯ ಕೃಷಿ ಮರುಹಣಕಾಸು ನಿಗಮವೂ 1963ರಲ್ಲಿ ಸ್ಥಾಪಿತವಾಯಿತು.  ಅದಲ್ಲದೆ ಕೃಷಿ ಮರುಹಣಕಾಸು ಮತ್ತು ಅಭಿವೃದ್ಧಿ ನಿಗಮವನ್ನೂ ಸ್ಥಾಪಿಸಿದೆ. ಜೊತೆಗೆ ಸಹಕಾರಿ ಆಂದೋಲನಕ್ಕೆ ಬೆಂಬಲ ನೀಡಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳನ್ನು ಸಹಕಾರೀ ತತ್ತ್ವ ಬೆಳೆದು ಖಾಸಗಿ ಲೇವಾದೇವಿಗಾರರಿಂದ ಸಾಲಗಾರರ ಬವಣೆ ತಪ್ಪಲು ಕ್ರಮ ಕೈಗೊಂಡಿತು.
ಭಾರತೀಯ ರಿಸರ್ವ್ ಬ್ಯಾಂಕ್‍ನ ಕಾರ್ಯಗಳ ವರ್ಗೀಕರಣ :
ಭಾರತೀಯ ರಿಸರ್ವ್ ಬ್ಯಾಂಕ್ ನಿರ್ವಹಿಸುವ ಕೇಂದ್ರೀಯ ಬ್ಯಾಂಕ್‍ನ ಹಣಕಾಸಿನ ಕಾರ್ಯಗಳಾದ ಹಣ ಮತ್ತು ಋಣಗಳ ನಿಯಂತ್ರಣ ಮತ್ತು ನಿರ್ವಹಣೆಯು ಪ್ರಮುಖವಾದುದು. ನೋಟು-ನಾಣ್ಯಗಳ ಪೂರೈಕೆ, ಬ್ಯಾಂಕ್ ಸಾಲಗಳ ನಿಯಂತ್ರಣ, ವಿದೇಶೀ ವಿನಿಮಯ ಕಾರ್ಯಗಳ ನಿಯಂತ್ರಣ, ಸರ್ಕಾರಕ್ಕೆ ಬ್ಯಾಂಕ್ ಆಗಿರುವುದು, ಹಣ ಮಾರುಕಟ್ಟೆಯ ಮೇಲುಸ್ತುವಾರಿ ಮಾಡುವುದು ಮೊದಲಾದ ಕೆಲಸಗಳು ಮಹತ್ವದ ಪರಿಣಾಮವನ್ನು ಬೀರುವಂತಹವುಗಳು. ರಿಸರ್ವ್ ಬ್ಯಾಂಕಿನ ಹಣಕಾಸಿನ ಕೆಲಸಗಳು, ಕರ್ತವ್ಯಗಳು ಬಹಳ ಮಹತ್ವದ್ದಾಗಿದೆ.  ಏಕೆಂದರೆ, ಅವು ಇಡೀ ದೇಶದ ಹಣದ ಗಾತ್ರ ಮತ್ತು  ಋಣದ ಪರಿಮಾಣವನ್ನು ನಿಯಂತ್ರಿಸುತ್ತವೆ.  
ಹಣಕಾಸಿನ ಕೆಲಸಗಳಂತೆಯೇ ಹಣಕಾಸೇತರ ಕಾರ್ಯಗಳೂ ಅಷ್ಟೇ ಮಹತ್ವದವುಗಳಾಗಿವೆ. ಭಾರತದಲ್ಲಿನ ಆರ್ಥಿಕ ಬಡತನದ ಕಾರಣ ಇದಕ್ಕೆ ಬಹಳ ಪ್ರಾಮುಖ್ಯತೆ ಇದೆ. ರಿಸರ್ವ್ ಬ್ಯಾಂಕಿನ ಮೇಲ್ವಿಚಾರಣಾ ಕಾರ್ಯಗಳು ಹಣಕಾಸೇತರ ಕರ್ತವ್ಯಗಳಾದರೂ ಕೆಲವರು ಇದನ್ನೂ ಹಣಕಾಸಿನ ಕೆಲಸಗಳೇ ಎಂದು ಭಾವಿಸಲಾಗಿದೆ. ಒಂದು ಉಚ್ಛ ಗುಣಮಟ್ಟದ ಬ್ಯಾಂಕಿಂಗ್ ಸಂಸ್ಥೆಯನ್ನು ಭಾರತದಲ್ಲಿ ನೆಲೆಯಾಗಿ ನಿಲ್ಲಿಸುವುದೇ ರಿಸರ್ವ್ ಬ್ಯಾಂಕಿನ ಪ್ರಮುಖ ಗುರಿಯಾಗಿದೆ. ಈ ದಿಶೆಯಲ್ಲಿ ಸರ್ಕಾರವು ರಿಸರ್ವ್ ಬ್ಯಾಂಕಿಗೆ ಅನೇಕ ಅಧಿಕಾರಗಳನ್ನು ಹಸ್ತಾಂತರ ಮಾಡಿ ಅದಕ್ಕೆ ಹೆಚ್ಚಿನ ಬಲ ನೀಡಿದೆ. ಈಗ ರಿಸರ್ವ್ ಬ್ಯಾಂಕಿನ ಉಸ್ತುವಾರಿ ಅಧಿಕಾರ ವ್ಯಾಪ್ತಿಯು ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಿಗೂ ವಿಸ್ತರಿಸಿದೆ. ರಿಸರ್ವ್ ಬ್ಯಾಂಕ್ ಪ್ರಗತಿಪರ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತ ಕೈಗಾರಿಕಾ ಮತ್ತು ಕೃಷಿ ಕ್ಷೇತ್ರಗಳಲ್ಲಿ ಅನೇಕ ಅಭಿವೃದ್ಧಿಪೂರ್ಣ ಬದಲಾವಣೆಗಳನ್ನು ತಂದಿದೆ. 
8. ವಾಣಿಜ್ಯ ಬ್ಯಾಂಕುಗಳ ಋಣ ನಿಯಂತ್ರಣ  :
	ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1949ರ ಕಲಂ 21 ಮತ್ತು ಕಲಂ 35-ಂ ರ ಅನ್ವಯ ವಾಣಿಜ್ಯ ಬ್ಯಾಂಕುಗಳ  ಸಾಲ ಮತ್ತು ಮುಂಗಡಗಳ ನಿಯಂತ್ರಣದ ಅಧಿಕಾರವನ್ನು ರಿಸರ್ವ್ ಬ್ಯಾಂಕಿಗೆ ನೀಡಲಾಗಿದೆ. ಈ ನಿಯಂತ್ರಣವನ್ನು ರಿಸರ್ವ್ ಬ್ಯಾಂಕ್ ಎರಡು ರೀತಿಯಲ್ಲಿ ಮಾಡುತ್ತದೆ. 1) ಗುಣಾತ್ಮಕ  ನಿಯಂತ್ರಣ 2) ಗಾತ್ರಾತ್ಮಕ  ನಿಯಂತ್ರಣ. ಗುಣಮಟ್ಟದ ಋಣ ನಿಯಂತ್ರಣದ ನಿರ್ಬಂಧಗಳನ್ನು ಆಯ್ದ ಋಣ ನಿಯಂತ್ರಣ(ಸೆಲೆಕ್ಟಿವ್ ಕ್ರೆಡಿಟ್ ಕಂಟ್ರೋಲ್) ಎನ್ನುತ್ತಾರೆ. 
	ಆಯ್ದ ಋಣ ನಿಯಂತ್ರಣದ ಪ್ರಕಾರ ರಿಸರ್ವ್ ಬ್ಯಾಂಕ್-ಸಾರ್ವಜನಿಕ ಹಿತದೃಷ್ಟಿಯಿಂದ, ಬ್ಯಾಂಕಿನ ನೀತಿಯ ದೃಷ್ಟಿಯಿಂದ ಮತ್ತು ಠೇವಣಿದಾರರ ಹಿತದೃಷ್ಟಿಯಿಂದ ಬ್ಯಾಂಕಿಗೆ ಅಥವಾ ಬ್ಯಾಂಕುಗಳಿಗೆ ಸಾಲ-ಮುಂಗಡಗಳ ನೀಡಿಕೆಯಲ್ಲಿ ಕೆಲವು ವಿಧಿ-ವಿಧಾನಗಳನ್ನು ಸೂಚಿಸಬಹುದು. ಎಲ್ಲ ಬ್ಯಾಂಕುಗಳು ಈ ಸೂಚನೆ, ಆದೇಶಗಳನ್ನು ಪರಿಪಾಲಿಸಲೇ ಬೇಕಾಗುತ್ತದೆ. ಉದಾಹರಣೆಗೆ:
ಯಾವ ಯಾವ ಉದ್ದೇಶಗಳಿಗೆ ಸಾಲಗಳನ್ನು ನೀಡಬಹುದು ಅಥವಾ ನೀಡಬಾರದು.
ಸಾಲಮಿತಿಯಲ್ಲಿನ ನಿರ್ದಿಷ್ಟ ಅಂತರ (ಮಾರ್ಜಿನ್) ಎಷ್ಟಿರಬೇಕೆಂಬುದರ ಸ್ಪಷ್ಟ ಸೂಚನೆ.
ಸಾಲದ ಮಿತಿಯ ಮೇಲೆ ನಿರ್ಬಂಧ ಹೇರಿಕೆ. ಯಾವ ಸಂಸ್ಥೆಗೆ, ಯಾವ ಸಂಘಟನೆಗೆ, ಯಾವ ಸಂಘಕ್ಕೆ, ಯಾವ ರೀತಿಯ ವ್ಯಕ್ತಿಗಳಿಗೆ ಕೊಡಬೇಕು ಕೊಡಬಾರದೆಂಬುದರ ನಿರ್ಬಂಧತೆ. ಇದಕ್ಕೆ ಬ್ಯಾಂಕಿನ ಬಂಡವಾಳ, ಠೇವಣಿಗಳು, ಮೀಸಲು ನಿಧಿಗಳು, ಮುಂತಾದ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮಾಡುವ ನಿಬಂಧನೆಗಳು.
ಬಡ್ಡಿ ದರದ ಮೇಲಿನ ಮಿತಿ, ಇತರ ನಿರ್ಬಂಧಗಳು. 
ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಯ ಪ್ರಕಾರ ರಿಸರ್ವ್ ಬ್ಯಾಂಕಿಗೆ ಈ ನಿಯಂತ್ರಣಗಳ ಅಧಿಕಾರವಿದ್ದರೂ ಸಹ ಅದು ಆಗ್ಗೆ ಈ ಅಧಿಕಾರಗಳನ್ನು ಉಪಯೋಗಿಸಿರಲಿಲ್ಲ. 1956ರ ಮಧ್ಯಾವಧಿಯಿಂದ ಈ ಅಧಿಕಾರಗಳನ್ನು ಉಪಯೋಗಿಸಿ ಕೊಂಡು ಬ್ಯಾಂಕುಗಳ ಸಾಲ-ಮುಂಗಡಗಳ ನೀಡುವಿಕೆಯನ್ನು ನಿಯಂತ್ರಿಸಲಾರಂಭಿಸಿತು. ಈ ನಿಯಂತ್ರಣದ ಪ್ರಮುಖ ಸಾಧನಗಳೆಂದರೆ :
ಕೆಲವು ಆಯ್ದ ವಸ್ತುಗಳ ಮೇಲಿನ ಸಾಲ ಮಿತಿಯ ಅಂತರ(ಮಾರ್ಜಿನ್) ವನ್ನು ಕನಿಷ್ಠ ಮಟ್ಟಕ್ಕೆ ಇಳಿಸುವುದು. 
ಸಾಲದ ಮಿತಿಯ ಮೇಲೆ ನಿರ್ಬಂಧ ಹೇರುವುದು.
ಬಡ್ಡಿ ದರವನ್ನು ಕಡಿಮೆಗೊಳಿಸುವುದು, ಇತ್ಯಾದಿ.
ಮೊದಲೆರಡು ನಿರ್ಬಂಧಗಳು ಪರಿಮಾಣವನ್ನು ನಿಯಂತ್ರಿಸಿದರೆ ಮೂರನೆಯದು ಸಾಲದ ಖರ್ಚನ್ನು ಕಡಿಮೆ ಗೊಳಿಸುವುದು. ಈ ನಿಯಂತ್ರಣದ ಅಂಶಗಳನ್ನು ರಿಸರ್ವ್ ಬ್ಯಾಂಕ್ ಆಗಿಂದಾಗ್ಗೆ, ಕಾ¯ಕಾಲಕ್ಕೆ  ಬದಲಾಯಿಸುತ್ತ ನಿರ್ದೇಶಿಸುತ್ತಿರುವುತ್ತದೆ.. ಕೆಲವು ಸಲ ಇವುಗಳನ್ನು ಇಡೀ ವರ್ಷವಲ್ಲದೆ ಋತುಮಾಕ್ಕೆ ಅನುಗುಣವಾಗಿ   ನಿಬಂಧಗಳನ್ನು ಹೇರುವುದು. ಕೆಲವು ನಿರ್ದಿಷ್ಟ ಸರಕುಗಳ ಮೇಲೆ ವ್ಯಾಪಾರಿಗಳಿಗೆ, ತಯಾರಕರಿಗೆ ಸಾಲ ನಿರ್ಬಂಧವನ್ನು ಹೇರುವುದು ರಿಸರ್ವ್ ಬ್ಯಾಂಕಿನ ಒಂದು ನಿಯಂತ್ರಣ ಧೋರಣೆಯಾಗಿದೆ. ವಿಶೇಷವಾಗಿ ಕೆಲವು ಆಹಾರ ಧಾನ್ಯಗಳು, ಎಣ್ಣೆಬೀಜಗಳು, ಸಕ್ಕರೆ, ವನಸ್ಪತಿ ತೈಲಗಳು, ಬೆಲ್ಲ, ಖಾಂಡಸಾರಿ, ಹತ್ತಿ, ಕಪ್ಪ, ಹತ್ತಿ ಎಳೆ ಮೊದಲಾದವುಗಳು. ಹೀಗೆ ಆಯ್ದ ಋಣ ನಿಯಂತ್ರಣದಿಂದ ಗುಣಮಟ್ಟದ ನಿಯಂತ್ರಣವನ್ನು ರಿಸರ್ವ್ ಬ್ಯಾಂಕ್ ಸಾಧಿಸುತ್ತದೆ.
ಪರಿಮಾಣ ಅಥವಾ ಗಾತ್ರ ಮಟ್ಟದಲ್ಲಿನ ಋಣದ ನಿಯಂತ್ರಣದಿಂದ ಇಡೀ ದೇಶದ ಹಣ ಮತ್ತು ಋಣ ಮಾರುಕಟ್ಟೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಿಸುತ್ತದೆ. ಇದರ ಸಾಧಕ ಉಪಕರಣಗಳು ಮುಖ್ಯವಾಗಿ ಮೂರು ಇವೆ. ಅವು ಯಾವುವೆಂದರೆ :
ಬ್ಯಾಂಕ್ ದರ
ತೆರೆದ ಮಾರುಕಟ್ಟೆಯ ಕಾರ್ಯಾಚರಣೆ.
ವ್ಯತ್ಯಯದ ನಗದು ಮೀಸಲು ಅಗತ್ಯತೆ.
1. ಬ್ಯಾಂಕ್ ದರ : ಬ್ಯಾಂಕ್ ದರವೆಂದರೆ ರಿಸರ್ವ್ ಬ್ಯಾಂಕ್ ವಾಣಿಜ್ಯ ಬ್ಯಾಂಕುಗಳಿಂದ ಬಿಲ್ಸ್‍ಗಳನ್ನು ಕ್ರಯಿಸಲು ಅಥವಾ ವಿಕ್ರಯಿಸಲು ಸಿದ್ಧವಿರುವ ದರವೆಂದು ಅರ್ಥ. ಬ್ಯಾಂಕುಗಳಿಗೆ ತಾವು ಹೊಂದಿರುವ ಪ್ರತಿಭೂತಿಗಳ ಆಧಾರದ ಮೇಲೆ ಕೊಡುವ ಸಾಲವನ್ನೂ ಈ ಬ್ಯಾಂಕ್ ದರದ ಅನ್ವಯ ನೀಡುತ್ತದೆ.  ಈ ದರವನ್ನು ಬದಲಾಯಿಸುವುದರಿಂದ ರಿಸರ್ವ್ ಬ್ಯಾಂಕ್ ತಾನು ನೀಡುವ ಸಾಲದ ಬೆಲೆಯನ್ನು ಪ್ರಭಾವÀಗೊಳಿಸುತ್ತದೆ. ಬಡ್ಡಿದರವು ಹೆಚ್ಚಾದರೆ ಸಾಲಕ್ಕೆ ಹೆಚ್ಚು ಬೆಲೆಯನ್ನು ತೆರಬೇಕಾಗುವುದರಿಂದ ಸಾಲ ಮಾಡುವ ಉತ್ಸಾಹವನ್ನು ಕುಗ್ಗಿಸುತ್ತದೆ. ಆದರೆ ಆದೇ ಬ್ಯಾಂಕು ದರವನ್ನು ಕಡಿಮೆಗೊಳಿಸಿದರೆ ಸಾಲದ ಬೆಲೆಯು ಕಡಿಮೆಯಾಗಿ ಹೆಚ್ಚು ಸಾಲಕೊಳ್ಳಲು ಪ್ರೋತ್ಸಾಹ ನೀಡಿದಂತಾಗುತ್ತದೆ. ಹೀಗೆ ಬ್ಯಾಂಕುಗಳು ತೆಗೆದುಕೊಳ್ಳುವ ಸಾಲ ಪರಿಮಾಣವು ಬ್ಯಾಂಕ್ ದರವನ್ನು ಅವಲಂಬಿಸಿರುತ್ತದೆ. ಸಾಲದ ಪರಿಮಾಣ ಹಿಗ್ಗುವುದು, ಕುಗ್ಗುವುದು ನಡೆಯುವುದರಿಂದ ದೇಶದ ಸಾಲ ಮಾರುಕಟ್ಟೆಯಲ್ಲಿ ಏರಿಳಿತಗಳಾಗುತ್ತದೆ. ಪರಿಸ್ಥಿತಿಗನುಗುಣವಾಗಿ ಈ ಕ್ರಮವನ್ನನುಸರಿಸಿ ದೇಶದ ಸಾಲದ ಮಾರುಕಟ್ಟೆಯನ್ನು, ಹಣದ ಮಾರುಕಟ್ಟೆಯನ್ನು ನಿಯಂತ್ರಿಸುತ್ತದೆ. 				 (ನೋಡಿ : ಬ್ಯಾಂಕು ದರ)
2. ತೆರೆದ ಮಾರುಕಟ್ಟೆಯ ಕಾರ್ಯಾಚರಣೆ : ಈ ಸಾಧನದಿಂದ ರಿಸರ್ವ್ ಬ್ಯಾಂಕ್ ದೇಶದ ಮಾರುಕಟ್ಟೆಯಲ್ಲಿ ಪರಿಸ್ಥಿತಿಗನುಗುಣವಾಗಿ ಪ್ರತಿಭೂತಿಗಳನ್ನು ಕೊಳ್ಳುವುದು ಅಥವಾ ಮಾರುವುದು  ಮಾಡುತ್ತದೆ. ಇದರಿಂದ ವಾಣಿಜ್ಯ ಬ್ಯಾಂಕುಗಳ ತಮ್ಮ ನಿಧಿಗಳನ್ನು ಅದಕ್ಕೆ ತಕ್ಕಂತೆ ಹೆಚ್ಚು, ಕಡಿಮೆ ಮಾಡುತ್ತವೆ. ಪ್ರತಿಭೂತಿಗಳÀ ಮಾರುವಿಕೆಯಿಂದ ವಾಣಿಜ್ಯ ಬ್ಯಾಂಕುಗಳ ನಗದು ಮತ್ತು ನಿಧಿಗಳು ಕಡಿಮೆಯಾಗುತ್ತವೆ. ಹಾಗೇ ಇವುಗಳ ಕೊಳ್ಳುವಿಕೆಯಿಂದ ವಾಣಿಜ್ಯ ಬ್ಯಾಂಕುಗಳ ನಗದು ಮತ್ತು ನಿಧಿಗಳು ಹೆಚ್ಚುತ್ತವೆ. ಹಣದ ಮಾರುಕಟ್ಟೆಯು ವಿಕಸಿತವಾಗುತ್ತದೆ. ಹಣದುಬ್ಬರದ ಸಮಯದಲ್ಲಿ ರಿಸರ್ವ್ ಬ್ಯಾಂಕ್ ಪ್ರತಿಭೂತಿಗಳನ್ನು ವಿಕ್ರಯಿಸುತ್ತದೆ. ಆಗ ಮಾರುಕಟ್ಟೆಯಲ್ಲಿ ಹಣದ ಪರಿಮಾಣ ಕುಗ್ಗಿ ಹಣದುಬ್ಬರ ಕಡಿಮೆ ಯಾಗುತ್ತದೆ. ನಮ್ಮ ದೇಶದಲ್ಲಿ ವಾಣಿಜ್ಯ ಬ್ಯಾಂಕುಗಳು ಸರ್ಕಾರೀ ಪ್ರತಿಭೂತಿಗಳನ್ನು ಸಿಂಹಪಾಲಿನಲ್ಲಿ ಹೊಂದಿವೆ. ಇವುಗಳನ್ನು ಬಿಟ್ಟರೆ ಸಾಂಸ್ಥಿಕ ಹೂಡಿಕೆದಾರರು ಹೊಂದಿರುತ್ತಾರೆ. ಈ ಪ್ರತಿಭೂತಿಗಳು ಸಾಮಾನ್ಯವಾಗಿ ಸರ್ಕಾರಿ ಖಜಾನೆಯ 91ದಿನದ ಪತ್ರಗಳ ರೂಪದಲ್ಲಿರುತ್ತವೆ. ಈಗ ಇವು ಪ್ರತಿವಾರವೂ ಕ್ರಯ/ವಿಕ್ರಯಗಳಿಗೆ ದೊರಕುತ್ತವೆ. 
3. ವ್ಯತ್ಯಯದ ನಗದು ಮೀಸಲು ಅಗತ್ಯತೆ: ಎಲ್ಲ ಬ್ಯಾಂಕುಗಳು (ವಿದೇಶೀ ಬ್ಯಾಂಕುಗಳ ಶಾಖೆಗಳು, ಸಹಕಾರಿ ಬ್ಯಾಂಕುಗಳು ಸಹ ಸೇರಿದಂತೆ) ರಿಸರ್ವ್ ಬ್ಯಾಂಕಿನಲ್ಲಿ ಎರಡು ರೀತಿಯ ಮೀಸಲು ನಿಧಿಗಳನ್ನು ಇಡಲೇ ಬೇಕು. 1) ನಗದು ಮೀಸಲು ಮತ್ತು 2) ಶಾಸನ ಬದ್ಧ ದ್ರವ್ಯತ್ವ ಮೀಸಲು ನಿಧಿಗಳು. ಇವುಗಳನ್ನು ಬ್ಯಾಂಕುಗಳು ತಮ್ಮ ಬೇಡಿಕೆ ಮತ್ತು ಸಾವಧಿ ಜವಾಬ್ದಾರಿಗಳ ಮೇಲೆ ನಿರ್ದಿಷ್ಟ ಶೇಕಡಾವಾರು ಪ್ರಮಾಣದಲ್ಲಿ ರಿಸರ್ವ್ ಬ್ಯಾಂಕಿನಲ್ಲಿ ಮೀಸಲಿಡಬೇಕು. ಈ ಶೇಕಡಾವಾರು ದರವನ್ನು ಹಿಗ್ಗಿಸುವ ಮತ್ತು ಕುಗ್ಗಿಸುವ ಮೂಲಕ ರಿಸರ್ವ್ ಬ್ಯಾಂಕ್ ಉಳಿದ ಎಲ್ಲ ಬ್ಯಾಂಕುಗಳನ್ನು ನಿಯಂತ್ರಿಸಬಹುದು. ಇದು ನೇರ ಪರಿಣಾಮದ ಪ್ರಭಾವೀ ಅಸ್ತ್ರವಾಗಿದೆ. 01-09-2005ರಂದು ನಗದು ಮೀಸಲು ಅನುಪಾತ ಮತ್ತು ±ಪರಿನಿಯತ ದ್ರವತ್ವ ಅನುಪಾತ)ಗಳು ಕ್ರಮವಾಗಿ ಶೇಕಡಾ 5% ಮತ್ತು ಶೇಕಡಾ 25% ಇವೆ. 
ನಗದು ಮೀಸಲು ಅನುಪಾತ ಎಂದರೆ ಎಲ್ಲ ಬ್ಯಾಂಕುಗಳು ತಮ್ಮ ಬೇಡಿಕೆ ಮತ್ತು ಸಾವಧಿ ಜವಾಬ್ದಾರಿಗಳ ಮೇಲೆ ಶೇಕಡಾ 3% ರಷ್ಟು ಹಣವನ್ನು ನಗದಾಗಿ ಯಾವಾಗಲೂ ಅಂದರೆ ಪ್ರತಿದಿನವೂ ಇಟ್ಟಿರಬೇಕು. ತಪ್ಪಿದಲ್ಲಿ ಅದಕ್ಕೆ ದಂಡ ಮೊದಲಾದ ಶಿಕ್ಷೆಗಳಿವೆ. ನಗದು ಎಂದರೆ ಹಣದ ರೂಪದಲ್ಲೇ ಇಟ್ಟಿರಬೇಕೆಂದು ಅರ್ಥವಲ್ಲ ಜತೆಗೆ ರಿಸರ್ವ್ ಬ್ಯಾಂಕಿನ ಖಾತೆಯಲ್ಲೇ ಇಟ್ಟಿರಬೇಕೆಂದು ಅರ್ಥವಲ್ಲ. ಹಣದ ರೂಪದಲ್ಲಿ ಮತ್ತು ಕೆಲವು ನಿರ್ದಿಷ್ಟ ಬ್ಯಾಂಕುಗಳ ಚಾಲ್ತಿ ಖಾತೆಗಳಲ್ಲಿನ ಶಿಲ್ಕು ಎಲ್ಲವನ್ನು ಸಮಷ್ಟಿಯಾಗಿ ನಗದು ಎಂದು ಕರೆಯುತ್ತಾರೆ. ನಿರ್ದಿಷ್ಟ ಬ್ಯಾಂಕುಗಳೆಂದರೆ, ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳು, ಸ್ಟೇಟ್ ಬ್ಯಾಂಕ್ ಮತ್ತು ಅದರ ಏಳು ಅಂಗ ಸಂಸ್ಥೆಯಾದ ಬ್ಯಾಂಕುಗಳು, ರಾಜ್ಯದ ಅಪೆಕ್ಸ್ ಬ್ಯಾಂಕು ಮತ್ತು ಉಳಿದ ಯಾವುದೇ ರಿಸರ್ವ್ ಬ್ಯಾಂಕ್ ಅಂಗೀಕರಿಸಿದ ಸಹಕಾರ ಬ್ಯಾಂಕುಗಳು ಇತ್ಯಾದಿಗಳಲ್ಲಿನ ಚಾಲ್ತಿ ಖಾತೆಯಲ್ಲಿನ ಶಿಲ್ಕು (ಬ್ಯಾಲೆನ್ಸ್) ಹಾಗು ತನ್ನಲ್ಲಿನ ನಗದು ಶಿಲ್ಕು ಮತ್ತು ರಿಸರ್ವ್ ಬ್ಯಾಂಕ್ ನಲ್ಲಿನ ಚಾಲ್ತಿ ಖಾತೆಯಲ್ಲಿನ ಶಿಲ್ಕು ಎಲ್ಲ ಒಟ್ಟಾರೆ ಸೇರಿ ನಿಗದಿತ ಶೇಕಡದಷ್ಟು ಮೊತ್ತವಾಗಬೇಕು.  ಪ್ರತಿದಿನದ ಕೊನೆಯಲ್ಲಿ ಅಂದಿನ ನಗದು ಮೀಸಲು ಎಷ್ಟಿತ್ತು ಎಂಬುದು ಪುಸ್ತಕದಲ್ಲಿ ದಾಖಲೆಯಾಗಿರಬೇಕು. ಇದು ರಿಸರ್ವ್ ಬ್ಯಾಂಕಿನ ಪರಿಶೀಲನೆಗೆ ಒಳಪಡುವ ಪುಸ್ತಕವಾಗಿರುತ್ತದೆ. ಜತೆಗೆ ಪಾಕ್ಷಿಕವಾಗಿ ಪಕ್ಷದ ಅಂತ್ಯದಲ್ಲಿ ನಿಗದಿತ ನಮೂನೆಯಲ್ಲಿ ತಃಖ್ತೆಯನ್ನು ಕಳಿಸಬೇಕು.  
ಪರಿನಿಯತ ದ್ರವ್ಯತ್ವ ಅನುಪಾತ ಎಂದರೆ ಎಲ್ಲ ಬ್ಯಾಂಕುಗಳು ತಮ್ಮ ಬೇಡಿಕೆ ಮತ್ತು ಸಾವಧಿ ಜವಾಬ್ದಾರಿಗಳ ಮೇಲೆ ಶೇಕಡಾ 25% ರಷ್ಟು ಮೌಲ್ಯದ ಹಣವನ್ನು ಠೇವಣಿ, ವಿನಿಯೋಜನೆ (ಹೂಡಿಕೆ)ಗಳ ರೂಪದಲ್ಲಿ ಇಟ್ಟಿರಬೇಕು. ಇದೂ ಸಹ ದೈನಂದಿನ ಲೆಕ್ಕದಲ್ಲಿ ನಿರ್ದಿಷ್ಟ ಪುಸ್ತಕದಲ್ಲಿ ದಾಖಲೆಯಾಗುತ್ತಿರಬೇಕು. ಇದು ರಿಸರ್ವ್ ಬ್ಯಾಂಕಿನ ಪರಿಶೀಲನೆಗೆ ಒಳಪಡುವ ಪುಸ್ತಕವಾಗಿರುತ್ತದೆ. ಜೊತೆಗೆ ಮಾಸಾಂತ್ಯದಲ್ಲಿ ನಿಗದಿತ  ನಮೂನೆಯಲ್ಲಿ ಈ ಬಗ್ಗೆ ತಃಖ್ತೆಯನ್ನು ಕಳಿಸಬೇಕು. ಇದಕ್ಕೆ ನಿರ್ದಿಷ್ಟ ಬ್ಯಾಂಕುಗಳೆಂದರೆ, ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳು, ಸ್ಟೇಟ್ ಬ್ಯಾಂಕ್ ಮತ್ತು ಅದರ ಏಳು ಅಂಗ ಸಂಸ್ಥೆಯಾದ ಬ್ಯಾಂಕುಗಳು, ರಾಜ್ಯದ ಅಪೆಕ್ಸ್ ಬ್ಯಾಂಕು ಮತ್ತು ಉಳಿದ ಯಾವುದೇ ರಿಸರ್ವ್ ಬ್ಯಾಂಕ್ ಅಂಗೀಕರಿಸಿದ ಸಹಕಾರ ಬ್ಯಾಂಕುಗಳ ಇತ್ಯಾದಿಗಳಲ್ಲಿನ ಠೇವಣಿ ಮತ್ತು ವಿನಿಯೋಜನೆ (ಹೂಡಿಕೆ)ಗಳ ಒಟ್ಟು ಮೊತ್ತವು ರಿಸರ್ವ್ ಬ್ಯಾಂಕ್ ನಿಗದಿ ಪಡಿಸಿದ ಅನುಪಾತಕ್ಕೆ ಕಡಿಮೆ ಇಲ್ಲದಷ್ಟು ಇರಬೇಕು. ಇದು ಹೆಚ್ಚಿದ್ದಷ್ಟೂ ಸದರಿ ಬ್ಯಾಂಕಿನ ಶಕ್ತಿ ಸಂವರ್ಧನೆಯಾಗಿ ಬಲಿಷ್ಠವಾಗುತ್ತಿದೆಯೆಂದು ಅರ್ಥ.
9. ಬಂಡವಾಳ ಸಮರ್ಪಕತೆಯ ಮಾನಕಗಳು:
ಬಂಡವಾಳ ಸಮರ್ಪಕತೆಯೆಂದರೆ ಹೆಸರೇ ಸೂಚಿಸುವಂತೆ ಸಾಕಷ್ಟು ಬಂಡವಾಳವನ್ನು ಹೊಂದಿರುವುದು.
ಬಂಡವಾಳ ಸಮರ್ಪಕತೆಯು ಒಂದು ಹಣಕಾಸು ಸಂಸ್ಥೆಯ ಆರ್ಥಿಕ ಬಲದ ಒಂದು ಸಾಧಾರಣ ಮೌಲ್ಯಮಾಪಕತೆ ಯಾಗಿದೆ. ಇದನ್ನು ಪರಿಮಾಣ ಭಾಷೆಯಲ್ಲಿ ಹೇಳುವುದಾದರೆ, ಒಂದು ಸಂಸ್ಥೆಯ ಆಸ್ತಿಗೆ ಎಷ್ಟು ಬಂಡವಾಳದ ಅನುಪಾತವೆಂಬುದೇ ಬಂಡವಾಳ ಸಮರ್ಪಕತೆಯ ಅನುಪಾತ ಎನ್ನಬಹುದು. ಇದು ಎಷ್ಟು ಹೆಚ್ಚಿದ್ದರೆ ಅಷ್ಟು ಸಂಸ್ಥೆಯ ಸ್ವಂತದ ಆರ್ಥಿಕ ಸಾಮಥ್ರ್ಯವು ಸಮರ್ಪಕವಾಗಿದೆಯೆಂದು ಅರ್ಥ. ಬಂಡವಾಳ ಸಮರ್ಪಕತೆಯು ಎಷ್ಟು ಹೆಚ್ಚಿದೆಯೋ ಅಷ್ಟು ಸಂಸ್ಥೆಯ ದುರವಸ್ಥೆಯು ಅಷ್ಟು ಕಿರಿದಾಗುತ್ತಾ ಹೋಗುತ್ತದೆ. ಅದರಲ್ಲೂ ವಿಶೇಷವಾಗಿ ಬ್ಯಾಂಕುಗಳಿಗೆ ಬಂಡವಾಳ ಸಮರ್ಪಕತೆ ಹೊಂದಲೋಸುಗ ಭಾರತೀಯ ರಿಸರ್ವ್ ಬ್ಯಾಂಕ್ ಹಲವಾರು ಯೋಜನೆಗಳನ್ನು, ನಿಯಮಾವಳಿಗಳನ್ನು ರೂಪಿಸಿದೆ. 
	ಇದು ಕಳೆದ ದಶಕದಿಂದ ಮಹತ್ವವನ್ನು ಪಡೆದುಕೊಂಡಿರುವ ವಿಷಯವಾಗಿದೆ. ಕೇಂದ್ರ ಸರ್ಕಾರವು 1991ರಲ್ಲಿ ನರಸಿಂಹಂ ಸಮಿತಿಯನ್ನು ನೇಮಿಸಿ ದೇಶದಲ್ಲಿನ ಹಣಕಾಸಿನ ವ್ಯವಸ್ಥೆ ಬಗ್ಗೆ ವರದಿ ಮಾಡಲು ಆದೇಶಿಸಿತು. ಈ ಸಮಿತಿಯು 22-04-1998ರಲ್ಲಿ ತನ್ನ ವರದಿಯನ್ನು ಭಾರತ ಸರ್ಕಾರಕ್ಕೆ ಸಲ್ಲಿಸಿತು. ಅದರಲ್ಲಿನ ಬಹುತೇಕ ಅಂಶಗಳನ್ನು ಅಂಗೀಕರಿಸಿದ ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕ್‍ಗೆ ಈ ಬಗ್ಗೆ ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ಳುವಂತೆ ಆದೇಶಿಸಿತು. ಅದರಲ್ಲಿ ಒಂದು ಮುಖ್ಯವಾದ ಅಂಶವೆಂದರೆ ಈ ಬಂಡವಾಳದ ಬಗೆಗಿನ ಶಿಫಾರಸ್ಸು. ನರಸಿಂಹಂ ಸಮಿತಿಗಿಂತ ಮುಂಚೆ ಬ್ಯಾಂಕಿಂಗ್ ನಿಯಂತ್ರಣಗಳು ಮತ್ತು ಮೇಲುಸ್ತುವಾರಿ ಅಭ್ಯಾಸಗಳ ಬಗ್ಗೆ ನೇಮಿಸಿದ್ದ ಪ್ರಾಥಮಿಕ (ಮೂಲ) ಸಮಿತಿಯು ಸಹ ತನ್ನ ವರದಿಯಲ್ಲಿ ಈ ಬಂಡವಾಳ ಸಮರ್ಪಕತೆಯ ಬಗ್ಗೆ ಒಂದು ಗುಣಮಟ್ಟವನ್ನು ನಿಶ್ಚಯಿಸಿರಬೇಕೆಂದು ಸಲಹೆ ಮಾಡಿತ್ತು. 
	ನರಸಿಂಹಂ ಸಮಿತಿಯು ಎಲ್ಲ ಬ್ಯಾಂಕ್‍ಗಳಿಗೆ ಕನಿಷ್ಟ ಶೇಕಡಾ 8 ರಷ್ಟು ಬಂಡವಾಳ ಸಮರ್ಪಕತೆಯನ್ನು ವಿಧಿಸಿತ್ತು. 1.1.1994ರಂದು ಎಲ್ಲ ಸರ್ಕಾರೀ ಸ್ವಾಮ್ಯದ ಬ್ಯಾಂಕುಗಳು ಶೇಕಡಾ 4ರÀ ಬಂಡವಾಳ ಸಮರ್ಪಕÀತೆಯನ್ನು ಸಾಧಿಸಿದ್ದವು. ಎಲ್ಲ ವಿದೇಶೀ ಬ್ಯಾಂಕುಗಳು 31-3-1993ಕ್ಕೆ ಶೇಕಡಾ 8%ನ್ನು ಸಾಧಿಸಿದ್ದವು. ಎಲ್ಲ ಬ್ಯಾಂಕುಗಳು    31-3-1996ಕ್ಕೆ ಶೇಕಡಾ 8ರ ಸಮರ್ಪಕತೆಯನ್ನು ಸಾಧಿಸಲು ಅವುಗಳಿಗೆ ಆದೇಶಿಸಲಾಗಿತ್ತು. ಇದರ ಸಾಧನೆಗಾಗಿ ಹಿಂದೆ ಬಿದ್ದಿದ್ದ ಬ್ಯಾಂಕ್‍ಗಳಿಗೆ ಸರ್ಕಾರವು ಬಂಡವಾಳವನ್ನು ತುಂಬಿಸಿಕೊಟ್ಟಿತ್ತು. 1993-94 ರಲ್ಲಿ ರೂ.5700/- ಕೋಟಿ, ಮಾರ್ಚ್ 1993ರಲ್ಲಿ ರೂ.7009/- ಕೋಟಿಯಿದ್ದು, ಮಾರ್ಚ್ 1994ರಲ್ಲಿ ರೂ.12709/- ಕೋಟಿಯಷ್ಟಾಗಿತ್ತು. ಇವುಗಳ ವ್ಯತ್ಯಾಸದ ಮೊತ್ತವಾದ ರೂ.5700/-ಕೋಟಿಯನ್ನು ಸರ್ಕಾರವು ತುಂಬಿಸಿಕೊಟ್ಟಿತ್ತು. ಈ ರೀತಿ ಬಂದ ಹಣವನ್ನು ಬ್ಯಾಂಕ್ ತನ್ನ ವ್ಯವಹಾರದಲ್ಲಿ ತೊಡಗಿಸಿಕೊಳ್ಳದೆ ಇದನ್ನು ಸರ್ಕಾರೀ ಬಾಂಡ್ ಆದ ಪುನರ್ಮೂಲಧನೀಕರಣ ಬಾಂಡ್, 2006ರಲ್ಲಿ ಹೂಡಲು ಸರ್ಕಾರವು ಆದೇಶಿಸಿತ್ತು. ಈ ಬಗ್ಗೆ ಆಯಾಯ ಬ್ಯಾಂಕುಗಳ ಜೊತೆಗೆ ಒಡಂಬಡಿಕೆಯಾಗಿತ್ತು. 2004-05 ರಲ್ಲಿ ಬಂಡವಾಳ ಸಮರ್ಪಕತೆಯ ಅನುಪಾತವು ಶೇ.10 ಇರಬೇಕೆಂದು ನಿಗದಿಯಾಗಿದೆ. ರಿಸರ್ವ್ ಬ್ಯಾಂಕ್ ನಿರ್ದಿಷ್ಟ ನಮೂನೆಯ ವಿವರಣೆ ಪಟ್ಟಿಯನ್ನು ಪ್ರಕಟಿಸಿದೆ. ಎಲ್ಲ ಬ್ಯಾಂಕುಗಳು ಅದರ ಅನ್ವಯ ತಮ್ಮ ಎಲ್ಲ ಖಾತಾ ಲೆಕ್ಕಗಳನ್ನು ಅದರಲ್ಲಿ ನಮೂದಿಸುತ್ತಾ ಹೋದರೆ ಸರಿಯಾದ ಬಂಡವಾಳ ಸಮರ್ಪಕತೆಯನ್ನು ಲೆಕ್ಕಾಚಾರ ಹಾಕುವುದು ಸುಲಭವಾಗುತ್ತದೆ. ಅದನ್ನು ರಿಸರ್ವ್ ಬ್ಯಾಂಕಿಗೆ ಸಲ್ಲಿಸಬೇಕು.
10. ಬ್ಯಾಂಕುಗಳ ನಿಷ್ಕ್ರಿಯ ಆಸ್ತಿ ಮೇಲಣ ನಿಯಂತ್ರಣ : 
	ನರಸಿಂಹಂ ಸಮಿತಿಯ ವರದಿಯ ಆಧಾರದ ಮೇಲೆ ಬ್ಯಾಂಕಿನ ನಿಷ್ಕ್ರಿಯ ಆಸ್ತಿ ಮತ್ತು ಆದಾಯ ಪರಿಗಣನೆಗಳು ಬಹಳ ಮಹತ್ವವನ್ನು ಪಡೆದುಕೊಂಡಿವೆ.  ವಸೂಲಾಗದ ಸಾಲ-ಮುಂಗಡಗಳು ಹೆಚ್ಚಿದಲ್ಲಿ ಬ್ಯಾಂಕಿಗೆ ಒಂದು ಕಡೆಯಿಂದ ಅದರ ಹಣವು ಸ್ಥಗಿತಗೊಂಡು ಮೂಲಧನ ಕಡಿಮೆಯಾಗುವುದಲ್ಲದೆ ಅದರಿಂದ ವರಮಾನವಿಲ್ಲದೆ ಬ್ಯಾಂಕಿನ ಲಾಭತ್ವವು ಕುಸಿಯುತ್ತಾ ಹೋಗುತ್ತದೆ. ವೆಚ್ಚವು ಏರುಗತಿಯಲ್ಲೇ ಇರುತ್ತದೆ. ಹೀಗಾಗಿ ಬ್ಯಾಂಕುಗಳು ನಷ್ಟ ಅನುಭವಿಸುವುದಲ್ಲದೆ ಠೇವಣಿದಾರರಿಗೆ ಹಣ ಕೊಡಲಾಗದ ಸ್ಥಿತಿಗೆ ಬಂದು ಬ್ಯಾಂಕು ತನ್ನ ಚಟುವಟಿಕೆಗಳನ್ನು ನಿಲ್ಲಿಸಬೇಕಾಗುತ್ತದೆ. ಇದು ಬಹಳ ಅಪಾಯಕರವಾದ ಸ್ಥಿತಿ. ಆದುದರಿಂದ ಭಾರತೀಯ ರಿಸರ್ವ್ ಬ್ಯಾಂಕ್ ಈ ದಿಶೆಯಲ್ಲಿ ಕೆಲವು ಕಟ್ಟುನಿಟ್ಟಾದ ಕ್ರಮಗಳನ್ನು ಸೂಚಿಸಿ ಪರಿಪಾಲಿಸುವಂತೆ ಎಲ್ಲ ಬ್ಯಾಂಕುಗಳಿಗೆ ಆದೇಶಿಸಿದೆ.  31-3-2001ರಲ್ಲಿ ವಾಣಿಜ್ಯ ಬ್ಯಾಂಕುಗಳ ಒಟ್ಟು ಅನುತ್ಪಾದಕ ಆಸ್ತಿಯು 63883 ಕೋಟಿ ರೂ. ಗಳಷ್ಟಿತ್ತು.  ಭಾರತೀಯ ರಿಸರ್ವ್ ಬ್ಯಾಂಕ್ ಸಾಲ ವಸೂಲಾತಿ ಪ್ರಕ್ರಿಯೆಗಳು ಪ್ರಭಾವೀಯುತವಾಗಿ ಅನುಷ್ಠಾನ ಮಾಡಲು ಕೆಲವು ಸೂಚನೆಗಳನ್ನು ನೀಡಿದೆ. ಜೊತೆಗೆ ಪ್ರತಿಭೂತೀಕರಣ ಕಾಯಿದೆಯನ್ನು ತಂದು ವಸೂಲಿಗೆ ಕಾನೂನಿನ ತೊಡಕನ್ನು ನಿವಾರಿಸಿದೆ. ಅನುತ್ಪಾದಕ ಆಸ್ತಿಯಿರುವ ಬ್ಯಾಂಕುಗಳು ಈ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡು ಅವುಗಳ ಕಡಿಮೆ ಮಾಡಲು ಪ್ರಯತ್ನಿಸದಿದ್ದಲ್ಲಿ ಬ್ಯಾಂಕುಗಳ ವರ್ಗೀಕರಣದಲ್ಲಿ ಏರಿಳಿತ ಮಾಡಿ ಅವುಗಳ ಲಾಭ ಘೋಷಣೆಯ ಪ್ರಕ್ರಿಯೆಯನ್ನು ತಡೆಹಿಡಿಯುವ ಕಠಿಣ ಕ್ರಮ ಕೈಗೊಳ್ಳುವ ಸೂಚನೆ ನೀಡಿದೆ. ವಿಶೇಷವಾಗಿ ಸಹಕಾರಿ ಬ್ಯಾಂಕುಗಳಲ್ಲಿನ ಅನುತ್ಪಾದಕ ಆಸ್ತಿಯು ಶೇಕಡಾ 10ಕ್ಕಿಂತ ಹೆಚ್ಚಿದ್ದರೆ ಆ ಬ್ಯಾಂಕುಗಳನ್ನು ಂ, ಃ, ಅ  ಮತ್ತು  ಆ ಶ್ರೇಣಿಗಳನ್ನು ನೀಡುವುದು. `ಎ' ಎಂದರೆ ರಿಸರ್ವ್ ಬ್ಯಾಂಕಿನ ಅನುಮತಿಯಿಲ್ಲದೆ ಬ್ಯಾಂಕ್ ತನ್ನ ಷೇರುದಾರರಿಗೆ ಲಾಭವನ್ನು ಶೇಕಡಾ 20ರೊಳಗೆ ಎಷ್ಟಾದರು ತನ್ನ ಸಾಮಥ್ರ್ಯಕ್ಕೆ ತಕ್ಕಂತೆ ಹಂಚುವ ಅಧಿಕಾರ ನೀಡಿದೆ. ಆದರೆ `ಬಿ ವರ್ಗದ ಬ್ಯಾಂಕುಗಳು ರಿಸರ್ವ್ ಬ್ಯಾಂಕಿನ ಅನುಮತಿಯಿಲ್ಲದೆ ತನ್ನ ಷೇರುದಾರರಿಗೆ ಲಾಭಾಂಶವನ್ನು ಹಂಚುವಂತಿಲ್ಲ. `ಸಿ ವರ್ಗದ ಬ್ಯಾಂಕುಗಳು ಕುಸಿಯುವ ಮೊದಲ ಹಂತದಲ್ಲಿರುವ ಸೂಚನೆ. ಅವರಿಗೆ ಲಾಭಾಂಶ ಹಂಚುವ ಅಧಿಕಾರವೇ ಇಲ್ಲ. ಒಂದು ವರ್ಷದೊಳಗೆ `ಸಿ ಯಿಂದ `'ಬಿ ಗೆ ಏರದಿದ್ದರೆ ರಿಸರ್ವ್ ಬ್ಯಾಂಕ್ ಅಧಿಕೃತ ಸೂಚನೆಯನ್ನು ನೀಡಿ ಬ್ಯಾಂಕನ್ನು ಸ್ಥಗಿತಗೊಳಿಸಬಹುದು. `ಡಿ' ಎಂದರೆ ಬ್ಯಾಂಕ್ ಯಾವಾಗಲಾದರೂ ಕುಸಿಯುವ ಸ್ಥಿತಿಯ ಬ್ಯಾಂಕ್ ಎಂದರ್ಥವಾಗುತ್ತದೆ. ಇದು ಬಹಳ ಗಂಭೀರ ಸ್ವರೂಪದ್ದು. 
	ಇದಲ್ಲದೆ ಅನುತ್ಪಾದಕ ಆಸ್ತಿಗಳನ್ನು ಅವುಗಳ ಕಾಲಾವಧಿಯ ಆಧಾರದ ಮೇಲೆ ಮೂರು ಭಾಗಗಳನ್ನು ಮಾಡಲಾಗಿದೆ. 
ಶಿಷ್ಟವಲ್ಲದ ಆಸ್ತಿಗಳು 
ಸಂದೇಹಾಸ್ಪದ ಆಸ್ತಿಗಳು 
ನಷ್ಟ ಆಸ್ತಿಗಳು 
ಅನುತ್ಪಾದಕ ಆಸ್ತಿಗಳು ಹೀಗಿರುವಾಗ ಅವುಗಳಿಗೆ ಬ್ಯಾಂಕುಗಳು ತಮ್ಮ ನಿವ್ವಳ ಲಾಭದಲ್ಲಿ ನಿಷ್ಕ್ರಿಯ ಆಸ್ತಿಗೆ ಶೇಕಡಾವಾರು ಪ್ರಮಾಣದ ಮೀಸಲಿಟ್ಟು ಮುನ್ನೇರ್ಪಾಡು ಮಾಡಿರಬೇಕು. ನಷ್ಟದ ಆಸ್ತಿಗಳಿಗೆ ಶೇಕಡಾ 100 ರಂತೆ ಲಾಭವನ್ನು ಅದಕ್ಕಾಗಿ ತೆಗೆದಿರಿಸಬೇಕು. ಸಂದೇಹಾಸ್ಪದ ಆಸ್ತಿಯಲ್ಲಿ ಪ್ರತಿಭೂತಿಯಿಲ್ಲದ ಭಾಗಕ್ಕೆ ಪೂರ್ಣ ಪ್ರಮಾಣದಲ್ಲಿ ಲಾಭದಿಂದ ತೆಗೆದಿರಿಸಬೇಕು. ಉಳಿದ ಭಾಗದ ಆಸ್ತಿಗೆ ಅವುಗಳ ಕಾಲಾವಧಿಗೆ ತಕ್ಕಂತೆ ವಿಭಿನ್ನ ಶೇಕಡಾವಾರು ರೀತಿಯಲ್ಲಿ ಮುನ್ನೇರ್ಪಾಡು ಮಾಡಿರಬೇಕು. ಶಿಷ್ಟವಲ್ಲದ ಆಸ್ತಿಗಳಿಗೆ, ಲಾಭದಲ್ಲಿ  ನಿರ್ದಿಷ್ಟ ಪ್ರಮಾಣದಲ್ಲಿ ಮೀಸಲಿಡಬೇಕು. ಇದಲ್ಲದೆ ಉತ್ತಮ ಗುಣಮಟ್ಟದ ಆಸ್ತಿಗೂ ಸಹ ಸಣ್ಣ ಪ್ರಮಾಣದ ಮೊಬಲಗನ್ನು  ಮೀಸಲಿಡ ಬೇಕು. 
	ಹೀಗಾಗಿ ಅನುತ್ಪಾದಕ ಆಸ್ತಿಯು ಬ್ಯಾಂಕಿನ ದುಡಿಯುವ ಬಂಡವಾಳವನ್ನು, ಸಾರ್ವಜನಿಕವಾಗಿ ಸಂಗ್ರಹಿಸಿದ ಧನವನ್ನು ಎಲ್ಲೋ ಸ್ಥಗಿತಗೊಳಿಸಿ ಅದು ಪುನಃ ಉಪಯೋಗಿಸಲಾಗದಂತೆ ಮಾಡುತ್ತದೆ.  ಬ್ಯಾಂಕಿನ ಜವಾಬ್ದಾರಿಯ ಮೇಲೆ ದುಷ್ಪ್ರಭಾವ ಬೀರುವುದರ ಜೊತೆಗೆ ಅಂತಹ ಆಸ್ತಿಯಿಂದ ಆದಾಯವೂ ಬಾರದೆ ಬ್ಯಾಂಕು ನಷ್ಟ ಅನುಭವಿಸುವ ಸ್ಥಿತಿಗೆ ತರುತ್ತದೆ. ಹೂಡಿಕೆಯಿಂದ ಲಾಭ ಬಾರದಿರುವುದರ ಜೊತೆಗೆ ಹೂಡಿಕೆಯ ಹಣವೇ ಬಾರದಿದ್ದರೆ ಬ್ಯಾಂಕಿನ ಸ್ಥಿತಿಯು ಅತಂತ್ರವಾಗುತ್ತದೆ. ಗಳಿಸಿದ ಆದಾಯವನ್ನೂ ಕಡಿಮೆ ಮಾಡುತ್ತವೆ. ಹೀಗಾಗಿ ಬ್ಯಾಂಕುಗಳು ಕುಸಿಯುತ್ತವೆ. ಇದನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ. ಇದರಿಂದಾಗಿ ಮಾರ್ಚ್ 2003 ರಲ್ಲಿ ಬ್ಯಾಂಕುಗಳ ಅನುತ್ಪಾದಕ ಆಸ್ತಿಯ ಶೇಕಡಾವಾರು ಪ್ರಮಾಣವು ಗಣನೀಯವಾಗಿ ತಗ್ಗಿತು.
11.  ಭಾರತೀಯ ರಿಸರ್ವ್ ಬ್ಯಾಂಕ್ ನೆರವಿಗೆ ಕಾಯಿದೆಗಳು ಮತ್ತು ವಿವಿಧ ಸಮಿತಿಗಳು:
ಹಲವಾರಿ ಕಾಯಿದೆಗಳು ಜಾರಿಯಾಗಿ ವಿವಿಧ ಹಣಕಾಸು ಕ್ಷೇತ್ರಗಳಲ್ಲಿ, ಹಣಕಾಸೇತರ ಕ್ಷೇತ್ರಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿಗೆ ವಿವಿಧ ರೀತಿಯಲ್ಲಿ ಅಧಿಕಾರ, ನಿರ್ವಹಣೆ ಮತ್ತು ಮೇಲುಸ್ತುವಾರಿಗಳ ಜವಾಬ್ದಾರಿ, ನಿಯಂತ್ರಣ ಕರ್ತವ್ಯಗಳನ್ನು ನೀಡಿವೆ. ಆ ಕಾಯಿದೆಗಳೆಂದರೆ :
ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ, 1935.
ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1949.
ಕ್ಷೇತ್ರೀಯ ಗ್ರಾಮೀಣ ಬ್ಯಾಂಕ್ಸ್ ಕಾಯಿದೆ, 1976.
ಕಾಲ ಪರಿಮಿತಿ ಕಾಯಿದೆ, 1963.
ಬ್ಯಾಂಕರ್ಸ್ ಪುಸ್ತಕ ಸಾಕ್ಷ್ಯಾಧಾರ ಕಾಯಿದೆ, 1891.
ಬ್ಯಾಂಕಿಂಗ್ ಕಂಪನಿಗಳ (ನಾಮನಿರ್ದೇಶನ) ನಿಯಮಗಳು, 1985.
ಸಹಕಾರಿ ಕಾಯಿದೆ, 1904.
ಸೌಹಾರ್ದ ಸಹಕಾರಿ ಕಾಯಿದೆ. (ರಾಜ್ಯ ಮಟ್ಟದ ಸೌಹಾರ್ದ ಕಾಯಿದೆಗಳು).
ಇದಲ್ಲದೆ ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕಿನ ಪ್ರತ್ಯಕ್ಷ ಹಾಗು ಪರೋಕ್ಷ ನೆರವಿನೊಡನೆ ಹಲವಾರು ಸಮಿತಿಗಳನ್ನು 1949 ರಿಂದ ಇಲ್ಲಿಯವರೆಗು ನೇಮಿಸಿ ಬಹಳಷ್ಟು ವಿಷಯಗಳಲ್ಲಿ ದೇಶದ ವಿವಿಧ ಕ್ಷೇತ್ರಗಳಲ್ಲಿನ ವಿಶೇಷವಾಗಿ ಹಣಕಾಸಿನ ವಿಷಯದಲ್ಲಿ ಅನೇಕ ಪರಿಹಾರ ಮಾರ್ಗಗಳನ್ನು, ಯೋಜನೆಗಳನ್ನು, ನಿಯಂತ್ರಣಗಳನ್ನು ಸೂಚಿಸಿದೆ.
ಕ್ರಮ
ಸಮಿತಿಯ ಹೆಸರು
ನೇಮಕ ಕಾಲ
ಸಮಿತಿಯ ಮುಖ್ಯಸ್ಥ
ಉದ್ದೇಶ (ಸಂಕ್ಷಿಪ್ತವಾಗಿ)

1
ಅಖಿಲ ಭಾರತ ಗ್ರಾಮೀಣ ಸಮೀಕ್ಷೆ ಸಮಿತಿ
1951
ಶ್ರೀ. ಎ.ಡಿ. ಗೊರ್ವಾಲ
ಗ್ರಾಮೀಣ ಸಾಲ ವ್ಯವಸ್ಥೆ

2
ಅಖಿಲ ಭಾರತ ಸಾಲ ಪುನರ್ವಿಮರ್ಶನಾ ಸಮಿತಿ
1967-1969
ಶ್ರೀ.ವೆಂಕಟಪ್ಪಯ್ಯ
ಇರುವ ಸಾಲ ವ್ಯವಸ್ಥೆಯ ಬಗ್ಗೆ ಪುನರ್ವಿಮರ್ಶೆ.

3
ರಾಷ್ಟ್ರೀಯ ಸಾಲ ಮಂಡಲಿ
1967
ಪ್ರೊ||ಡಿ.ಆರ್.ಗಾಡ್ಗೀಲ್
ಸಾಲ ವ್ಯವಸ್ಥೆಯ ವಿಧಾನ 

4
ಬ್ಯಾಂಕರ್ಸ್ ಸಮಿತಿ
1969
ಶ್ರೀ. ಎಫ್.ಕೆ.ನಾರಿಮನ್
ಅಗ್ರಬ್ಯಾಂಕ್ ಯೋಜನೆ ಬಗ್ಗೆ

5
ರಾಷ್ಟ್ರೀಯ ಕೃಷಿ ಮಂಡಲಿ
1971

ಕೃಷಿಕರ ಸೇವಾ ಸಂಘ ಬಗ್ಗೆ

6
ಬಾವಾ ಅಧ್ಯಯನ ತಂಡ
1971

ಪರಿಶಿಷ್ಟ ವರ್ಗಗಳಿಗೆ ಸಾಲ

7
ಕಾರ್ಯಕಾರೀ ತಂಡ
1980
ಡಾ|| ಕೆ.ಎಸ್.ಕೃಷ್ಣಸ್ವಾಮಿ
ಸಮಾಜದ ಬಲಹೀನ ವರ್ಗ ಕ್ಕೆ ಆದ್ಯತಾ ಸಾಲದ ಬಗ್ಗೆ

8
ಕಾರ್ಯಕಾರೀ ತಂಡ
1983
ಶ್ರೀಅಮಿತಾಬ್‍ಘೋಷ್
ಆದ್ಯತಾ ಸಾಲದ ವ್ಯಾಖ್ಯೆ

9
ಗ್ರಾಮೀಣ ಸಾಲದ ಬಗ್ಗೆ ಪುನರ್ವಿಮರ್ಶಿಸಲು ಸಮಿತಿ
1979-1981
ಶ್ರೀ. ಶಿವರಾಮನ್
ಗ್ರಾಮೀಣ ಸಾಲದ ಬಗ್ಗೆ. ನಬಾರ್ಡ್ ಸ್ಥಾಪನೆ.

10
ಸ್ಥಿರ ಸಮಿತಿ 
1979

ಬ್ಯಾಂಕ್ ಮೂಲಕ ಕೃಷಿಸಾಲ

11
ಸರೈವ ಸಮಿತಿ
1972
ಶ್ರೀ.ಆರ್.ಜಿ. ಸರೈವ
ಗ್ರಾಮೀಣ ಬ್ಯಾಂಕ್ ಸ್ಥಾಪನೆ

12
ಕಾರ್ಯಕಾರೀ ತಂಡ
1975
ಶ್ರೀ. ಎಂ.ನರಸಿಂಹನ್
ಕ್ಷೇತ್ರೀಯ ಗ್ರಾಮೀಣ ಬ್ಯಾಂಕ್

13
ದಹೇಜಾ ಸಮಿತಿ
1968
ಶ್ರೀ ದಹೇಜಾ
ಸಾಲಗಾರನ ವ್ಯವಹಾರಬಗ್ಗೆ

14
ಟಾಂಡನ್ ಸಮಿತಿ
1974
ಶ್ರೀ ಟಾಂಡನ್
ದುಡಿಯುವ ಬಂಡವಾಳ

15
ಕೋರ್ ಸಮಿತಿ
1979
ಶ್ರೀ ಕೋರ್
ನಗದು ಉದರಿ ಸಾಲದ ಬಗ್ಗೆ

16
ನಾಯಕ್ ಸಮಿತಿ
1992
ಶ್ರೀ ಪಿ.ಆರ್.ನಾಯಕ್
ದುಡಿಯುವ ಬಂಡವಾಳ

17
ಐ. ಟಿ. ವಾಜ್ó ಸಮಿತಿ
1993
ಶ್ರೀ.ಐಟಿ.ವಾಜ್.
ಬ್ಯಾಂಕ್‍ನ ಚಾಲ್ತಿ ಆಸ್ತಿ ಬಗ್ಗೆ

18
ರಶೀದ್ ಜಿಲಾನಿ ಸಮಿತಿ

ಶ್ರೀ. ರಶೀದ್ ಜಿಲಾನಿ
ಮೀರೆಳೆತ, ನಗದು ಉದರಿ ಗಳಿಗೆ ಪರ್ಯಾಯದ ಬಗ್ಗೆ 

19
ಲಕ್ಷ್ಮೀನಾರಾಯಣ್ ಸಮಿತಿ
1974
ಶ್ರೀ.ಲಕ್ಷ್ಮೀನಾರಾಯಣ್
ಕೂಟಸಾಲ  ನೀಡುವ ಬಗ್ಗೆ

20
ಮಾಧವನ್ ಸಮಿತಿ
1982
ಶ್ರೀ. ಮಾಧವನ್
ಕೂಟಸಾಲದಲ್ಲಿ ಏಕ ಗವಾಕ್ಷಿ

21
ಶೆಟ್ಟಿ ಸಮಿತಿ

ಶ್ರೀ. ಜೆ. ವಿ. ಶೆಟ್ಟಿ
ಕೂಟಸಾಲಕ್ಕೆ ಪರ್ಯಾಯ

22
ತಿವಾರಿ ಸಮಿತಿ
1984
ಶ್ರೀ. ಆರ್. ತಿವಾರಿ
ಕೈಗಾರಿಕಾ ರುಗ್ಣತೆ

23
ಸುಂದರಮ್ ಸಮಿತಿ

ಶ್ರೀ. ಜಿ. ಸುಂದರಮ್
ರಫ್ತುಸಾಲದ ಚೌಕಟ್ಟಿನ ಬಗ್ಗೆ

24
ಸೋಧಾನಿ ಸಮಿತಿ
1995
ಶ್ರೀ. ಸೋಧಾನಿ
ವಿದೇಶಿ ವಿನಿಮಯ ವ್ಯವಹಾರಲ್ಲಿ ಉದಾರಿಕರಣ

25
ನರಸಿಂಹನ್ ಸಮಿತಿ
1991
ಶ್ರೀ. ನರಸಿಂಹನ್
ಬ್ಯಾಂಕಿಂಗ್ ಮತ್ತು ºಣಕಾಸಿನ ವ್ಯವಸ್ಥೆ ಬಗ್ಗೆ

26
ರಂಗರಾಜನ್ ಸಮಿತಿ
1981
1988
ಶ್ರೀ. ರಂಗರಾಜನ್
ಬ್ಯಾಂಕಿಂಗ್ ಕಂಪ್ಯೂಟರೀ ಕರಣ ಗೊಳಿಸುವ ಬಗ್ಗೆ

27
ವಾಗುಲ್ ಸಮಿತಿ
1987
ಶ್ರೀ. ವಾಗುಲ್
ಸಾವಧಿ ಸಾಲಗಳ ಬಗ್ಗೆ

28
ಕಲ್ಯಾಣ ಸುಂದರಮ್ ಸಮಿತಿ
1988
ಶ್ರೀ.ಕಲ್ಯಾಣ ಸುಂದರಂ 
ಫಾಕ್ಟರಿಂಗ್ ಸೇವೆಯ ಬಗ್ಗೆ

29
ಚಕ್ರವರ್ತಿ ಸಮಿತಿ
1985
ಶ್ರೀ. ಸುಖಮೋಯಿ ಚಕ್ರವರ್ತಿ
ಪ್ರತಿಭೂತಿಗಳಿಂದ ಬರುವ ಲಾಭದ ಬಗ್ಗೆ

30
ದಾವೆ ಸಮಿತಿ

ಶ್ರೀ.ಎಸ್.ಎಸ್. ದಾವೆ
ಪಾರಸ್ಪರಿಕ ನಿಧಿಗಳ ಬಗ್ಗೆ

31
ಪಟೇಲ್ ಸಮಿತಿ
1986
ಶ್ರೀ.ಜಿ.ಎಸ್. ಪಟೇಲ್
ಸ್ಟಾಕ್ ಎಕ್ಸ್‍ಚೇಂಜ್ ಬಗ್ಗೆ

32
ಫರ್ವಾನಿ ಸಮಿತಿ
1991
ಶ್ರೀ. ಫರ್ವಾನಿ
ರಾಷ್ಟ್ರೀಯ ಸ್ಟಾಕ್ ಎಕ್ಸ್‍ಚೇಂಜ್ ಸ್ಥಾಪನೆ ಬಗ್ಗೆ

33
ಕಾರ್ಯಕಾರಿ ತಂಡ
1992
ಡಾ|| ಎ.ಸಿ. ಶಾ
ಠೇವಣಿ ಸಂಗ್ರಹಿಸುವ ಕಂಪನಿಗಳ ಬಗ್ಗೆ

34
ರಂಗರಾಜನ್ ಸಮಿತಿ
1992
ಶ್ರೀ. ಸಿ.ರಂಗರಾಜನ್
ಸರ್ಕಾರೀ ಸ್ವಾಮ್ಯ ಸಂಸ್ಥೆ ಗಳಲ್ಲಿ ಹೂಡಿಕೆ ತೆಗೆವ ಬಗ್ಗೆ

35
ಚೆಲ್ಲಯ್ಯ ಸಮಿತಿ
1992
ಶ್ರೀ.ರಾಜಾ ಜೆ.ಚಲ್ಲಯ್ಯ
ರಾಜ್ಯಾದಾಯದ ಪರಿವರ್ತನೆ

36
ಘೋಷ್ ಸಮಿತಿ
1993
ಡಾ|| ಓಂಕಾರ್ ಘೋಷ್
ಕೈಗಾರಿಕ ರುಗ್ಣತೆ ಮತ್ತು ಸಾಂಸ್ಥಿಕ ಪುನರ್ನಿರ್ಮಾಣ

37
ಓಝಾ ಸಮಿತಿ
1988
ಡಾ|| ಪಿ.ಡಿ. ಓಝಾ
ಸೇವಾಕ್ಷೇತ್ರ ಯೋಜನೆ

38
ತಲವಾರ್ ಸಮಿತಿ
1976
ಶ್ರೀ. ತಲವಾರ್
ಗ್ರಾಹಕ ಸೇವೆಯ ಬಗ್ಗೆ

39
ಗೋಯಿಪೊರಿಯಾ ಸಮಿತಿ

ಶ್ರೀ.ಗೊಯಿಪೊರಿಯಾ
ಬ್ಯಾಂಕ್ ಗ್ರಾಹಕ ಸೇವೆಬಗ್ಗೆ

40
ಘೋಸ್ ಸಮಿತಿ

ಶ್ರೀ.ಘೋಸ್
ಬ್ಯಾಂಕ್‍ನಲ್ಲಿ ಮೋಸ, ವಂಚನೆ ತಡೆವ ಬಗ್ಗೆ

41
ನವ್ ಸಮಿತಿ
1996
ಶ್ರೀ.ಎನ್. ಎ. ವಿ.
ಪಾರಸ್ಪರಿಕ ನಿಧಿಗಳ ಬಗ್ಗೆ

42
ನಂದಕರ್ಣಿ ಸಮಿತಿ

ಶ್ರೀ.ನಂದಕರ್ಣಿ
ಯೋಜನೆಗಳ ಖರ್ಚು ವೆಚ್ಚಗಳ ಬಗ್ಗೆ ಸಮೀಕ್ಷೆ

43
ಹೆಚ್ಚಿನ ಅಧಿಕಾರಯುತ ಸಮಿತಿ  (ಮೆಹ್ತಾ ಸಮಿತಿ)
1993
ಡಾ|| ಡಿ. ಆರ್.ಮೆಹ್ತಾ
ಕೃಷಿ ಯೋಜನೆ - ಫಲಾನು ಭವಿಗಳ ಬಗ್ಗೆ (ಐಆರ್‍ಡಿಪಿ)

44
ಶೇರೆ ಸಮಿತಿ
1996
ಕೆ.ಎಸ್.ಶೇರೆ
ವಿದ್ಯುನ್ಮಾನ ಹಣ ರವಾನೆ

12. ವಿದೇಶೀ ವಿನಿಮಯ ನಿರ್ವಹಣೆ ಮತ್ತು ನಿಯಂತ್ರಣ:  ಇಂದಿನ ಜಾಗತೀಕರಣ ಮತ್ತು ಉದಾರೀಕರಣ ಮಾರುಕಟ್ಟೆಯಲ್ಲಿ ವಿದೇಶೀ ವಿನಿಮಯದ ನಿರ್ವಹಣೆ ಮತ್ತು ನಿಯಂತ್ರಣಗಳು ಬಹಳ ಮುಖ್ಯವಾದವುಗಳು.  
	ಬ್ರಿಟಿಷ್‍ರ ಕಾಲದಲ್ಲಿ ವಿದೇಶಿ ವ್ಯವಹಾರಗಳು ಸರ್ಕಾರದ ನಿಯಂತ್ರಣದಲ್ಲಿರಲಿಲ್ಲ. ಜನರು ಸ್ವತಂತ್ರವಾಗಿ ವಿದೇಶೀ ಕರೆನ್ಸಿಗಳನ್ನು ಕೊಳ್ಳುವ ಮಾರುವ ಆಸ್ತಿಯನ್ನು ಹೊಂದುವ ವ್ಯವಹಾರಗಳನ್ನು ಸರ್ಕಾರದ ಅಡಚನೆಯಿಲ್ಲದೆ ಮಾಡುತ್ತಿದ್ದರು. ಆದರೆ ಜಾಗತಿಕ ಯುದ್ಧ ಪ್ರಾರಂಭವಾದಾಗ ತುರ್ತು ಪರಿಸ್ಥಿತಿ ಜಾರಿಗೆ ಬಂದಿತು. ಆಗ ಸರ್ಕಾರವು ಮಧ್ಯೆ ಪ್ರವೇಶಿಸಿ ಈ ವಿದೇಶೀ ವ್ಯವಹಾರಗಳಿಗೆ ನಿಯಂತ್ರಣ ಹಾಕಿತು. 03-09-1939 ರಿಂದ ಸಕಾರವು ವಿದೇಶೀ ವಿನಿಮಯದ ನಿಯಂತ್ರಣವನ್ನು ತಂದಿತು. ಈ ಆದೇಶಗಳನ್ನು ಕ್ರಮೇಣ ಶಾಸನ ಬದ್ಧಮಾಡಿ ಕಾಯಿದೆಯ ರೂಪದಲ್ಲಿ ಹೊರಬಂದಿತು. ವಿದೇಶೀ ವಿನಿಮಯ ನಿಯಂತ್ರಣ ಕಾಯಿದೆ, 1947 ಜಾರಿಗೆ ಬಂದಿತು. ಇದು 25-03-1947ರಿಂದ ಜಾರಿಗೆ ತರಲಾಯಿತು. ಅಲ್ಲಿಂದ ಇಂದಿನವರೆಗು ವಿದೇಶೀ ವ್ಯವಹಾರಗಳಿಗೆ ಮುಕ್ತತೆ ಬಂದಿಲ್ಲ. ಅವು ಸರ್ಕಾರದ ನಿಯಂತ್ರಣದಲ್ಲೇ ಇವೆ. ಈ ಕಾಯಿದೆಯಲ್ಲಿ ಕೆಲವು ಲೋಪ-ದೋಷಗಳಿಂದ ವಿದೇಶೀ ಕಂಪನಿಗಳು, ವ್ಯಾಪಾರಸ್ಥರು ಮಾಡುತ್ತಿದ್ದ ದುರುಪಯೋಗಗಳನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಹಾಗು ಜಾರಿ ನಿರ್ಧೇಶನಾಲಯವು ತಮ್ಮ ಅನುಭವದ ಹಿನ್ನೆಲೆಯಲ್ಲಿ ಹೊಸದಾಗಿ ಕಾಯಿದೆಯನ್ನೇ ತರಬೇಕಾಯಿತು. ವಿದೇಶಿ ವಿನಿಮಯ ನಿಯಂತ್ರಣ ಕಾಯಿದೆ, 1973 ಜಾರಿಗೆ ಬಂದಿತು. ಇದರಿಂದಾಗಿ ಹಳೆಯ ಕಾಯಿದೆಯು ರದ್ದಾಯಿತು. ನಂತರ ಭಾರತೀಯ ರಿಸರ್ವ್ ಬ್ಯಾಂಕ್ ವಿದೇಶಿ ವಿನಿಮಯ ಕೈಪಿಡಿಯನ್ನು ಹೊರತಂದಿತು. ಅದು ದೇಶದಲ್ಲಿ ವಿದೇಶಿ ವ್ಯವಹಾರ ಮಾಡುವ ವ್ಯಾಪಾರಸ್ಥರು, ವ್ಯಕ್ತಿಗಳು, ಅನಿವಾಸಿ ಭಾರತೀಯರು, ಸರ್ಕಾರು, ಬ್ಯಾಂಕ್‍ಗಳು ಎಲ್ಲರಿಗೂ ಭಗವದ್ಗೀತೆಯಂತೆ ಅತಿ ಮಹತ್ವದ ಮಾರ್ಗದರ್ಶಿಯಾಯಿತು. 
	ವಿದೇಶೀ ವ್ಯವಹಾರಗಳೆಂದರೆ ಅವು ವ್ಯಾಪಾರದ್ದಾಗಿರಬಹುದು, ವ್ಯಾಪಾರೇತರದ್ದಾಗಿರಬಹುದು. ವಿದೇಶಿ ವ್ಯವಹಾರಗಳನ್ನು ಸ್ಥೂಲವಾಗಿ ಹೀಗೆ ಗುರುತಿಸಬಹುದು. ಇವೆಲ್ಲವುಗಳನ್ನು ರಿಸರ್ವ್ ಬ್ಯಾಂಕ್ ನಿಯಂತ್ರಿಸುತ್ತದೆ.
ಸರಕುಗಳನ್ನು ಕೊಳ್ಳುವ (ಆಮದು) ಹಾಗು ಮಾರುವುದು (ರಫ್ತು).
ಸೇವೆಗಳನ್ನು ನೀಡುವುದು ಮತ್ತು ಪಡೆಯುವುದು.
ಠೇವಣಿಗಳನ್ನು ಸ್ವೀಕರಿಸುವುದು (ವಿವಿಧ ವಿದೇಶಿ ಕರೆನ್ಸಿಗಳಲ್ಲಿ).
ಪ್ರಯಾಣ, ವಿಹಾರ, ತಾತ್ಕಾಲಿಕ ಹಾಗು ಶಾಶ್ವತ ವಿದೇಶ ಗಮನ (ಉದ್ಯೋಗ, ಇತ್ಯಾದಿ).
ಹೂಡಿಕೆಗಳು ವಿದೇಶೀಯರಿಂದ / ಅನಿವಾಸಿ ಭಾರತೀಯರಿಂದ (ವ್ಯಕ್ತಿಗಳು, ಸಂಸ್ಥೆಗಳು)
ಉಡುಗೋರೆಗಳು
ಹವ್ಯಾಸೀ ಖರೀದಿಗಾರರು (ಪುಸ್ತಕಗಳು ಇತ್ಯಾದಿ - ವಿದೇಶದಿಂದ)
ಹೂಡಿಕೆಗಳು ಭಾರತೀಯರಿಂದ ಹೊರದೇಶಗಳಲ್ಲಿ
ವಿದೇಶೀ ಕರೆನ್ಸಿಗಳ ರೂಪಾಯಿಗೆ ಪರಿವರ್ತನೆ.
 ರೂಪಾಯಿದಿಂದ ವಿದೇಶಿ ಕರೆನ್ಸಿಗಳಿಗೆ ಪರಿವರ್ತನೆ ಹೀಗೆ ಮೊದಲಾದ ಕಾರ್ಯ ಚಟುವಟಿಕೆಗಳು.
ಭಾರತದಲ್ಲಿ ಹೆಚ್ಚಿಗೆ ವ್ಯವಹಾರಗಳು ನಡೆಯುತ್ತಿರುವುದು ಸಧ್ಯದಲ್ಲಿ ಅಮೇರಿಕದ ಡಾಲರ್‍ನಲ್ಲಿ. ಅದರ ನಂತರ ಇರುವುದು ಬ್ರಿಟನ್ನಿನ ಸ್ಟರ್ಲಿಂಗ್ ಪೌಂಡ್, ಯುರೋಪಿನ ರಾಷ್ಟ್ರಗಳಲ್ಲಿ ಯುರೋ, ಜಪಾನಿನ ಯೆನ್ ಗಳಲ್ಲಿ ಹೆಚ್ಚಿನ ವ್ಯವಹಾರಗಳು ನಡೆಯುತ್ತಿವೆ. 
ವಿದೇಶಿ ದರ ಪರಿವರ್ತನೆ ಕ್ರಮ :  ಭಾರತೀಯ ರಿಸರ್ವ್ ಬ್ಯಾಂಕ್ ಮಾರುಕಟ್ಟೆಯಲ್ಲಿ ಈ ದರಗಳಿಂದಾದ ಅತಿಯಾದ ಕ್ರಯ ಹಾಗು ವಿಕ್ರಯಗಳನ್ನು ನಿಯಂತ್ರಿಸುತ್ತದೆ. ಇದರಿಂದಾಗಿ ವಿದೇಶಿ ಕರೆನ್ಸಿಗಳ ವಿನಿಮಯ ದರವು ಅತೀವೃಷ್ಟಿ ಅಥವಾ ಅನಾವೃಷ್ಟಿಯಾಗುವುದನ್ನು ತಪ್ಪಿಸುತ್ತದೆ. ಇದರಿಂದಾಗಿ ದೇಶದಲ್ಲಿ ವ್ಯವಹಾರವು ಒಂದು ಸಮತೋಲನದಲ್ಲಿ ನಡೆಯಲು ಸಹಾಯಕವಾಗುತ್ತದೆ. ವಿದೇಶಿ ವಿನಿಮಯ ದರವನ್ನು ನಿರ್ಧರಿಸುವಲ್ಲಿ ಎಲ್ಲರಿಗು ಸ್ವಾತಂತ್ರ್ಯವಿಲ್ಲ.  ಭಾರತೀಯ ರಿಸರ್ವ್ ಬ್ಯಾಂಕ್ ಅದಕ್ಕಾಗಿ ಕೆಲವು ಅಧಿಕೃತ ವ್ಯಕ್ತಿ, ಸಂಸ್ಥೆ, ಬ್ಯಾಂಕ್‍ಗಳಿಗೆ ಅನುಮತಿ ನೀಡಿ ಅವರು ನೇರವಾಗಿ ವಿದೇಶಿ ವಿನಿಮಯ ವ್ಯವಹಾರ ಮಾಡಲು ಅನುಮತಿಯನ್ನು ಇತ್ತಿದೆ. ಇಂತಹವರು ಮಾತ್ರ ವಿನಿಮಯ ದರಗಳನ್ನು ನಿಶ್ಚಯಿಸಿಕೊಳ್ಳಬಹುದು.
ವಿದೇಶೀ ಮಾರುಕಟ್ಟೆಯಲ್ಲಿ ಇವೆಲ್ಲವೂ ಒಂದು ವ್ಯವಸ್ಥಿತ ರೀತಿಯಲ್ಲಿ ಪರಸ್ಪರರ ಸಂಪರ್ಕಗಳಿಂದ ಬಹುತೇಕವಾಗಿ ನಡೆಯುತ್ತವೆ. ಈ ವಿದೇಶಿ ವಿನಿಮಯ ದರಗಳು ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕ, ಬ್ರಿಟನ್, ಯುರೋಪು, ಬೊಂಬಾಯಿ ಮೊದಲಾದೆಡೆಗಳಲ್ಲಿ ಪರಸ್ಪರವಾಗಿ ಬ್ಯಾಂಕುಗಳು ಕೊಡುವ-ಕೊಳ್ಳುವ ದರಗಳನ್ನನುಸರಿಸಿ ನಿರ್ಧರಿತವಾಗುತ್ತವೆ.  ಪ್ರತಿಯೊಂದು ಬ್ಯಾಂಕ್, ಸಂಸ್ಥೆಗಳು ತಮ್ಮದೇ ಆದ ವಿನಿಮಯ ದರ ನಿರ್ಧರಿಸುವ ವಿದ್ಯುನ್ಮಾನ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಅ ಕೇಂದ್ರ ಸ್ಥಳದಲ್ಲಿ ವಿನಿಮಯ ದರವು ಪ್ರತಿ ಕ್ಷಣದಲ್ಲೂ ಏರಿಳಿತವಾಗುತ್ತಿರುತ್ತದೆ (ಇದು ಕೊಳ್ಳುವ-ಮಾರುವ ಬೇಡಿಕೆ, ಪೂರೈಕೆಗಳನ್ನವ ಲಂಬಿಸಿರುತ್ತದೆ. ಈ ಕೇಂದ್ರ ಸ್ಥಳವನ್ನು ದರ ನಿಗದಿಪಡಿಸುವ ಸ್ಥಳ (ಡೀಲಿಂಗ್ ರೂಂ) ಎನ್ನುತ್ತಾರೆ. ನ್ಯೂಯಾರ್ಕ್, ಲಂಡನ್, ಯುರೋ ಹಾಗು ಮುಂಬಯಿಗಳಲ್ಲಿ ಉಂಟಾಗುವ ಬ್ಯಾಂಕುಗಳ ಪರಸ್ಪರರ ಆಹ್ವಾನ ದರಗಳು ಉಳಿದ ವ್ಯವಹಾರ ಚಟುವಟಿಕೆಗಳ ಮೇಲೆ ಪ್ರಭಾವ ಬೀರಿ ವಿನಿಮಯ ದರಗಳು ನಿರ್ಧರಿತವಾಗುತ್ತವೆ.  ಭಾರತೀಯ ರಿಸರ್ವ್ ಬ್ಯಾಂಕ್ ಸತತವಾಗಿ ಇವೆಲ್ಲವುಗಳನ್ನು ಗಮನಿಸುತ್ತ ದೇಶದ ವ್ಯವಹಾರಗಳನ್ನು ನಿರ್ವಹಿಸುವುದು, ನಿಯಂತ್ರಿಸುವುದು ಮಾಡಬೇಕಾಗುತ್ತದೆ. 
ದೇಶದಲ್ಲಿದ್ದ 1973ರ ವಿದೇಶೀ ವಿನಿಮಯ ನಿಯಂತ್ರಣ ಕಾಯಿದೆಯನ್ನು 1999ರ ಆದಿಭಾಗದಲ್ಲಿ ತಿದ್ದುಪಡಿ ಮಾಡಲಾಯಿತು. ಆದರೂ ಜಾಗತೀಕರಣ ಮತ್ತು ಉದಾರೀಕರಣ ನೀತಿಗಳಿಂದ ಈ ಕಾಯಿದೆಯು ಹಲವಾರು ತಾಂತ್ರಿಕ ಕಾರಣಗಳಿಂದ ಅಸಮಂಜಸವಾದುದರಿಂದ ಭಾರತ ಸರ್ಕಾರವು ಇದನ್ನು ರದ್ದುಗೊಳಿಸಿ ಹೊಸ ಸ್ನೇಹಮಯಿ ಕಾಯಿದೆಯನ್ನು ಜಾರಿಗೆ ತಂದಿತು. ವಿದೇಶೀ ವಿನಿಮಯ ನಿರ್ವಹಣಾ ಕಾಯಿದೆ, 1999 21.12.1999ರಂದು ರಾಷ್ಟ್ರಪತಿಗಳಿಂದ ಅಂಕಿತ ಪಡೆದು ಜಾರಿಯಾಗಿ 01-06-2000ದಿಂದ ಕಾರ್ಯಾರಂಭವಾಯಿತು. ಇದು ವಿದೇಶೀ ವ್ಯವಹಾರಗಳಿಗೆ ಒಂದು ಹೊಸ ಆವಿಷ್ಕಾರವಾಗಿ ಬೃಹತ್ ವಹಿವಾಟಿನ ಹೆಬ್ಬಾಗಿಲನ್ನೇ ತೆರೆದಂತಾಯಿತು. ವಿದೇಶೀ ಹಣವು ಭಾರತಕ್ಕೆ ಮಹಾಪೂರವಾಗಿ ಬರತೊಡಗಿತು. ಇದು ಉದಾರೀಕರಣ ಮತ್ತು ಜಾಗತೀಕರಣದ ಫಲವಾಯಿತು. ಹಲವಾರು ಹಳೆಯ ನಿಯಮಾವಳಿಗಳು ನಿಷ್ಕ್ರಿಯವಾಗಿ ನವೀಕರಣಗೊಂಡವು. ಭಾರತದ ಬ್ಯಾಂಕಿಂಗ್, ಕೈಗಾರಿಕೆ, ಸೇವೆಗಳು ಎಲ್ಲ ಕ್ಷೇತ್ರದಲ್ಲೂ ಮಹತ್ತರ ಬದಲಾವಣೆಯಾಯಿತು. ಬಹು ರಾಷ್ಟ್ರೀಯ ಕಂಪನಿಗಳು, ವಿದೇಶೀ ಬ್ಯಾಂಕ್‍ಗಳು, ಹೂಡಿಕೆಗಳು, ವಿದೇಶಿ ಸರಕುಗಳು ಭಾರತದಲ್ಲಿ ಧುಮ್ಮಿಕ್ಕಿ ಬರತೊಡಗಿದವು.
ಆಮದು, ರಫ್ತುಗಳ ಮೇಲಿನ ಕೆಲವು ನಿಯಂತ್ರಣಗಳು:  ಭಾರತೀಯ ರಿಸರ್ವ್ ಬ್ಯಾಂಕ್ ವಿವಿನಿಕಾ (ಅಂದರೆ ವಿದೇಶಿ ವಿನಿಮಯ ನಿಯಂತ್ರಣ ಕಾಯಿದೆ, 1999(ಎಫ್‍ಇಎಂಎ) ಮೂಲಕ ಕೆಲವು ನಿಯಂತ್ರಣಗಳನ್ನು ಮುಂದುವರೆಸಿದೆ. ರಫ್ತು ಹಾಗು ಆಮದುಗಳನ್ನು ಮುಕ್ತವಾಗಿ ಮಾಡುವಂತಿಲ್ಲ. ಈ ದಿಶೆಯಲ್ಲಿ ಸರಕುಗಳ ಆಮದು-ರಫ್ತುಗಳ ವಿಷಯದಲ್ಲಿ ಎಲ್ಲವನ್ನು ನಾಲ್ಕು ಭಾಗವಾಗಿ ಮಾಡಿದೆ.
ಆಮದು ಮತ್ತು ರಫ್ತು ಕಡ್ಡಾಯವಾಗಿ ನಿಷೇಧಿಸಿದ/ಋಣಾತ್ಮಕ ಪಟ್ಟಿಯಲ್ಲಿರುವ ವಸ್ತುಗಳು
ಪೂರ್ವಾನುಮತಿಯಿಲ್ಲದೆ ಆಮದು, ರಫ್ತು ಮಾಡಲಾಗದಂತೆ ನಿರ್ಬಂಧಿತವಾಗಿರುವ  ವಸ್ತುಗಳು
ನಿರ್ದಿಷ್ಟ ಸಂಸ್ಥೆಗಳ ಮೂಲಕವೇ ಆಮದುಮಾಡಬಹುದಾದ ವಸ್ತುಗಳು (ತೈಲ)
ಅನುಮತಿಯ ಅಗತ್ಯವಿಲ್ಲದೆ  ಸ್ವತಂತ್ರವಾಗಿ ಅಮದು, ರಫ್ತುಮಾಡಬಹುದಾದ ವಸ್ತುಗಳು.
ಈ ಭಾಗಗಳಲ್ಲಿ ಬರುವ ಸರಕುಗಳ ಪಟ್ಟಿಯು ಆಗಿಂದಾಗ್ಗೆ ಬದಲಾಗುತ್ತಿರುತ್ತದೆ. ಇದು ದೇಶದ, ವಿದೇಶದ ಹಲವಾರು ನಿಯಮಗಳು, ಪರಿಸ್ಥಿತಿ, ಮೊದಲಾದವುಗಳನ್ನು ಅವಲಂಬಿಸಿರುತ್ತದೆ.  ಇವುಗಳನ್ನು ನೋಡಿಕೊಳ್ಳುವುದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್‍ಗೆ ನೆರವಾಗುವ ಕೇಂದ್ರ ಸರ್ಕಾರದ ಎರಡು ಪ್ರಮುಖ ವಿಭಾಗೀಯ ಕಾರ್ಯಾಲಯಗಳಿವೆ.
		1. ಭಾರತೀಯ ವಿದೇಶಿ ವ್ಯಾಪಾರ ಸಂಸ್ಥೆ.
		2. ಭಾರತೀಯ ರಫ್ತುಗಾರರ ಮಹಾ ಮಂಡಳಿ 
ಇದಲ್ಲದೆ ಇವುಗಳಿಗೆ ಪೂರಕವಾಗಿ ರಫ್ತು ಅಭಿವೃದ್ಧಿ ಮಂಡಳಿಗಳೂ ಇರುತ್ತವೆ. ಒಂದು ವಿಸಿಷ್ಟ ಸರಕಿಗೂ ಒಂದೊಂದು ಮಂಡಳಿಗಳಿವೆ.   31-03-2005 ರಂದು ದೇಶದಲ್ಲಿ ಈ ರೀತಿಯ 24 ಮಂಡಳಿಗಳಿವೆ.  ಇವುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್‍ನ ವಿದೇಶೀ ವಿನಿಮಯ ಕೈಪಿಡಿಯ ಪ್ಯಾರಾ 6ಂ-15(i) ಕಾಣಬಹುದು.
ಅನಿವಾಸಿ ಭಾರತೀಯರ ಠೇವಣಿಗಳು, ಹಣರವಾನೆಗಳು : ಭಾರತೀಯ ನಾಗರೀಕನಾಗಿದ್ದು ಉದ್ಯೋಗ, ಸರ್ಕಾರಿ ಕೆಲಸ ಮೊದಲಾದವುಗಳ ಕಾರಣದಿಂದ ವಿದೇಶದಲ್ಲಿ ನೆಲಸ ಹೋಗುವವರಿಗೆ ಅನುಮತಿ, ರಹದಾರಿ ಪತ್ರ ನೀಡುವ ಬೇರೆ ಸಂಸ್ಥೆಗಳು, ವಿಭಾಗಗಳು ಕ್ರಮ ಕೈಗೊಳ್ಳುತ್ತವೆ. ಯಾರು ಅನಿವಾಸಿ ಭಾರತೀಯ ಎನ್ನುವುದಕ್ಕೆ ಎರಡು ವ್ಯಾಖ್ಯೆಗಳಿವೆ. 
1. ವಿವಿನಿಕಾ ಪ್ರಕಾರ ಈ ಕೆಳಗಿನವರು ಅನಿವಾಸಿ ಭಾರತೀಯರಾಗುತ್ತಾರೆ. 
	ವಿದೇಶದಲ್ಲಿ ನೆಲೆಸುವವರ ಉದ್ಧೇಶವು ಬಹುಮುಖ್ಯವಾದುದು. ಅದು ವಿಶ್ವಸಂಸ್ಥೆ, ಬಹುರಾಷ್ಟ್ರೀಯ ಕಂಪನಿಗಳಲ್ಲಿ, ಉದ್ಯೋಗವಾಗಬಹುದು ಅಥವಾ ಕೇಂದ್ರ /ರಾಜ್ಯ ಸರ್ಕಾರಗಳಿಂದ ನೇಮಕಗೊಂಡಿದ್ದಿರಬಹುದು. ದೀರ್ಘಾವಧಿ ಅಥವಾ ಅನಿರ್ದಿಷ್ಟ ಕಾಲ ವಿದೇಶದಲ್ಲಿ ನೆಲೆಸುವುದು ಇವೆಲ್ಲವೂ ಅನಿವಾಸಿ ಭಾರತೀಯನಾಗುವವನ ಲಕ್ಷಣಗಳು. 
ಆದಾಯ ತೆರಿಗೆ ಕಾಯಿದೆಯ ಪ್ರಕಾರ ಭಾರತೀಯರು ಎಷ್ಟು ಕಾಲ ಭಾರತದಲ್ಲಿ ನೆಲೆಸಿರುತ್ತಾರೆಂಬುದರ ಮೇಲೆ ಅವರ ಅನಿವಾಸಿ ಸ್ಥಿತಿ ನಿರ್ಧರಿತವಾಗುತ್ತದೆ. ಹಣಕಾಸಿನ ವರ್ಷದಲ್ಲಿ 182 ದಿನಗಳಿಗಿಂತ ಹೆಚ್ಚಾಗಿ ಯಾರಾದರೂ ಭಾರತದಲ್ಲೇ ವಾಸವಾಗಿದ್ದಲ್ಲಿ ಅವರು ನಿವಾಸಿ ಭಾರತೀಯರು ಅನಿವಾಸಿಗಳಲ್ಲ ಎಂದು ಈ ಕಾಯಿದೆಯು ಹೇಳುತ್ತದೆ.
ಅನಿವಾಸಿಗಳ ಠೇವಣಿಗಳ ಸ್ಥಿತಿಗತಿಗಳು: ಅನಿವಾಸಿ ಭಾರತೀಯರು ಭಾರತದಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಇದರಲ್ಲಿ ಎರಡು ವಿಧಗಳಿವೆ. ಅನಿವಾಸಿ ಖಾತೆಗಳು(ಮತ್ತು ಅನಿವಾಸಿ ಸಾಧಾರಣ ಖಾತೆಗಳು. ಈ ಅನಿವಾಸಿ ಖಾತೆಗಳಲ್ಲಿ ಎರಡು ವಿಧವಿದೆ. 1) ವಿದೇಶಿ ಕರೆನ್ಸಿ ಖಾತೆ 2) ರೂಪಾಯಿಗೆ ಪರಿವರ್ತಿತವಾದ ಖಾತೆ. ವಿದೇಶಿ ಕರೆನ್ಸಿ ಖಾತೆಯ ಹಣವನ್ನು ಸಾವಧಿ ಠೇವಣಿಯಲ್ಲಿಡಬಹುದು. ಅ ಹಣವನ್ನು ಅವಧಿ ಮುಗಿದ ಮೇಲೆ ಅದೇ ಕರೆನ್ಸಿಯಲ್ಲೇ ಹಿಂಪಡೆಯಬಹುದು ಅಥವಾ ಆಗ ಅದನ್ನು ರೂಪಾಯಿಗೆ ಪರಿವರ್ತಿಸಿಕೊಳ್ಳಬಹುದು. ಅಥವಾ ಅದನ್ನು ತಾನಿರುವ ದೇಶಕ್ಕೋ ಅಥವಾ ಬೇರೆ ಉದ್ದೇಶಕ್ಕೋ ಹಿಂದಕ್ಕೆ ತರಿಸಿಕೊಳ್ಳಬಹುದು. ಅದಕ್ಕೆ ಪ್ರತ್ಯಾವರ್ತನ ಅಥವಾ ಪುನರಾಗತ ಎನ್ನುತ್ತಾರೆ. ಇದರಲ್ಲಿ ಕಾಲಾನುಗತವಾಗಿ ಹಲವಾರು ತಿದ್ದುಪಡಿಗಳು, ನಿಯಮಗಳ ಸಡಿಲತೆ ನಡೆದಿದೆ. ಉದಾಹರಣೆಗೆ ರೂಪಾಯಿಗೆ ಪರಿವರ್ತಿತವಾಗಿ ಇಟ್ಟ ಅನಿವಾಸಿ ಪುನರಾಗತ ರಹಿತ ಠೇವಣಿ. ಠೇವಣಿಯ ಬಡ್ಡಿಯನ್ನು ಪುನರಾಗತ ಮಾಡಬಹುದೆಂಬ ಭಾರತೀಯ ರಿಸರ್ವ್ ಬ್ಯಾಂಕ್‍ನ ಅದೇಶ ಬಂದಿದೆ. (ನೋಡಿ : ಅನಿವಾಸಿ ಠೇವಣಿಗಳು)
ಭಾರತೀಯ ರಫ್ತುದಾರರು ಮತ್ತು ಆಮದುದಾರರಿಗೆ ಹಲವಾರು ರೀತಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ತನ್ನಲ್ಲಿ ವಿದೇಶಿ ವಿನಿಮಯ ವ್ಯಾಪಾರಕ್ಕೆ ಅನುಮತಿ ಪಡೆದ ಬ್ಯಾಂಕುಗಳು ಮತ್ತು ಸಂಸ್ಥೆಗಳ ಮೂಲಕ ಸೂಚನೆಗಳನ್ನು, ನಿಯಮಗಳನ್ನು, ಪ್ರೋತ್ಸಾಹ ಮೊದಲಾದ ಕ್ರಮಗಳನ್ನು ತಿಳಿಸುತ್ತ ಪ್ರತ್ಯಕ್ಷ ಹಾಗು ಪರೋಕ್ಷವಾಗಿ ನಿಯಂತ್ರಿಸುತ್ತದೆ. ಇದರ ವಿವರಣೆಗೆ ಆಯಾಯ ಬ್ಯಾಂಕಿನ ಕೈಪಿಡಿಗಳು, ಭಾರತೀಯ ರಿಸರ್ವ್ ಬ್ಯಾಂಕ್ ವಿದೇಶಿ ವಿನಿಮಯ ಕೈಪಿಡಿ, ವಿವಿನಿಕಾ ಮೊದಲಾದ ಮಾರ್ಗದರ್ಶಿಗಳನ್ನು ಪರಿಶೀಲಿಸಬಹುದು. ಇದಲ್ಲದೆ ಹಲವಾರು ಮಂಡಳಿಗಳು, ಸಲಹಾ ಸಂಸ್ಥೆಗಳು ದೇಶದಾದ್ಯಂತ ಕಾರ್ಯ ನಿರ್ವಹಿಸುತ್ತಿವೆ. ಇತ್ತೀಚೆಗೆ ವಿದ್ಯುನ್ಮಾನ ತಾಂತ್ರಿಕ  ಪ್ರಗತಿಯಿಂದಾಗಿ ರಿಸರ್ವ್ ಬ್ಯಾಂಕಿನ, ಬ್ಯಾಂಕುಗಳ, ಸಂಸ್ಥೆಗಳ ಹಾಗು ಸರ್ಕಾರದ ಅನೇಕ ಅಂತರ್ಜಾಲ ತಾಣಗಳು (ವೆಬ್ ಸೈಟುಗಳು) ಎಲ್ಲ ರೀತಿಯ ಮಾಹಿತಿಗಳನ್ನು ಒದಗಿಸುತ್ತಿವೆ. ಆಯಾಯ ಸಂಬಂಧಿತ ವಿಷಯಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಅನೇಕ ಅಂತರ್ಜಾಲ ತಾಣಗಳ ವಿಳಾಸವನ್ನು ಈ ಕೊನೆಗೆ ನೀಡಿದೆ. ಅವುಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ಆಯಾಯ ಬ್ಯಾಂಕುಗಳ, ಸಂಸ್ಥೆಗಳ, ರಿಸರ್ವ್ ಬ್ಯಾಂಕಿನ ಸಂಪರ್ಕಾಧಿಕಾರಿಗಳನ್ನು ಭೇಟಿಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.
1).  ಚಿಟಠಿಚಿಟಿಚಿಞiಟಟಚಿತಿಚಿಟಚಿ@ಡಿbi.oಡಿg.iಟಿ  2).  heಟಠಿಠಿಡಿಜ@ಡಿbi.oಡಿg.iಟಿ ಭಾರತೀಯ ರಿಸರ್ವ್ ಬ್ಯಾಂಕ್ ವಿವಿಧ ವಿಭಾಗಗಳು ಮತ್ತು ಅಂತರ್ಜಾಲ ವಿಳಾಸಗಳು :
ಹಣಕಾಸಿನ ಮಸೂದೆ ವಿಭಾಗ 
heಟಠಿmಠಿಜ@ಡಿbi.oಡಿg.iಟಿ 

ಕರೆನ್ಸಿ ನಿರ್ವಹಣಾ ವಿಭಾಗ
heಟಠಿಜಛಿm@ಡಿbi.oಡಿg.iಟಿ 

ಹೊರ ಹೂಡಿಕೆಗಳು ಮತ್ತು ನಿರ್ವಹಣೆಯ ವಿಭಾಗ
heಟಠಿಜeio@ಡಿbi.oಡಿg.iಟಿ 

ಬ್ಯಾಂಕಿಂಗ್ ವ್ಯವಹಾರಗಳು ಮತ್ತು ಅಭಿವೃದ್ಧಿ ವಿಭಾಗ 
heಟಠಿಜboಜ@ಡಿbi.oಡಿg.iಟಿ 

ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ವಿಭಾಗ 
heಟಠಿಜಟಿbs@ಡಿbi.oಡಿg.iಟಿ 

ಆರ್ಥಿಕ ವಿಶ್ಲೇಷಣೆ ಮತ್ತು ಮಸೂದೆಗಳ ವಿಭಾಗ
heಟಠಿಜeಚಿಠಿ@ಡಿbi.oಡಿg.iಟಿ 

ಗ್ರಾಮೀಣ ಅಭಿವೃದ್ಧಿ ಮತ್ತು  ಋಣ ವಿಭಾಗ 
heಟಠಿಡಿಠಿಛಿಜ@ಡಿbi.oಡಿg.iಟಿ 

ಸಾಂಖ್ಯಿಕ ವಿಶ್ಲೇಷಣೆ ಮತ್ತು ಕಂಪ್ಯೂಟರ್ ವಿಭಾಗ 
heಟಠಿಜesಚಿಛಿs@ಡಿbi.oಡಿg.iಟಿ 

ಆಂತರಿಕ ಸಾಲ ನಿರ್ವಹಣಾ ವಿಭಾಗ 
heಟಠಿiಜmಜ@ಡಿbi.oಡಿg.iಟಿ 

ವಿದೇಶೀ ವಿನಿಮಯ ವಿಭಾಗ 
heಟಠಿಜಿeಜ@ಡಿbi.oಡಿg.iಟಿ 

ಸರಕು ಮತ್ತು ಸೇವೆಗಳ ರಫ್ತು ವಿಭಾಗ 
ಣಡಿಚಿಜeಜivisioಟಿexಠಿoಡಿಣ@ಡಿbi.oಡಿg.iಟಿ 

ಸರಕುಗಳ ಆಮದು 
ಣಡಿಚಿಜeಜivisioಟಿimಠಿoಡಿಣ@ಡಿbi.oಡಿg.iಟಿ 

ಅನಿವಾಸಿಗಳ ಖಾತೆಗಳು  
ಜಿeಜಛಿoಟಿಡಿಜಿಚಿಜ@ಡಿbi.oಡಿg.iಟಿ 

ವಿದೇಶದಲ್ಲಿ ಭಾರತದ ಹೂಡಿಕೆಗಳು 
oiಜ@ಡಿbi.oಡಿg.iಟಿ 

ವಿದೇಶೀ ಹೂಡಿಕೆಗಳು ಭಾರತದಲ್ಲಿ  
ಜಿeಜಛಿoಜಿiಜ@ಡಿbi.oಡಿg.iಟಿ 

ಅನಿವಾಸಿ ಭಾರತೀಯರಿಂದ ಭಾರತದಲ್ಲಿ ಹೂಡಿಕೆ 
ಜಿeಜಛಿoಜಿiಜ@ಡಿbi.oಡಿg.iಟಿ 

ವಿದೇಶೀ ವಾಣಿಜ್ಯ ಸಾಲಗಳು  
ಜಿeಜಛಿoeಛಿbಜ@ಡಿbi.oಡಿg.iಟಿ 

ಭಾರತದಿಂದ ಇತರ ಕಾರಣಗಳಿಗೆ ಹಣ ರವಾನೆ  
ಜಿeಜಛಿoeಠಿಜ@ಡಿbi.oಡಿg.iಟಿ 

ವಿದೇಶಿ ಮಾರುಕಟ್ಟೆ ಸಂಬಂಧಿತ ವಿಷಯಗಳು  
eಛಿಜಛಿoಜಿmಜ@ಡಿbi.oಡಿg.iಟಿ 

ಸಾಂಖ್ಯಿಕ ವಿವರಣಾ ಪಟ್ಟಿಗಳು
ಜಿeಜಛಿoಛಿsಜ@ಡಿbi.oಡಿg.iಟಿ 

ಅಧಿಕೃತ ವ್ಯವಹಾರಿಗಳ ಲೆಕ್ಕ ಪರಿಶೋಧನೆ ಮತ್ತು ಪರಿವೀಕ್ಷಣೆ. 
ಜಿeಜಛಿoಛಿiಜ@ಡಿbi.oಡಿg.iಟಿ 

ಉಳಿದ ಎಲ್ಲ ಇತರ ವಿಷಯಗಳು  
ಜಿeಜಛಿoಠಿಛಿಜ@ಡಿbi.oಡಿg.iಟಿ 

ಬ್ಯಾಂಕಿಂಗ್ ಮೇಲುಸ್ತುವಾರಿ ವಿಭಾಗ  
heಟಠಿಜbs@ಡಿbi.oಡಿg.iಟಿ 

ಮೇಲಿನವುಗಳಿಗೆ ಸಹಾಯಕ ವಿಭಾಗಗಳು :   
ಪರಿವೀಕ್ಷಣೆ ವಿಭಾಗ  
heಟಠಿiಟಿsಠಿeಛಿಣioಟಿ@ಡಿbi.oಡಿg.iಟಿ 

ವೆಚ್ಚ ವಿಭಾಗ ಮತ್ತು ಮುಂಗಡಪತ್ರ ನಿಯಂತ್ರಣ 
heಟಠಿಜebಛಿ@ಡಿbi.oಡಿg.iಟಿ 

ಮಾಹಿತಿ ತಂತ್ರಜ್ಞಾನ ವಿಭಾಗ  
heಟಠಿಜiಣ@ಡಿbi.oಡಿg.iಟಿ 

ಪಾವತಿ ವಿಭಾಗ ಮತ್ತು ಫೈಸಲಾವಣೆ (ಚುಕ್ತಾವಣೆ) ಪದ್ಧತಿ 
heಟಠಿಜಠಿss@ಡಿbi.oಡಿg.iಟಿ 

ಸರ್ಕಾರಿ ವಿಭಾಗ ಮತ್ತು ಬ್ಯಾಂಕ್ ಖಾತೆಗಳು 
heಟಠಿಜgbಚಿ@ಡಿbi.oಡಿg.iಟಿ 

ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ವಿಭಾಗ 
heಟಠಿhಡಿಜಜ@ಡಿbi.oಡಿg.iಟಿ 

ಆಡಳಿತ ವಿಭಾಗ ಮತ್ತು ಸಿಬ್ಬಂದಿ ಮೇಲ್ವಿಚಾರಣೆ 
heಟಠಿಜಚಿಠಿm@ಡಿbi.oಡಿg.iಟಿ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ